ಲೋಕದರ್ಶನ ವರದಿ
ಅಥಣಿ 23: ಅತೀ ಶೀಘ್ರದಲ್ಲಿಯೇ ಅಥಣಿ ಪಟ್ಟಣದಲ್ಲಿ ಆರ್.ಟಿ.ಒ ಕಛೇರಿಯನ್ನು ಪ್ರಾರಂಭಿಸಲಾಗುವುದು. ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ವಾಹನ ನೊಂದಣಿಗಾಗಿ ಅಥಣಿ ತಾಲೂಕಿನ ಜನ ಚಿಕ್ಕೋಡಿಗೆ ತೆರಳಬೇಕಿತ್ತು ಇದರಿಂದ ಅಥಣಿ ತಾಲೂಕಿನ ಕಟ್ಟಡೆಯ ಗ್ರಾಮದ ಗ್ರಾಮಸ್ಥರಿಗೆ ಸುಮಾರು 110 ಕಿ.ಮಿ ದೂರ ಹೋಗಿ ನೊಂದಣಿ ಮಾಡಿಸಿಕೊಂಡು ಬರುವುದು ಕಷ್ಟಕರವಾಗುತ್ತಿತ್ತು ಇದನ್ನೇ ಗಮನಿಸಿ ಅಥಣಿ, ಕಾಗವಾಡ ತಾಲೂಕು ಹಾಗೂ ರಾಯಬಾಗ ತಾಲೂಕುಗಳ ವ್ಯಾಪ್ತಿಯನ್ನು ಈ ಕಛೇರಿ ಒಳಗೊಂಡಿದೆ ಎಂದು ಹೇಳಿದರು.
ಅಥಣಿಯ ಆರ್.ಟಿ.ಒ ಕಛೇರಿ ರಾಯಬಾಗ ತಾಲೂಕಿನವರಿಗೆ ಸ್ವಲ್ಪ ದೂರವಾಗುತ್ತದೆ ಹೀಗಾಗಿ ರಾಯಬಾಗ ತಾಲೂಕಿನವರಿಗೆ ಚಿಕ್ಕೋಡಿ ಮತ್ತು ಅಥಣಿ ಈ ಎರಡೂ ಕಛೇರಿಗಳಲ್ಲಿ ವಾಹನ ನೊಂದಣಿಗೆ ಅವಕಾಶ ಒದಗಿಸುವುದಾಗಿ ಹೇಳಿದರು. ನಮ್ಮ ರಾಜ್ಯದ ತೆರಿಗೆ ಪ್ರಮಾಣ ಹೆಚ್ಚಾಗುತ್ತಿದ್ದು. ಇದರಿಂದ ಇಲ್ಲಿಯ ವಾಹನ ಸವಾರರು ಇಲ್ಲಿಗಿಂತ ಕಡಿಮೆ ತೆರಿಗೆ ಇರುವ ಪಾಂಡಿಚೇರಿ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿ ವಾಹನ ನೊಂದಣಿ ಮಾಡಿಕೊಂಡು ಬರುತ್ತಿದ್ದಾರೆ ಹೀಗಾಗಿ ಆ ವಾಹನಗಳ ತೆರಿಗೆ ನಮ್ಮ ರಾಜ್ಯಕ್ಕೆ ಬರುತ್ತಿಲ್ಲ ಎಂದ ಅವರು ಇಡೀ ದೇಶಕ್ಕೆ ಒಂದೇ ತೆರಿಗೆ ಎನ್ನುವ ಯೋಜನೆಯನ್ನು ಕೇಂದ್ರ ಈಗಾಗಲೇ ಜಾರಿಗೆ ತಂದಿದ್ದು. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಚಿಂತನೆ ನಡೆದಿದ್ದು, ಇದರಿಂದ ಬೇರೆ ರಾಜ್ಯಗಳಿಗೆ ಹಂಚಿ ಹೋಗುತ್ತಿದ್ದ ತೆರಿಗೆ ನಮ್ಮ ರಾಜ್ಯದಲ್ಲಿಯೇ ಉಳಿಯಲಿದೆ ಎಂದು ಹೇಳಿದರು.
ಅನೇಕ ವರ್ಷಗಳಿಂದ ಜನರ ಬೇಡಿಕೆಯಂತೆ ಅಥಣಿ ಸಮೀಪದ ಕೊಕಟನೂರ ಹತ್ತಿರ 100 ಎಕರೆ ಪ್ರದೇಶದಲ್ಲಿ ಕೃಷಿ ಮಹಾವಿದ್ಯಾಲಯ ಪ್ರಾರಂಭಿಸುವ ಯೋಜನೆಗೆ ಒಪ್ಪಿಗೆ ದೊರಕಿದೆ. ಈ ನಿಟ್ಟಿನಲ್ಲಿ 100 ಎಕರೆ ಪ್ರದೇಶವನ್ನು ಕೃಷಿ ಮಹಾವಿದ್ಯಾಲಯದ ಹೆಸರಿಗೆ ವಗರ್ಾವಣೆಯಾಗಿದೆ. ಮುಂಬರುವ ಕೆಲವೇ ತಿಂಗಳಲ್ಲಿ ಆಡಳಿತಾತ್ಮಕ ಮತ್ತು ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಲಿದೆ ಎಂದರು.
ಹಿಂದಿನ ಹಿಜೆಪಿ ಸರಕಾದ ಅವಧಿಯಲ್ಲಿ ಮಂಜೂರಾಗಿದ್ದ ಭಾವುರಾವ್ ದೇಶಪಾಂಡೆ ಪಶುವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಮುಂಬರುವ ವರ್ಷದಲ್ಲಿ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ತಾವು ಅಧಿಕಾರ ವಹಿಸಿಕೊಂಡ ನಂತರದಿಂದ ಮಹಾರಾಷ್ಟ್ರ ಹಾಗೂ ರಾಜ್ಯದ ಉಪಚುನಾವಣೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೆ ಹೀಗಾಗಿ ಸ್ಥಳೀಯ ಆಡಳಿತದಲ್ಲಿ ಸ್ವಲ್ಪ ಮಟ್ಟಿಗೆ ನಿರ್ಲಕ್ಷವೂ ಆಗಿತ್ತು ಹೀಗಾಗಿ ಇಂದು ನಾನು ಯಾವುದೇ ಮುನ್ಸೂಚನೆ ಇಲ್ಲದೆಯೇ 10.30 ಕ್ಕೆನತಾಲೂಕಾ ದಂಡಾಧಿಕಾರಿಗಳ ಕಛೇರಿಗೆ ತೆರಳಿ ಪರಿಶೀಲಿಸಿದಾಗ 17 ಜನ ಅಧಿಕಾರಿಗಳು ಗೈರಾಗಿದ್ದರು. ಅಂತಹ ಅಧಿಕಾರಿಗಳ ಮೇಲೆ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ ಅವರು ಮುಂದೆಯೂ ಸಹ ಆಡಳಿತಕ್ಕೆ ಚುರುಕು ಮುಟ್ಟಿಸುವ ದೃಷ್ಟಿಯಿಂದ ಯಾವುದೇ ಮುನ್ಸೂಚನೆ ಇಲ್ಲದೇ ಭೇಟಿ ನೀಡುವುದಾಗಿ ಹೇಳಿದರು.
ಅಥಣಿ ಪಟ್ಟಣದ ಜೋಡು ಕರೆ ಅಭಿವೃದ್ಧಿಗಾಗಿ ಯೋಜನೆಯೊಂದು ಸಿದ್ಧವಾಗಿದ್ದು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.