ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಕ್ಕೆ ಸವದಿ ಆಗ್ರಹ

Savadi demands separate hostel for Jain community students

ಅಥಣಿ 10: ಅಲ್ಪ ಸಂಖ್ಯಾತ ಜೈನ ಸಮುದಾಯದ ವಿದ್ಯಾರ್ಥಿಗಳು ಸಾತ್ವಿಕ  ಮತ್ತು ಸಸ್ಯಾಹಾರಿಗಳಾಗಿದ್ದರಿಂದ ಸದ್ಯಕ್ಕಿರುವ ಅಲ್ಪ ಸಂಖ್ಯಾತ ವಸತಿ ನಿಲಯಗಳಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿದ್ದು, ಪ್ರತ್ಯೇಕ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು ಎಂದು  ಶಾಸಕರಾದ ಲಕ್ಷ್ಮಣ ಸವದಿ ಈಗಾಗಲೇ ಅಧಿವೇಶನದಲ್ಲಿ ಅಲ್ಪ ಸಂಖ್ಯಾತ ಇಲಾಖೆಯನ್ನು ಆಗ್ರಹಿಸಿದ್ದಾರೆ ಎಂದು ಯುವ ಧುರೀಣ ಚಿದಾನಂದ ಸವದಿ ಹೇಳಿದರು.          

ಅವರು ಅಥಣಿಯಲ್ಲಿ ಮಹಾವೀರ ಜಯಂತಿ ಅಂಗವಾಗಿ  ಸ್ಥಳೀಯ ಜೈನ್ ಸಮುದಾಯ ಆಯೋಜಿಸಿದ್ದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಶಾಸಕ ಲಕ್ಷ್ಮಣ ಸವದಿಯವರು ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕೂಡ ಸರಜಕಾರವನ್ನು ಆಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಮೇಲೆ ಮತ್ತಷ್ಟು ಒತ್ತಡ ತರುವ ಮೂಲಕ ನಿಗಮ ಸ್ಥಾಪನೆಗೆ ಕೈ ಜೋಡಿಸುವುದಾಗಿ ಹೇಳಿದರು.        

ಹಿರಿಯ ನ್ಯಾಯವಾದಿ ಕೆ.ಎ.ವಣಜೋಳ ಮಾತನಾಡಿ, ಭಗವಾನ ಮಹಾವೀರರು ಬೋಧಿಸಿದ ಅಹಿಂಸಾ ತತ್ವ ಕೇವಲ ಜೈನ್ ಸಮುದಾಯಕ್ಕೆ ಅಷ್ಟೇ ಅಲ್ಲ ಇಡೀ ಮಾನವ ಕುಲಕ್ಕೆ ಪ್ರಸ್ತುತವಾಗಿದೆ ಎಂದ ಅವರು ಸ್ಥಳೀಯ ಶಾಸಕರಾದ ಲಕ್ಷ್ಮಣ ಸವದಿಯವರು ಜೈನ್ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ತರುವ ಮೂಲಕ ಜೈನ್ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.      

ಶೋಭಾ ಯಾತ್ರೆಯಲ್ಲಿ  ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಧುರೀಣರಾದ ಗಜಾನನ ಮಂಗಸೂಳಿ, ದರೇಪ್ಪ ಠಕ್ಕನ್ನವರ,  ರಾವಸಾಬ ಐಹೋಳೆ, ಅರಣ ಯಲಗುದ್ರಿ, ನಿತಿನ ಗೊಂಗಡಿ, ಅಮರ ದುರ್ಗನ್ನವರ, ಸುನೀಲ ಪಡನಾಡ, ರಾಜು ಕಪೂರಶೆಟ್ಟಿ, ಚಂದ್ರಕಾಂತ ಗೊಂಘಡಿ, ಅಶೋಕ ರೋಟ್ಟಿ, ಸಂತೋಷ ಬಮ್ಮನ್ನವರ,ಶೀತಲ ಪಡನಾಡ, ಗುಂಡು ಈಜಾರೆ, ಲೇಲಿನ್, ಭರತೇಶ ಕಾಸಾರ,ವಿದ್ಯಾದರ ಡುಮ್ಮನ್ನವರ, ಭಾಹುಬಲಿ ಕಡೋಲಿ, ರಮೇಶ ಬಾಳಿಕಾಯಿ, ಬಾಹುಬಲಿ ಗುಣವಂತಗೋಳ, ಹಾಗೂ ಶ್ರಾವಕ ,ಮತ್ತು ಶ್ರಾವಕಿಯರು, ಜೈನ ಸಮುದಾಯದ ಮುಖಂಡರು ಹಿರಿಯರು ಅನೇಕರು ಉಪಸ್ಥಿತರಿದ್ದರು.