ನಾಲ್ಕು ದಶಕಗಳ ನಂತರ ಸವದತ್ತಿ ಗ್ರಾಮದೇವಿಯ ಮಹೋತ್ಸವ
Savadatti Grama Devi's Mahotsav after four decades
ಸವದತ್ತಿ 25 : : ಆರಾಧ್ಯ ದೈವ ಶ್ರೀ ಗ್ರಾಮದೇವಿಯ ಜಾತ್ರಾ ಮಹೋತ್ಸವವು ಬರೋಬ್ಬರಿ ನಾಲ್ಕು ದಶಕಗಳ ನಂತರ ಮರುಜೀವ ಪಡೆದಿದೆ. ಮೇ 4 ರಿಂದ 12 ರವರೆಗೆ ನಡೆಯಲಿರುವ ಈ ಐತಿಹಾಸಿಕ ಸಂಭ್ರಮಕ್ಕೆ ’ಕಾಯಿ ಕಟ್ಟುವ ಸಂಪ್ರದಾಯದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೊನೆಯ ಬಾರಿಗೆ ಈ ಜಾತ್ರೆ ನಡೆದ ಸುಮಾರು 44 ವರ್ಷಗಳ ಹಿಂದೆ. ಈಗಿನ ತಲೆಮಾರಿಗೆ ಇದು ಅಪರೂಪದ ಹಾಗೂ ಭಕ್ತಿಪೂರ್ವಕ ಅನುಭವವಾಗಿದೆ.
ಊರಿನ ಹಿರಿಯರು, ಧರ್ಮದರ್ಶಿಗಳು ಹಾಗೂ ರೈತ ಬಾಂಧವರು ಒಗ್ಗೂಡಿ ಶಾಸ್ತ್ರೋಕ್ತವಾಗಿ ಕಾಯಿ ಕಟ್ಟುವ ಮೂಲಕ ಸಕಲ ವಿಧಿವಿಧಾನಗಳಿಗೆ ನಾಂದಿ ಹಾಡಿದ್ದಾರೆ. ಮೇ 4 ರಿಂದ ಮೇ 12, ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಈ ಜಾತ್ರೆಯು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಇದು ಸವದತ್ತಿಯ ಸೌಹಾರ್ದತೆ ಮತ್ತು ಸಾಂಪ್ರದಾಯಿಕ ವೈಭವದ ಪ್ರತೀಕವಾಗಿದೆ. ದೇವಸ್ಥಾನಕ್ಕೆ ವಿಶೇಷ ಅಲಂಕಾರ ಹಾಗೂ ಭಕ್ತಾದಿಗಳಿಗೆ ಸಕಲ ಸೌಲಭ್ಯಗಳ ತಯಾರಿ ಈಗಾಗಲೇ ಶುರುವಾಗಿದೆ.
ರೈತರು ಮತ್ತು ಹಿರಿಯರು ಮುಂಚೂಣಿಯಲ್ಲಿ ನಿಂತು ಈ ಕಾರ್ಯಕ್ರಮ ನಡೆಸುತ್ತಿರುವುದು ಜಾತ್ರೆಯ ದಿನಗಳಲ್ಲಿ ಬಯಲಾಟ, ನಾಟಕ ಹಾಗೂ ಜಾನಪದ ಕಲೆಗಳ ಪ್ರದರ್ಶನ ಜರುಗುವುದು. ಈ ಜಾತ್ರೆಯು ಊರಿನ ಸುಭಿಕ್ಷೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುವ ದೊಡ್ಡ ಸಂಕಲ್ಪವಾಗಿದೆ. 44 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಸವದತ್ತಿ ಜನತೆ ಸಂಭ್ರಮದ ಅಲೆಯಲ್ಲಿ ತೇಲಲು ಸಜ್ಜಾಗಿದ್ದಾರೆ.ಈ ಸಂದರ್ಭದಲ್ಲಿ ಶಾಸಕ ವಿಶ್ವಾಸ ವೈದ್ಯ, ಅಶ್ವಥ್ ವೈದ್ಯ, ವಿರೂಪಾಕ್ಷ ಮಾಮನಿ, ಶಿವಾನಂದ ಹೂಗಾರ, ಬಸವರಾಜ ಪುಟ್ಟಿ,ಮಲ್ಲಿಕಾರ್ಜುನ ಬೀಳಗಿ,ಕುಲಕರ್ಣಿ, ಹಾಗೂ ಊರಿನ ಮುಖಂಡರು, ರೈತರು, ಉಪಸ್ಥಿತರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 