ಕೊರೊನಾ ನಿವಾರಣೆಗಾಗಿ ಸತ್ಯನಾರಾಯಣ ಸ್ವಾಮಿ ಪೂಜೆ

ಲೋಕದರ್ಶನವರದಿ

ರಾಣೆಬೆನ್ನೂರ. ಜು.02: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷಭಟ್ ಪೂಜಾರ ಅವರು ಬುಧವಾರ ಸಂಜೆ ಗ್ರಾಮದ ತಮ್ಮ ಗೃಹಸಭಾ ಆವರಣದಲ್ಲಿ ದೇಶದಲ್ಲಿ ಹರಡಿರುವ ಕೊರೊನಾ ವೈರಸ್ ಸೋಂಕು ಮಹಾಮಾರಿ ರೋಗ ನಿವಾರಣೆಗಾಗಿ ತಮ್ಮ ಸಂಕಲ್ಪ ಸಿದ್ಧಿಯ ನಿಮಿತ್ತ ಆಶಾಢ ಮಾಸದ ಏಕಾದಶಿ ಪ್ರಯುಕ್ತ ಸತ್ಯನಾರಾಯಣ ಪೂಜಾ ಕೈಂಕರ್ಯವು ನೆರವೇರಿಸಿದರು.  ಈ ಸಂದರ್ಭದಲ್ಲಿ ಹಿರಿಯ ಅರ್ಚಕರಾದ ಮಾಲತೇಶ್ ಭಟ್ ಪೂಜಾರ, ರಾಜು ಮಾಲದಾರ,  ಪ್ರಣವ್ ಪೂಜಾರ, ಸಂಜೀವ ಕುಲಕಣರ್ಿ, ಶ್ರೀರಕ್ಷಾ ಪೂಜಾರ, ಹರೀಶ್ ಅಪ್ಪಣ್ಣನವರ, ವನಿತಾ ಸಂತೋಷಭಟ್ ಪೂಜಾರ ಸೇರಿದಂತೆ ಮತ್ತಿತರ ಗಣ್ಯರು, ಮಾಧ್ಯಮ ಸಮುದಾಯದ ವಾರಿಯರ್ಸ್ಗಳು ಪಾಲ್ಗೊಂಡಿದ್ದರು.