ಕೊಚ್ಚಿ, 26 ಭೂಮಾತಾ ಬ್ರಿಗೇಡ್ ಸಂಸ್ಥಾಪಕ ಮತ್ತು ಕಾರ್ಯಕತರ್ೆ ತೃಪ್ತಿ ದೇಸಾಯಿ ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಲು ಸಜ್ಜಾಗಿದ್ದು, ಮಂಗಳವಾರ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೃಪ್ತಿಮ, ಸುಪ್ರೀಂಕೋಟರ್್ ತೀಪರ್ಿನ ಹಿನ್ನೆಲೆಯಲ್ಲಿ ಯಾವುದೇ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಲು ಅನುಮತಿ ದೊರಕಿದ್ದು, ತಾವು ದೇವರದ ದರ್ಶನಕ್ಕೆ ಆಗಮಿಸಿರುವುದಾಗಿ ತಿಳಿಸಿದರು. ತೃಪ್ತಿ ದೇಸಾಯಿಯೊಂದಿಗೆ ಹರಿನಾಶಿನಿ ಕಾಂಬ್ಳೆ, ಛಾಯಾ, ಪಾಂಡುರಂಗ್ ಮತ್ತು ಮೀನಾಕ್ಷಿ ಶಿಂದೆ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇಲ್ಲಿ ಅವರನ್ನು ಕಳೆದ ವರ್ಷ ಕನಕದುರ್ಗ ಅವರೊಂದಿಗೆ ದೇಗುಲ ಪ್ರವೇಶಿಸಿದ್ದ ಬಿನು ಅಮ್ಮಿನಿ ಸೇರಿಕೊಳ್ಳಲಿದ್ದಾರೆ. ವಿಮಾನ ನಿಲ್ದಾಣದಿಂದ ತೃಪ್ತಿ ದೇಸಾಯಿ ಕೊಚ್ಚಿ ನಗರ ಆಯುಕ್ತರ ಕಚೇರಿಯನ್ನು ತಲುಪಿದ್ದು, ದೇಗುಲ ಪ್ರವೇಶಕ್ಕೆ ರಕ್ಷಣೆ ಕೋರಿದ್ದಾರೆ. ಈ ನಡುವೆ, ಇರುಮಲೈ ನಿಂದ ದೇಗುಲದ ಚಾರಣದ ಹಾದಿಯಲ್ಲಿ ಆರ್ ಎಸ್ ಎಸ್ ನ ಹಿಂದು ಐಕ್ಯ ವೇದಿ ಮತ್ತು ಇತರ ಸಂಘಟನೆಗಳು ತೃಪ್ತಿ ದೇಸಾಯಿ ದೇಗುಲ ಪ್ರವೇಶಿಸುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹಲವು ಬಗೆಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.