ಉತ್ತಮ ಜೀವನಕ್ಕೆ ಸತ್ಸಂಗಗಳು ದಾರಿ ದೀಪ: ಅಣ್ಣಾಜಿ ಫಡತಾರೆ

Satsangs are the guiding light for a better life: Annaji Phadatare

ಮಹಾಲಿಂಗಪುರ 18: ಮನುಷ್ಯ ಎಷ್ಟೇ ಮುಂದುವರೆದರೂ ತಾನು ನಡೆದು ಬಂದ ದಾರಿಯನ್ನು ಮರೆಯಬಾರದು, ತಂದೆ ತಾಯಿ ಗುರುವಿನ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ ಆದರೆ ಋಣ ಬಾರ ಕಡಿಮೆ ಮಾಡಿಕೊಳ್ಳಬಹುದು, ಉತ್ತಮ ನಾಗರೀಕರಾಗಿ ಉತ್ತಮ ಸೇವೆ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿ, ತಂದೆ ತಾಯಿ ಗುರುವಿಗೆ ಹೆಸರು ತರುವ ಕೆಲಸ ಮಾಡಿ ದಾನ ಧರ್ಮ ಮಾಡಿ ಸಮಾಜದ ಋಣ ತೀರಿಸಬಹುದು ಇದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗಿ ಮೋಕ್ಷ ದೋರುಯುತ್ತದೆ. ಈ ಎಲ್ಲ ಸಾಧನೆಗಾಗಿ ಸತ್ಸಂಗ ಉತ್ತಮ ಆಯ್ಕೆ ಸತ್ಸಂಗದಲ್ಲಿ ಭಾಗವಹಿಸುವದರಿಂದ ಮನುಷ್ಯ ಮಾನಸಿಕ ಜಂಜಾಟದಿಂದ ಮುಕ್ತನಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕರಿಯಾಗುತ್ತದೆ, ಸನ್ಮಾರ್ಗದಲ್ಲಿ ನಡೆದರೆ ಸ್ವರ್ಗ ಪ್ರಾಪ್ತಿಯಗುತ್ತದೆ ಸ್ವರ್ಗ ಎಲ್ಲಿಯೂ ಇಲ್ಲಾ ಅದು ಸುಖವಾದ ಸಂಸಾರದಲ್ಲಿದೆ, ಮನುಷ್ಯ ಉತ್ತಮ ಜೀವನಕ್ಕಾಗಿ ಒಂದ್ದಿಲ್ಲಾ ಒಂದು ರೀತಿ ಸತ್ಸಂಗದಲ್ಲಿ ಭಾಗವಹಿಸಬೇಕು,ಎಂದು ನಗರದ ನಾಲ್ಕು ತಲೆಮಾರಿನ ನಿವೃತ್ತ ಶಿಕ್ಷಕರು ಮತ್ತು ಹಿರಿಯ ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ ಹೇಳಿದರು. 

ಅವರು ಮಹಾಲಿಂಗಪುರ ಸಮೀಪದ ನಂದಗಾಂವ ಗ್ರಾಮದ ಸಂಗಪ್ಪ ಉಪ್ಪಲದಿನ್ನಿ ತೋಟದಲ್ಲಿ ಹೋಳಿಹುಣಿಮೆ ಪ್ರಯುಕ್ತ ನಡೆದ ಶಿವಾನುಭವ ಗೋಷ್ಠಿ ಸತ್ಸಂಗದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ.ಸತ್ಸಂಗವು ಪ್ರತಿ ವರ್ಷ ಹೋಳಿ ಹುಣಿಮೆ ಬಣ್ಣದ ದಿನ ಜರುಗುವುದು ಇದು ಕಳೆದ ಮೂರುವರೇ ದಶಕದಿಂದ ನಡೆದುಕೊಂಡು ಬಂದಿರುವುದು. ನಮ್ಮೆಲ್ಲರ ಹೆಮ್ಮೆ ಪುಣ್ಯ ಪ್ರತಿ ಮನುಷ್ಯ ಒಂದಲ್ಲ ಒಂದು ರೀತಿ ಉತ್ತಮ ನೆಮ್ಮದಿಯುಕ್ತ ಜೀವನಕ್ಕೆ ಸತ್ಸಂಗಗಳು ಬಹಳಷ್ಟು ಸಹಕಾರಿ ಎಂದರು. 

ನಂತರ ಮಾತನಾಡಿದ ಕ ಸಾ ಪ ರಬಕವಿ ಬನಹಟ್ಟಿ ತಾಲೂಕಿನ ಮಾಜಿ ಅಧ್ಯಕ್ಷರಾದ ವೀರೇಶಕುಮಾರ ಆಸಂಗಿ ಶರಣರ ಬದುಕು ಮನುಕುಲಕ್ಕೆ ದಾರಿ ದೀಪ ಅವರ ಉಪದೇಶದಂತೆ ನಡೆದರೆ ಸುಖ, ಶಾಂತಿ ನೆಮ್ಮದಿ ಸಾಧ್ಯ. ನೆಮ್ಮದಿ ಇಲ್ಲದ ಬದುಕು ನರಕಕ್ಕೆ ಸಮ ಸುಖಿ ಕುಟುಂಬ ಸ್ವರ್ಗಕ್ಕೆ ಸಮ ಅಧ್ಯಾತ್ಮ ಎನ್ನುವುದು ಮನುಷ್ಯನಿಗೆ ಜ್ಞಾನ ಮತ್ತು ನೆಮ್ಮದಿ ನೀಡುತ್ತದೆ. 

ಇಂದಿನ ಯುವ ಜನತೆ ಹೆಚ್ಚು ಹೆಚ್ಚು ದುಶ್ಚಟಗಳ ದಾಸರಾಗಿ ಜೀವನನ್ನೇ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದಕರ ಸಂಗತಿ, ಭಾರತ ದೇಶ ಇಡೀ ವಿಶ್ವಕ್ಕೆ ಅಧ್ಯಾತ್ಮ ಬೋದಿಸಿ ಜಗತ್ತನ್ನೇ ಇಂದು ಅಧ್ಯಾತ್ಮದತ್ತ ತಿರುಗುವಂತೆ ಮಾಡಿದೆ, ಮಕ್ಕಳಿಗೆ ಮೊದಲು ಸಂಸ್ಕಾರ, ಸಹಬಾಳ್ವೆ, ಕಲಿಸುವುದು ಅತೀ ಮುಖ್ಯವಾಗಿದೆ. ಸಂಸ್ಕಾರವಿಲ್ಲದ ಕುಟುಂಬಗಳು ಹಾಳಾಗುತ್ತಿವೆ. ಅದಕ್ಕಾಗಿ ಇಂದಿನ ಅತೀ ಅವಶ್ಯಕತೆ ವಸ್ತು ಸಂಸ್ಕಾರ ಆಗಿದೆ ಎಂದರು. 

ನಂತರ ಮಾತನಾಡಿದ ರಬಕವಿ ಬನಹಟ್ಟಿ ತಾಲೂಕಾ ಕ ಸಾ ಪ ಅಧ್ಯಕ್ಷರಾದ ಮ ಕೃ ಮೆಗಾಡಿ,ನಾವು ಮಾಡುವ ಕಾರ್ಯ ದೇವರಿಗೆ ಮೆಚ್ಚುಗೆಯಾದರೆ ಅದು ನಮ್ಮ ಗೆಲುವು ಯಾರನ್ನು ಮೆಚ್ಚುಸುವ ಅವಶ್ಯಕತೆ ಇಲ್ಲ ನಾವು ನಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡರೆ ನೆಮ್ಮದಿ ಬದುಕು ಕಾಣಬಹುದು, ಇದು ಆಧ್ಯಾತ್ಮದ ಶಕ್ತಿ. ಎಂದರು. 

ನಂತರ ಮಾತನಾಡಿದ ಪತ್ರಕರ್ತರಾದ ಲಕ್ಷ್ಮಣ ಕಿಶೋರ  ಅವರು ಮಾನಸಿಕ ನೆಮ್ಮದಿ ಹೊಂದಲು ಪ್ರತಿಯೊಬ್ಬರಿಗೆ ಸತ್ಸಂಗಗಳು ಪಾಲ್ಗೊಳಬೇಕು ಇದರಿಂದ ಸಂಸ್ಕಾರ, ಸಂಸ್ಕೃತಿ, ಬೆಳೆಯುತ್ತದೆ ಎಂದರು. 

ಈ ಕಾರ್ಯಕ್ರಮದಲ್ಲಿ ಸಂಗಪ್ಪ ಉಪ್ಪಲದಿನ್ನಿ ಅಧ್ಯಕ್ಷತೆ ವಹಿಸಿದ್ದರು,  ಮುಖಂಡರಾದ ಸಿದ್ದು ಟಿರ್ಕಿ  ರಮೇಶ ಮಡಿವಾಳ,ಶಿವಾನಂದ ಮರೆಗುದ್ದಿ,ಅಶೋಕ ಸುನದೊಳಿ, ಮಹದೇವ್ ದಡುತಿ, ಜಯವಂತ ಬಾಡಗಿ, ವಿಷ್ಣು ಬಡಿಗೇರ, ತೇರದಾಳದ ಗೋಪಾಲ ಎಸ್ ಕೆ ಗಿಂಡೆ ಸೇರಿದಂತೆ ಹಲವರು ಇದ್ದರು ಕಾರ್ಯಕ್ರಮವನ್ನು ಬಸವರಾಜ್ ಮೇಟಿ ಗುರುಗಳು ನಿರೂಪಿಸಿ ವಂದಿಸಿದರು.