ಗೋಕಾಕ: ಸತ್ಸಂಗದಿಂದ ನೆಮ್ಮದಿಯ ಜೀವನ ಸಾಧ್ಯ

ಲೋಕದರ್ಶನ ವರದಿ

ಗೋಕಾಕ 12: ಸತ್ಸಂಗ ಹಾಗೂ ಆಧ್ಯಾತ್ಮಕ ಕಾರ್ಯಗಳಲ್ಲಿ ಪಾಲ್ಗೊಳ್ಳುವದುರಿಂದ ಮಾನವ ಮಹಾದೇವನಾಗುತ್ತಾನೆ ಎಂದು ಇಲ್ಲಿಯ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು.

ಗುರುವಾರದಂದು ನಗರದ ಸಿದ್ದಿ ವಿನಾಯಕ ಸಮುದಾಯ ಭವನದಲ್ಲಿ ಶಿವಯೋಗಿ ತತ್ವವಿಚಾರ ವೇದಿಕೆಯವರು ಹಮ್ಮಿಕೊಂಡ ವೇದಿಕೆಯ ಲಿಂಗೈಕ್ಯ ಸದಸ್ಯರ ಸಾಮೂಹಿಕ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಡಿದರು.

ಸತ್ಸಂಗದಿಂದ ನೆಮ್ಮದಿಯ ಜೀವನ ಸಾಧ್ಯ, ಅರ್ಥಪೂರ್ಣ ಹಾಗೂ ಸಾರ್ಥಕ ಬದುಕನ್ನು ಬದುಕಿದ ಪುಣ್ಯವಂತರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತರಬೇಕು. ಅಂತಹ ಪುಣ್ಯಾತ್ಮರ ತತ್ವಾದರ್ಶಗಳನ್ನು ಜನರಿಗೆ ತಿಳಿಸಿ ಹೇಳುವ ಕಾರ್ಯವನ್ನು ಮಾಡುತ್ತಿರುವ ವೇದಿಕೆಯವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಚಂದ್ರಶೇಖರ ಅಕ್ಕಿ ಅವರು ಮಾತನಾಡಿ, ಶರೀರ, ವೈಭವದ ಜೀವನ ಶಾಶ್ವತವಲ್ಲ, ಮೃತ್ಯು ನಮ್ಮ ಬೆನ್ನ ಹಿಂದೆಯೇ ಇದ್ದು, ಅದು ಮುಟ್ಟುವ ಮೊದಲು ಒಳ್ಳೆಯ ವದುಕನ್ನು ಬದುಕಿದರೇ ಅಮರಾಗುತ್ತಿರಿ, ಜೀವನವೆಂಬ ಪಯಣದಲ್ಲಿ ತಮ್ಮ ವ್ಯಕ್ತಿತ್ವದಿಂದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋದ ಪುಣ್ಯಾತ್ಮರ ಸ್ಮರಣೆಯೊಂದಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವಂತೆ ಹೇಳಿದರು.

ಇದೇ ಸಂದರ್ಭದಲ್ಲಿ ದಿಗಂತಕ್ಕೆರಿದ ದಿವ್ಯನಕ್ಷತ್ರಗಳು ಎಂಬ ಕಿರುಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳಗಾವಿಯ ಇಸ್ಕಾನ್ ಉದ್ದವಾನಂದ ಪ್ರಭುಜೀ ವಹಿಸಿದ್ದರು. ವೇದಿಕೆ ಮೇಲೆ ಪ್ರವಚನಕಾರ ಬಸವರಾಜ ಶರಣರು, ನಿವೃತ್ತ ಪ್ರಾಚಾರ್ಯ ಪ್ರೊ. ಖ.ಎಚ್.ಸವಸುದ್ದಿ, ಸುಜಾತಾ ರಾಮಕೃಷ್ಣ ಇದ್ದರು. ವೇದಿಕೆ ಅಧ್ಯಕ್ಷ ಬಸವರಾಜ ಮುರಗೋಡ ಸ್ವಾಗತಿಸಿದರು, ರಾಧಾ ಗುಲ್ಲ ನಿರೂಪಿಸಿದರು, ಉಪಾಧ್ಯಕ್ಷ ಯಲ್ಲಪ್ಪ ಕುರಬಗಟ್ಟಿ ವಂದಿಸಿದರು.