ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ 2025-26ನೇ ಸಾಲಿನ ಆಯವ್ಯಯ ಬಜೆಟ್‌ನ್ನು ಶಶಿಕಲಾ ಮಂಡಿಸಿದರು

Sasikala presented the budget for the year 2025-26 at the municipal office here.

ಲೋಕದರ್ಶನ ವರದಿ 

ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ 2025-26ನೇ ಸಾಲಿನ ಆಯವ್ಯಯ ಬಜೆಟ್‌ನ್ನು ಶಶಿಕಲಾ ಮಂಡಿಸಿದರು 

ಹಾವೇರಿ 28:  ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ 2025-26ನೇ ಸಾಲಿನ ಆಯವ್ಯಯ ಬಜೆಟ್‌ನ್ನು ನಗರಸಭೆ ಅಧ್ಯಕ್ಷರಾದ   ಶಶಿಕಲಾ ರಾಮು ಮಾಳಗಿ ಮಂಡಿಸಿದರು.  

     ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ರಾಮು ಮಾಳಗಿ ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ನಗರಸಭೆಗೆ ಬರುವ ಆದಾಯ ಹಾಗೂ ಖರ್ಚಿನ ಮಾಹಿತಿಯನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಈ ನಿಟ್ಟಿನಲ್ಲಿ ಹಾವೇರಿ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ,ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುವ ಮೂಲಕ ಉತ್ತಮ ಬಜೆಟ್ ಮಂಡನೆಗೆ ಮುಂದಾಗಿದ್ದೇವೆ.ಶಾಸಕರ, ಸಂಸದರ,ನಗರಸಭೆಯ ಸರ್ವ ಸದಸ್ಯರ ಹಾಗೂ ಸಾರ್ವಜನಿಕರ ಅಭಿಪ್ರಾಯ ಒಳಗೊಂಡು ಅಭಿವೃದ್ಧಿಗೆ ಪ್ರೇರಕವಾಗುವ ಬಜೆಟ್ ಮಂಡಿಸಲಾಗಿದೆ.ನಾವೆಲ್ಲರೂ ಸೇರಿಕೊಂಡು ನಿಮ್ಮೆಲ್ಲರ ಸಹಕಾರದಿಂದ ನಗರದ ಅಭಿವೃದ್ಧಿಗೆ ಶ್ರಮಿಸೋಣ ಎಂದು  ಬಜೆಟ್ ಪ್ರತಿಯನ್ನು ಓದಿ,ಅಭಿವೃದ್ಧಿಗೆ ಅಧ್ಯಕ್ಷರು ಎಲ್ಲರ ಸಹಕಾರ ಕೋರಿದರು. 

       ವಿಧಾನಸಭಾ ಉಪಸಭಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ರುದ್ರ​‍್ಪ ಲಮಾಣಿ ಮಾತನಾಡಿ ಹಾವೇರಿಯನ್ನು ಸುಂದರ ಹಾಗೂ ಸವಾಂರ್ಗೀಣ ಅಭಿವೃದ್ಧಿಗೆ ಸರ್ಕಾರದಿಂದ ಏನು ಅನುದಾನ ಬೇಕೋ ತರುವ ಕೆಲಸವನ್ನು ಹಿಂದೆಯೋ ಮಾಡಲಾಗಿದೆ.ಮುಂದೆಯೋ ಮಾಡಲಾಗುವುದು.ಮಾದರಿ ನಗರ ಮಾಡಲು ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.2025-26 ಸಾಲಿನಲ್ಲಿ 5.61 ಲಕ್ಷ ರೂ,ಗಳ ಉಳಿತಾಯ ಬಜೆಟ್ ಮಂಡಿಸಿದ್ದು,ಬಜೆಟ್ ಪ್ರತಿಯ ಬಗ್ಗೆ ಸದಸ್ಯರು ಹಲವಾರು ಅಭಿಪ್ರಾಯಗಳನ್ನು ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

      ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ,ನಗರಸಭೆಯ ಪ್ರಭಾರ ಪೌರಾಯುಕ್ತರಾದ ಚನ್ನಪ್ಪ ಹೆಚ್‌.ಬಿ.ಪ್ರಭಾರ ಲೆಕ್ಕ ಅಧಿಕ್ಷಕರಾದ ಶ್ರೀಮತಿ ಶೋಭಾ ಉದಕಟ್ಟಿ,ನಗರಸಭೆ ಸದಸ್ಯರು  ಹಾಗೂ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.