ಬಾಗಲಕೋಟೆ: ತಾಲೂಕಿನ ಕಲಾದಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ಹಾಗೂ ಅಂಕಲಗಿ ಗ್ರಾಮದ ದೇವದಾಸಿ ಮಹಿಳೆಯರ ಕಾಲೋನಿಗಳಿಗೆ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಶಿಕಲಾ ಟೆಂಗಳಿ ಮಂಗಳವಾರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಕಲಾದಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿರುವ ಬನಮ್ಮದೇವಿ ಸಭಾಭವನದಲ್ಲಿ ಮಹಿಳಾ ನಿಗಮದಿಂದ ಚೇತನ, ಉದ್ಯೋಗಿನಿ ಯೋಜನೆಯಡಿ ಸೌಲಭ್ಯ ಪಡೆದು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬನೆ ಜೀವನ ನಡೆಸುತ್ತಿರುವ ಬಗ್ಗೆ ಫಲಾನುಭವಿಗಳಿಂದ ತಿಳಿದುಕೊಂಡರು. ಫಲಾನುಭವಿಗಳು ನಿಗದ ಸಹಾಯಧನ ಪಡೆದು ಹಣ್ಣಿನ ವ್ಯಾಪಾರ, ಕಿರಾಣಿ ವ್ಯಾಪಾರ, ತಂತಿ ಬಲೆ ಹೆಣೆಯುವ ಸ್ವಂತ ಉದ್ಯೋಗ ಮಾಡುತ್ತಿರುವುದಾಗಿ ತಿಳಿಸಿದರು.
ನಿಗದಿಂದ ಸಿಗುವ 20 ಸಾವಿರ ಸಹಾಯಧನ ಸಾಕಾಗುತ್ತಿಲ್ಲ. ಇನ್ನು ಹೆಚ್ಚಿನ ಸಹಾಯಧನ ನೀಡಿದಲ್ಲಿ ಹೆಚ್ಚಿನ ಸಂಪಾದನೆ ಮಾಡುವದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಫಲಾನುಭವಿಗಳು ತಮ್ಮ ಸಮಸ್ಯೆಗಳನ್ನು ಅಧ್ಯಕ್ಷರಲ್ಲಿ ತೋಡಿಕೊಂಡರು. ನಮಗೆ ಸ್ವಂತ ನಿವೇಶನ, ಮನೆ ಇಲ್ಲ. ಜಮೀನು ಇಲ್ಲವೆಂದು ಫಲಾನುಭವಿಗಳು ತಿಳಿಸಿದಾಗ ಇದಕ್ಕೆ ಉತ್ತರಿಸಿದ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಕಲಾದಗಿ ಗ್ರಾಮ ಮುಳುಗಡೆ ಪ್ರದೇಶವಾಗಿರುವದರಿಂದ ಊರಕ್ಕೆ ಹತ್ತಿಕೊಂಡು ಜಾಗವಿದ್ದರೆ ತಿಳಿಸಿ ಸರಕಾರದಿಂದ ಖರೀದಿಸಿ ಮನೆಗಳನ್ನು ಕಟ್ಟಿಕೊಡುವುದಾಗಿ ತಿಳಿಸಿದರು.
ನಂತರ ಅಂಕಲಗಿ ಗ್ರಾಮದ ದೇವದಾಸಿ ಮಹಿಳೆಯರ ಕಾಲೋನಿಗೆ ಭೇಟಿ ನೀಡಿ ದೇವದಾಸಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು. ನಿಗಮದಿಂದ ಸೌಲಭ್ಯಗಳನ್ನು ಪಡೆದುಕೊಂಡು ಹೈನುಗಾರಿಕೆ, ಹಣ್ಣಿನ ವ್ಯಾಪಾರ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಪದ್ದತಿಯಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಪದ್ದತಿ ನಮ್ಮಿಂದಲೇ ಕೊನೆಗೊಳಿಸುತ್ತೇವೆ ಎಂದು ತಿಳಿಸಿದರೆ, ಇನ್ನು ಕೆಲವರು ದೇವದಾಸಿ ಮಹಿಳೆಯರು ಪ್ರತಿ ತಿಂಗಳು ನೀಡುವ ಮಾಶಾಸನ ಹೆಚ್ಚಿಸಬೇಕು. ಮನೆ ಕಟ್ಟಲು ಸಹಾಯಧನ ಹೆಚ್ಚಿಗೆ ನೀಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಶಶಿಕಲಾ ಟಂಗಳಿ ಮಾತನಾಡಿ ದೇವದಾಸಿ ಮಹಿಳೆಯರಿಗೆ ನೀಡುವ ಮಾಶಾಸನ ಹೆಚ್ಚಳ ಕುರಿತಂತೆ ಈಗಾಗಲೇ ಚಚರ್ೆ ನಡೆಸಿರುವುದಾಗಿ ತಿಳಿಸಿದರು.
ನಿಮ್ಮ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಸ್ವತಃ ನಿಮ್ಮನ್ನು ಭೇಟಿ ಮಾಡಲು ಬಂದಿರುವುದಾಗಿ ತಿಳಿಸಿದರು. ಎಲ್ಲರಂತೆ ನೀವು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬನೆ ಜೀವನ ನಡೆಸುವಂತಾಗಬೇಕು ಎಂಬುದೇ ನಿಗಮದ ಉದ್ದೇಶವಾಗಿದೆ ಎಂದು ತಿಳಿಸಿದರು. ನಿಗಮದಿಂದ ಸೌಲಭ್ಯಗಳನ್ನು ಎಷ್ಟು ಜನ ಪಡೆದುಕೊಂಡಿದ್ದಾರೆ ಅದರಿಂದ ಅವರಿಗೆ ಅನುಕೂಲವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲಿ ಭೇಟಿ ನೀಡಿರುವುದಾಗಿ ತಿಳಿಸಿದರು.
ಜಿ.ಪಂ ಸಿಇಓ ಮಾತನಾಡಿ ಎಮ್ಮೆ ಸಾಗಾಣಿಕೆ, ಕೋಳಿ ಸಾಗಾಣಿಕೆಗೆ ದೊಡ್ಡಿಗಳನ್ನು ನಿಮರ್ಿಸಲು ಜಾಗ ತೋರಿಸಿದರೆ ಸಾಕು ನರೇಗಾ ಯೋಜನೆಯಡಿ ನಿಮರ್ಿಸಿಕೊಡುವುದಾಗಿ ತಿಳಿಸಿದರು. ಜಮೀನು ಇಲ್ಲದವರಿಗೆ ಭೂ ಒಡೆತನ ಯೋಜನೆಯಡಿ 15 ಲಕ್ಷ ರೂ.ಗಳಲ್ಲಿ ಜಮೀನು ಖರೀದಿ ಮಾಡಿಕೊಡಲಾಗುವುದು. 15 ಲಕ್ಷದಲ್ಲಿ 7.50 ಲಕ್ಷ ರೂ. ಸರಕಾರ ನೀಡಿದರೆ, ಉಳಿದ 7.50 ಲಕ್ಷ ರೂ.ಗಳನ್ನು ಬ್ಯಾಂಕ್ ಲೋನ್ ಮೂಲಕ ಕೊಡಿಸಲಾಗುವುದೆಂದರು.
ಭೇಟಿ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿದರ್ೇಶಕ ಮಲ್ಲಿಕಾಜರ್ುನ ರೆಡ್ಡಿ, ದೇವದಾಸಿ ಪುನರ್ವಸತಿ ನಿಗಮದ ಅಧಿಕಾರಿ ಕೆ.ಕೆ.ದೇಸಾಯಿ, ಕಲಾದಗಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ದ್ರಾಕ್ಷಾಯಿಣಿ ಹಿರೇಮಠ, ಮಹಿಳಾ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ದ್ರಾಕ್ಷಾಯಿಣಿ ಪಾಟೀಲ ಸೇರಿದಂತೆ ನಿಗಮದ ಅಧಿಕಾರಿಗಳಾದ ಮದುಸೂಧನ, ನಾಯಕ ಇದ್ದರು.