ತಾಳಿಕೋಟಿ 20: ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿ. 20 ಗುರುವಾರದಂದು ಸರ್ವಜ್ಞ ಜಯಂತಿ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಸಜ್ಜನ ಅವರು ತ್ರಿಪದಿಗಳ ಆಶುಕವಿ ಜ್ಞಾನಿ ಸರ್ವಜ್ಞ 16ನೇ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಕವಿ ಸರ್ವಜ್ಞ ಸರ್ವಜ್ಞ ಎಂದರೆ ಸಂಸ್ಕೃತ ಭಾಷೆಯಲ್ಲಿ ಎಲ್ಲವನ್ನು ತಿಳಿದವ ಎಂದು ಅರ್ಥೈಸಲಾಗಿದೆ. ಇವರನ್ನು ತ್ರಿಪದಿಯ ಸಾಹಿತ್ಯದ ಬ್ರಹ್ಮ ಎಂದು ಕರೆಯಲಾಗಿದೆ. ತ್ರಿಪದಿಗಳೆಂದರೆ ಮೂರು ಸಾಲಿನ ವಚನ ಎಂಬುದಾಗಿದೆ ಪುಷ್ಪದತ್ತ ಸರ್ವಜ್ಞನ ನಿಜವಾದ ನಾಮವಾಗಿದ್ದು. ಸರ್ವಜ್ಞ ಎಂಬುದು ಇವರ ಕಾವ್ಯನಾಮವಾಗಿದೆ.ಎಂದರು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ಬಿ.ಎಸ್.ಮಾಲಿಪಾಟೀಲ್ ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.