ರಾಂಚಿ , ಡಿ 24 ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ
ವಿರುದ್ಧ ಬಿಜೆಪಿ ಹೀನಾಯ ಸೋಲು ಒಂದು ಕಡೆಯಾದರೆ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ತಮ್ಮ ಸಂಪುಟ ಸಹೋದ್ಯೋಗಿಯಿಂದಲೇ ಮುಖ್ಯಮಂತ್ರಿ ಸೋತಿರುವುದು ರಾಜ್ಯದಲ್ಲಿ ವ್ಯಾಪಕ, ಬಿಸಿ, ಬಿಸಿ ಚರ್ಚೆಯಾಗುತ್ತಿದೆ. ತಮಗೆ ಪಕ್ಷದ ಟಿಕೆಟ್ ತಪ್ಪಿಸಿದ್ದ
ಮುಖ್ಯಮಂತ್ರಿ ರಘುವರ ದಾಸ್ ಎಂದು ಅವರ ವಿರುದ್ಧ ಬಂಡೆದ್ದಿದ್ದ ಸಂಪುಟ ಸಹೋದ್ಯೋಗಿ ಸರಯೂ ರಾಯ್, ಅವರು
ಮುಖ್ಯಮಂತ್ರಿಯವರನ್ನು ತವರು ಕ್ಷೇತ್ರದಲ್ಲೇ 15 ಸಾವಿರಕ್ಕೂಹೆಚ್ಚು ಮತಗಳ ಅಂತರದಿಂದ
ಸೋಲಿಸಿ ಸೇಡು ತೀರಿಸಿಕೊಂಡಿರುವುದು ಸಹ ಗಹನ ಚರ್ಚೆಯಾಗುತ್ತಿದೆ . ಜೆಮ್ಶೆಡ್ಪುರ ಕ್ಷೇತ್ರವನ್ನು 1995ರಿಂದೀಚೆಗೆ ಸತತವಾಗಿ
ಐದು ಬಾರಿ ಪ್ರತಿನಿಧಿಸಿದ್ದ ರಘುವರ ದಾಸ್ ಚಲಾವಣೆಯಾದ ಮತಗಳ ಪೈಕಿ 33.45 ಶೇಕಡ ಮತಗಳನ್ನಷ್ಟೇ ಗಳಿಸಲು
ಸಾಧ್ಯವಾಗಿದೆ. ಆದರೆ ವಿಜೇತ ಅಭ್ಯರ್ಥಿ ಒಟ್ಟು 73,ಸಾವಿರದ 332 ಮತ ಗಳಿಸಿದ್ದಾರೆ. ಮೂರನೇ ಸ್ಥಾನ ಪಡೆದ ಕಾಂಗ್ರೆಸ್ ಅಭ್ಯರ್ಥಿ ಗೌರವ್ ವಲ್ಲಭ್ 18, ಸಾವಿರದ
868 ಮತ ಪಡೆದಿದ್ದಾರೆ. ಪಕ್ಕದ ಜೆಮ್ಶೆಡ್ಪುರ ಪಶ್ಚಿಮ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ
ರಾಯ್ ಅವರ ಹೆಸರು ಪಕ್ಷದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರಲಿಲ್ಲ. ಕೊನೆಕ್ಷಣದಲ್ಲಿ ಆ ಕ್ಷೇತ್ರಕ್ಕೆ
ದೇವೇಂದ್ರ ಸಿಂಗ್ ಹೆಸರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಪಕ್ಷದ ವರಿಷ್ಠರ ಬಳಿಗೆ ವಿಚಾರ
ತಿಳಿಸಿದಾಗ, ಪದತ್ಯಾಗಕ್ಕೆ ಸೂಚನೆ ಬಂದಿತ್ತು ಇದರಿಂದ ತಮಗೆ ಆಗಿದ್ದ ಅಪಮಾನದ
ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಿಂದ ರಾಯ್, ಸಿಎಂ ತವರು ಕ್ಷೇತ್ರದಲ್ಲಿ ಅವರ ವಿರುದ್ಧವೇ
ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡಿದ್ದರು. ಈ ನಡುವೆ
ವಿಧಾನಸಭೆಯಲ್ಲಿ ಎನ್ ಡಿಎ ಅಥವಾ ಯುಪಿಎ ಸೇರಿದಂತೆ
ಯಾವುದೇ ಬಣವನ್ನು ಬೆಂಬಲಿಸದೆ ತಟಸ್ಥವಾಗಿಯೇ ಮುಂದುವರಿಯುವುದಾಗಿಯೂ
ಸರಯೂ ರಾಯ್ ಸ್ಪಷ್ಟಪಡಿಸಿದ್ದಾರೆ.