ಘಟನೆ ನಿಭಾಯಿಸುವಲ್ಲಿ ಸಕರ್ಾರ ವಿಫಲ: ಬಿಜೆಪಿ ಆರೋಪ

ಬೆಳಗಾವಿ, ಡಿ.17-ಚಾಮರಾಜನಗರ ಜಿಲ್ಲೆ ಯ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ1 4 ಮಂದಿ ಮೃತಪಟ್ಟು ಹಲವರು ಅಸ್ವಸ್ಥರಾಗಿರುವ ಘಟನೆ ಪ್ರತಿಪರಿಷತ್ನಲ್ಲಿ ಪ್ರತಿಧ್ವನಿಸಿತು.

ಈ ಘಟನೆಯನ್ನು ನಿಭಾಯಿಸುವಲ್ಲಿ ಸಕರ್ಾರ ವಿಫಲವಾಗಿದೆ ಎಂದು ಬಿಜೆಪಿ  ಆರೋಪಿಸಿದ್ದರಿಂದ ಕೆಲ ಹೊತ್ತು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕಾವೇರಿದ ಮಾತಿನ ಚಕಮಕಿ ನಡೆಯಿತು. 

ಸದನದ ಕಲಾಪ ಬೆಳಗ್ಗೆ ಆರಂಭವಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಮುಂದಾದರು.ಈ ವೇಳೇ ಕೋಟಾ ಶ್ರೀನಿವಾಸ್ ಪೂಜಾರಿ ಅವರು ನಿಯಮ 58ರಡಿ ಚಚರ್ೆಗೆ ಅವಕಾಶ ಮಾಡಿಕೊಡಬೇಕು.ಇದೊಂದು ಅತ್ಯಂತ ಅಮಾನವೀಯ ಘಟನೆ. ರಾಜ್ಯ ಸಕರ್ಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದರಿಂದ ಚಚರ್ೆಗೆ ಅವಕಾಶ ನೀಡಿ ಎಂದು ಕೋರಿದರು.

ಆಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ, ಸದನದ ನಿಯಮದಂತೆ ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ. ನಂತರ ಚಚರ್ೆಗೆ ಅವಕಾಶ ಮಾಡಿಕೊಡಬೇಕೋ ಬೇಡವೋ  ಎಂಬುದನ್ನು ನೀವು ನಿರ್ಧರಿಸಿ. 

ಜಯಮಾಲ ಮಾತನಾಡಿ, ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಬೇಕು.ನಂತರ ಸಭಾಧ್ಯಕ್ಷರು ತಮ್ಮ ವಿವೇಚನೆಗೆ ತಕ್ಕಂತೆ ನಿಧರ್ಾರ ಕೈಗೊಳ್ಳಲು ಸ್ವತಂತ್ರರು.ಆದರೆ ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು.

ಸುಮಾರು  14 ಮಂದಿ ಘಟನೆಯಲ್ಲಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಈಗಲೂ ಅನೇಕರು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಸಕರ್ಾರ ಇದನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪೂಜಾರಿ ದೂರಿದರು.

ಇದಕ್ಕೆ ಜೆಡಿಎಸ್ನ ಭೋಜೆಗೌಡ ಆಕ್ಷೇಪಿಸಿ ಘಟನೆ ನಡೆದ ಮರುಗಳಿಗೆಯೇ ಸಿಎಂ ಕುಮಾರಸ್ವಾಮಿ, ಸಚಿವರು, ಅಧಿಕಾರಿಗಳ ತಂಡ ಭೇಟಿ ನೀಡಿದೆ.ಮೃತರ ಕುಟುಂಬಗಳಿಗೆ ಸಕರ್ಾರದ ವತಿಯಿಂದ 5 ಲಕ್ಷ ಪರಿಹಾರ ನೀಡಲಾಗಿದೆ.ಅಲ್ಲದೆ ಗಾಯಗೊಂಡವರಿಗೆ ಸಕರ್ಾರದ ವತಿಯಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.ಎಲ್ಲ ಆಸ್ಪತ್ರೆಯಲ್ಲು ದಿನದ 24 ಗಂಟೆಯೂ ತುತರ್ು ಚಿಕಿತ್ಸೆ ನೀಡುವಂತೆಯೂ ಮುಖ್ಯಮಂತ್ರಿ ಸೂಚಿಸಿದ್ದಾರೆ.ನಾಲ್ವರು ಸಚಿವರು, ಶಾಸಕರು ಸೇರಿದಂತೆ ಅನೇಕರು ಅಲ್ಲಿಗೆ ತೆರಳಿದ್ದಾರೆ.ಸಕರ್ಾರ ಎಲ್ಲಿ ಎಡವಿದೆ ಎಂದು ಪ್ರಶ್ನೆ ಮಾಡಿದರು.

ನಾವು ಸಕರ್ಾರದ ಗಮನ ಸೆಳೆಯುವುದು ನಮ್ಮ ಹಕ್ಕು.ಈ ಘಟನೆಗೆ ಯಾರೂ ಕಾರಣಕರ್ತರು ಎಂಬುದು ತಿಳಿಯಬೇಕು.ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು.ಅದಕ್ಕಾಗಿಯೇ ಸಕರ್ಾರದ ಗಮನ ಸೆಳೆಯಲು ಚಚರ್ೆ ನಡೆಸಬೇಕೆಂದು ಕೇಳಿಕೊಂಡಿದ್ದೇವೆ. ಇದು ಹೇಗೆ ಲೋಪವಾಗುತ್ತದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದರು.

ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ನಿಮ್ಮ ಪ್ರಸ್ತಾವನೆಯನ್ನು ಪರಿಶೀಲನೆ ಮಾಡುತ್ತೇನೆ. ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಲಿ ಎಂದು ಹೇಳಿದರು.

ಈ ಹಿಂದೆ ಸದನದಲ್ಲಿ ನಿಲುವಳಿ ಸೂಚಿಸಿದಾಗ ವಿಷಯ ಪ್ರಸ್ತಾಪಿಸಲು ಸಭಾಪತಿಗಳು  ಅವಕಾಶ ನೀಡುತ್ತಿದ್ದರು. ನಾವೇನು ಕಾನೂನು ಬಿಟ್ಟು ಹೋಗುತ್ತಿಲ್ಲ. ಇಲ್ಲವೇ ಹೊಸ ನಿಯಮಗಳನ್ನು ಹುಟ್ಟುಹಾಕುತ್ತಿಲ್ಲ. ಹಿಂದೆ ಅನೇಕ ಸಂದರ್ಭಗಳಲ್ಲಿ ನಿಲುವಳಿ ಸೂಚನೆ ಮಂಡನೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದ ನಿದರ್ಶನಗಳು ಸಾಕಷ್ಟಿವೆ ಎಂದು ಪೂಜಾರಿ ಸಭಾಧ್ಯಕ್ಷರ ಗಮನಕ್ಕೆ 

ತಂದರು.