ತಾಳಿಕೋಟೆಯಲ್ಲಿ ಪ್ರಜಾಸೌಧ ಸ್ಥಳ ವಿರೋಧಿಸಿ ಧರಣಿ ಸತ್ಯಾಗ್ರಹಕ್ಕೆ ಸರಾಪ್ ಹಾಗೂ ಸುವರ್ಣಾಕಾರರ ಸಂಘದ ಬೆಂಬಲ 20ನೇ ದಿನಕ್ಕೆ ಕಾಲಿಟ್ಟ ಧರಣಿ
Sarap and Suvarnakara Sangha support the dharna satyagraha against the Praja Soudha site in Talikote
ತಾಳಿಕೋಟೆ 17: ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು 20ನೇ ದಿನಕ್ಕೆ ಮುಂದುವರಿದಿದೆ.ಈ ಹೋರಾಟಕ್ಕೆ ತಾಳಿಕೋಟಿ ಪಟ್ಟಣದ ಸರಾಪ್ ಹಾಗೂ ಸುವರ್ಣಾಕಾರರ ಸಂಘ (ರಿ.) ಸಂಪೂರ್ಣ ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿತು.
ಸಂಘದ ತಾಲೂಕು ಅಧ್ಯಕ್ಷ ಯಚರಣ್ಣ ಪತ್ತಾರ ಹಾಗೂ ಹಿರಿಯರಾದ ಪ್ರಭಾಕರ ಬಡಿಗೇರ ಮಾತನಾಡಿ, ಈಗಾಗಲೇ ಪ್ರಜಾಸೌಧ ಕಟ್ಟಡಕ್ಕೆ ನಿಗದಿಪಡಿಸಿರುವ ಸ್ಥಳ ತಾಳಿಕೋಟಿ ಪಟ್ಟಣದಿಂದ ಸುಮಾರು ಐದರಿಂದ ಆರು ಕಿಲೋಮೀಟರ್ ದೂರದಲ್ಲಿದೆ. ಇದರಿಂದ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು ಹಾಗೂ ರೈತರಿಗೆ ತುಂಬಾ ಅನಾನುಕೂಲ ಉಂಟಾಗಲಿದೆ ಎಂದು ಹೇಳಿದರು.
ಅದರೊಂದಿಗೆ ಆ ಸ್ಥಳ ನಿರ್ಜನ ಪ್ರದೇಶವಾಗಿರುವುದರಿಂದ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸುರಕ್ಷತೆಗೂ ಸಹ ಸೂಕ್ತವಲ್ಲದ ಸ್ಥಳವಾದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಳಿಕೋಟಿ ಪಟ್ಟಣದಲ್ಲಿರುವ ಸರ್ಕಾರಿ ಜಾಗೆಗಳಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಿಸಬೇಕು ಮತ್ತು ಈಗ ನಿಗದಿಪಡಿಸಿರುವ ಸ್ಥಳವನ್ನು ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ತಾಳಿಕೋಟಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣವಾಗುವವರೆಗೆ ತಮ್ಮ ಸಂಘ ಹಾಗೂ ಪಟ್ಟಣದ ಎಲ್ಲಾ ಸಮಾಜದ ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಪ್ರತಿದಿನವೂ ಭಾಗವಹಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ ರಾಠೋಡ, ಕಾರ್ಯದರ್ಶಿ ಭೀಮಾಶಂಕರ ಪತ್ತಾರ, ಮನೋಹರ ಎಸ್. ಪತ್ತಾರ, ಸುರೇಶ್ ಎಂ. ಪತ್ತಾರ, ಶಶಿಧರ ಕೆ. ಪತ್ತಾರ, ಈರಣ್ಣ ಆರ್. ವಿಶ್ವಕರ್ಮ, ಅಶೋಕ ವಿಶ್ವಕರ್ಮ, ಜಗದೀಶ್ ಎಂ. ಬಡಿಗೇರ, ಕೀರ್ತಿ ಓಸ್ವಾಲ್, ಬಸವರಾಜ ಪತ್ತಾರ, ಅನಂತ ಪತ್ತಾರ, ರಾಮಾನಂದ ಕುರ್ಡಕರ, ಪಾಂಡು ಪಾಂಡ್ರೆ, ಮಲ್ಲಿಕಾರ್ಜುನ ಪತ್ತಾರ,
ಪ್ರಭುಲಿಂಗ್ ವಿಶ್ವಕರ್ಮ, ಮಹೇಶ ಸೋನಾರ, ಸುನೀಲ ವರದಪ್ಪನವರ, ವಿಜಯ ಶೆಟ್ಟಿ ಸೇರಿದಂತೆ ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಮೆಹೆಬೂಬ ಚೋರಗಸ್ತಿ, ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಕಳಕೂಸಾ ರಂಗರೇಜ್, ಬಸವರಾಜ ಕಶೆಟ್ಟಿ, ಸಿದ್ದನಗೌಡ ಪಾಟೀಲ, ಮಯೂರ ಪಾಟೀಲ, ಮಹೇಶ ಛಲವಾದಿ, ಅಮಿತ್ ಮನಗೂಳಿ, ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ, ನಾಗೇಶ ಕಟ್ಟಿಮನಿ ಸೇರಿದಂತೆ ಅನೇಕರು ಹಾಗೂ ಪಟ್ಟಣದ ವಿವಿಧ ಸಮಾಜದ ಹಿರಿಯರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 