ಡಿ.12ರಿಂದ ಶರಣ ಸಂಗಮ ಕಾರ್ಯಕ್ರಮ: ಬಸವರಾಜ ಶ್ರೀ

ಲೋಕದರ್ಶನವರದಿ

ಗುಳೇದಗುಡ್ಡ: ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳ 34ನೇ ವಾಷರ್ಿಕ ಪುಣ್ಯಾರಾಧನೆಯ ನಿಮಿತ್ತ ನಡೆಯುವ ಶರಣ ಸಂಗಮ ಸಮಾರಂಭವು ಡಿ.12ರಿಂದ 19ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಶ್ರೀಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದ್ದಾರೆ. 

 ಪಟ್ಟಣದ ಶ್ರೀ ಗುರುಸಿದ್ದೇಶ್ವರ ಬ್ರಹನ್ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಣ ಸಂಗಮ ಸಮಾರಂಭವು ಗುಳೇದಗುಡ್ಡದ ಹಬ್ಬವಾಗಿದೆ. ಇದು ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಭಾವೈಕ್ಯತಾ ಸಮಾರಂಭವಾಗಿದ್ದು, ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸುವುದು ಶರಣ ಸಂಗಮದ ಉದ್ದೇಶವಾಗಿದೆ ಎಂದರು.

 ಜಗದ್ಗುರು ಗುರುಸಿದ್ದೇಶ್ವರ ಮಠ ಶಾಂತಿಯ ತೋಟವಾಗಿದೆ. ಶರಣ ಸಂಗಮ ಸಮಾರಂಭವು ಸರ್ವ ಸಮುದಾಯಗಳ ನೇತೃತ್ವದಲ್ಲಿ ಜರುಗಲಿದ್ದು, ಈ ಸಮಾರಂಭ ಸಾಮಾಜಿಕ, ಸಾಮರಸ್ಯ ಭಾವೈಕ್ಯತೆಯನ್ನು ಬೆಳೆಸುತ್ತದೆ. ಪ್ರತಿ ವರ್ಷ ಶರಣ ಧ್ವಜಾರೋಹಣವು ನಾನಾ ಧರ್ಮ ಜಾತಿ, ಮತ ಪಂಥಗಳಿಂದ ನಡೆಯುತ್ತದೆ. ಅರ್ಥಪೂರ್ಣ ಚಿಂತನೆಯ ವಿಶೇಷ ಕಾರ್ಯಕ್ರಮಗಳಲ್ಲಿ ನಾಡಿನ ಮಠಾಧೀಶರು, ಜನಪ್ರತಿನಿಧಿಗಳು, ಬುದ್ಧಿಜೀವಿಗಳು, ಚಿಂತಕರು, ವಿದ್ವಾಂಸರು ಭಾಗವಹಿಸಲಿದ್ದಾರೆ.

ಈ ಸಮಾರಂಭದ ಅಂಗವಾಗಿ ಡಿ.15ರಂದು ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ, ಔಷಧ ವಿತರಣಾ ಶಿಬಿರ, ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

       ಡಿ.19 ರಂದು ಕತೃ ಜಗದ್ಗುರುಗಳವರ ರಜತಮೂತರ್ಿ ಹಾಗೂ ವಚನ ಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ರಾಜಮಯರ್ಾದೆಗಳೊಂದಿಗೆ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಹಲವಾರು ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಜರುಗುವುದಲ್ಲದೇ ಅಂದು ಮಧ್ಯಾಹ್ನ ಅನ್ನಪೂಣರ್ಾ ಮುರಿಗೆಪ್ಪ ಹುಬ್ಬಳ್ಳಿ ಪರಿವಾರದರಿಂದ ಮಹಾಪ್ರಸಾದ ಇರುತ್ತದೆ. 

ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಚಿತ್ತರಗಿ ಮಹಾಸಂಸ್ಥಾನದ ಮ.ನಿ.ಪ್ರ. ಗುರುಮಹಾಂತ ಶ್ರೀಗಳು, ದಯಾನಂದಪುರಿ ಶ್ರೀಗಳು, ಜಗದ್ಗುರು ಪ್ರಭುಲಿಂಗ ಶ್ರೀ ಶಿವಶಂಕರ ಶಿವಾಚಾರ್ಯ ಶ್ರೀಗಳು, ಬೆಳ್ಳೇರಿ ಶಿವಾನಂದ ಮಠದ ಡಾ.ಬಸವಾನಂದ ಮಹಾಸ್ವಾಮಿಗಳು, ಶ್ರೀ ಶಿವಶರಣ ದೇವರು, ಶ್ರೀ ಗುರುಬಸವ ದೇವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿವರು.

 ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಸಂಸದ ಬಿ.ವಾಯ್. ರಾಘವೇಂದ್ರ, ಮಾಜಿ ಸಚಿವ ಎಂ.ಬಿ.ಪಾಟೀಲ,  ಎಂಎಲ್ಸಿ ಕೆ.ಸಿ.ಕೊಂಡಯ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಆಗಮಿಸುವರು ಎಂದು ಶ್ರೀಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬೆಳ್ಳೇರಿ ಶಿವಾನಂದ ಮಠದ ಡಾ.ಬಸವಾನಂದ ಮಹಾಸ್ವಾಮಿಗಳು, ಶರಣ ಸಂಗಮ ಸಮಾರಂಭದ ಅಧ್ಯಕ್ಷ ಪ್ರಕಾಶ ರೋಜಿ, ಕಾರ್ಯದಶರ್ಿ ಮಂಜುನಾಥ ರಾಜನಾಳ, ವಿವೇಕಾನಂದ ಪರಗಿ ಹಾಗೂ ಇತರರು ಇದ್ದರು.