ಶಿಗ್ಗಾವಿ : ಶರಣರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರ ಜಯಂತಿ ಆಚರಣೆಯ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವ ಕಡೆ ಇಂದಿನ ಯುವಕರು ಮುಂದಾಗಬೇಕು, ಎಂದು ತಹಶೀಲ್ದಾರ ಚಂದ್ರಶೇಖರ ಗಾಳಿ ಹೇಳಿದರು.
ಶುಕ್ರವಾರ ಪಟ್ಟಣದ ತಹಶೀಲ್ದಾರರ ಕಾಯರ್ಾಲಯದಲ್ಲಿ ನಡೆದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿಯ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಡಪದ ಸಮಾಜವರು ತೀಮರ್ಾನಿಸಿದಂತೆ ಅವರಿಗೆ ಸಕರ್ಾರದ ನಿಯಮಾನುಸಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದರ ಜೊತೆಗೆ ಜಯಂತಿಯನ್ನು ವಿಜೃಂಬಣೆಯಿಂದ ಆಚರಿಸಲು ಸಹಕರಿಸಲಾಗುವುದು ಎಂದು ಹೇಳಿ ಪೂರ್ವಭಾವಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದರು.
ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಮಾತನಾಡಿ, ಶರಣರನ್ನು ಹಾಗೂ ದಾರ್ಶನಿಕರನ್ನು ಒಂದೇ ಸಮಾಜಕ್ಕೆ ಸೀಮಿತಗೊಳಿಸದೇ ಅವರ ತತ್ವ ಪಾಲನೆಯನ್ನು ತಿಳಿದು ಅವರ ಜಯಂತಿಯನ್ನು ಸ್ವಾಭಿಮಾನದಿಂದ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಭೆಕು, ಹಡಪದ ಅಪ್ಪಣ್ಣವರು ಬಸವ ತತ್ವದ ಪರಿಪಾಲಕರು ಮತ್ತು ಬಸವಣ್ಣನವರ ಆಪ್ತ ಕಾರ್ಯದಶರ್ಿಯಾಗಿದ್ದರು, ದೊಡ್ಡ ಮೆದಾವಿಗಳು ಅಪ್ಪಣ್ಣನವರು, ಜಾತಿಯತೆಯಂತಹ ಅನಿಷ್ಟ ಪದ್ಧತಿಗಳನ್ನು ತೊಳೆಯಲು ಶ್ರಮಿಸಿದವರು. ಈ ಸಮಾಜ ನಿಷ್ಠೆಯ ಸಮಾಜವಾಗಿದೆ ಆದ್ದರಿಂದಲೇ ಎಲ್ಲ ಸಮಾಜದರನ್ನು ಕರೆದು ಸಭೆ ಮಾಡಿರುವದು ಅನುಭವ ಮಂಟಪವನ್ನು ನೋಡಿದಂತಾಗುತ್ತದೆ ಹಡಪದ ಸಮಾಜದವರು ಜಿಲ್ಲೆಯಲ್ಲಿ ಕ್ರಾಂತಿಯನ್ನೇ ಮಾಡುತ್ತಿದ್ದಾರೆ ಎಂದರು.
ಹಡಪದ ಸಮಾಜದ ತಾಲೂಕಾ ಅಧ್ಯಕ್ಷ ಬಸವರಾಜ ಹಡಪದ ಮಾತನಾಡಿ ಜಯಂತಿ ಕೇವಲ 2-3 ದಿನ ಇರುವ ಮುಂಚಿತವಾಗಿ ಪೂರ್ವಭಾವಿ ಸಭೆ ಕರೆದಿರುವದು ಬೇಸರ ಸಂಗತಿಯಾಗಿದೆ, ಆದರೂ ತಹಶೀಲ್ದಾರರು ನಮಗೆ ಉತ್ತಮ ಸಹಕಾರ ನೀಡುತ್ತಿರುವದು ಸಂತಸ ತಂದಿದೆ, ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯನ್ನ ರಾಜ್ಯ ಸಕರ್ಾರದ ನಿದರ್ೇಶನದ ಮೇರೆಗೆ ಇದೇ ಜುಲೈ 16 ರಂದು ಮಂಗಳವಾರ ಕಡ್ಲಿಗಡಬ ಹುಣ್ಣಿಮೆಯ (ಗುರು ಪೂಣರ್ಿಮಾ) ದಿವಸ ಸಾಂಕೇತಿಕವಾಗಿ ಸಕರ್ಾರಿ ಕಛೇರಿಗಳಲ್ಲಿ ಆಚರಿಸಲಿ ನಂತರ ಸಮಾಜದ ವತಿಯಿಂದ ವಿಜೃಂಭಣೆಯಿಂದ ಆಚರಿಸಲು ಹಡಪದ ಸಮಾಜದ ತಿಮರ್ಾನದಂತೆ ಮತ್ತೊಂದು ದಿನಾಂಕದಂದು ಶಾಸಕರ, ಜನಪ್ರತಿನಿಧಿಗಳ ಹಾಗೂ ಹಡಪದ ಸಮಾಜ ಸಂಘಟನೆಯ ತೀಮರ್ಾನದಂತೆ ರಾಜ್ಯ ಮುಖಂಡರ ಜೊತೆಗೆ ಸ್ಥಳೀಯ ವಿವಿಧ ಸಮಾಜಗಳ ಮುಖಂಡರ, ಸಂಘ-ಸಂಸ್ಥೆಗಳ, ಕನ್ನಡಪರ ಹೋರಾಟಗಾರರ ಉಪಸ್ಥಿತಿಯಲ್ಲಿ ಆಚರಿಸಲು ಮನವಿ ಮಾಡಿದರು.
ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಶಿವಾನಂದ ಬಾಗೂರ, ಭಾಜಪ ಮುಖಂಡ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಪರಶುರಾಮ ಸೋನ್ನದ, ನ್ಯಾಯವಾದ ಬಸವರಾಜ ಜಕ್ಕನಕಟ್ಟಿ ಮಾತನಾಡಿದರು.
ಗೌರವಾದ್ಯಕ್ಷ ಶಂಕ್ರಪ್ಪ ಮಡ್ಲಿಕರ, ಅಶೋಕ ಕಾಳೆ, ಶಶಿಧರ ಹೊನ್ನಣ್ಣವರ, ದುರಗಪ್ಪ ವಡ್ಡರ, ಸುರೇಶ ಹರಿಜನ, ಸಮಾಜದ ಹಿರಿಯರಾದ ಈರಪ್ಪ ಹಡಪದ, ಬಸವಣ್ಣೆಪ್ಪ ಹಡಪದ, ಮುತ್ತುರಾಜ ಹಡಪದ, ಬಸವರಾಜ ಕಟ್ಟಿಮನಿ, ಮುತ್ತುರಾಜ ಕ್ಷೌರದ, ಮಲ್ಲಿಕಾಜರ್ುನ ಹಡಪದ, ಶಿವರಾಜ ಕ್ಷೌರದ, ಶಿವಕುಮಾರ ಮಡ್ಲಿಕರ, ಮಾಲತೇಶ ಹಡಪದ, ತಿರಕಪ್ಪ ಹಡಪದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹಡಪದ ಸಮಾಜದ ಬಾಂಧವರು, ಕಛೇರಿಯ ಸಿಬ್ಬಂದಿ ಇದ್ದರು, ಶಿರಸ್ಥದಾರ ರವಿ ಕೊರವರ ಕಾರ್ಯಕ್ರಮ ನಿರ್ವಹಿಸಿದರು.