ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ

ಅಥಣಿ 29:  ಸವದಿ ಗ್ರಾಮದಲ್ಲಿ  ಶ್ರೀ ಸಂಗನಬಸವ ಶಿವಯೋಗಿಗಳವರ 78ನೇ "ಪುಣ್ಯ ಸ್ಮರಣೋತ್ಸವ ಮತ್ತು ಲಿಂ. ಡಾ. ಮಹಾಂತ ಶಿವಯೋಗಿಗಳ ದ್ವೀತಿಯ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವ" ಅಂಗವಾಗಿ ಸವದಿ-ಇಲಕಲ್ ಮಠದ ಶ್ರೀ ಗುರುಮಹಾಂತ ಸ್ವಾಮಿಜಿಗಳವರ ಅಧ್ಯಕ್ಷತೆಯಲ್ಲಿ  ಮಾರ್ಚ 1, 2 ಹಾಗೂ 3 ರವರೆಗೆ ವಿಜೃಂಭಣೆಯಿಂದ "ಶರಣ ಸಂಸ್ಕೃತಿ ಮಹೊತ್ಸವ " ವಿವಿಧ ಕಾರ್ಯಕ್ರಮಗಳು ಜರುಗಲಿವೆ. 

ಮಾರ್ಚ 1 ರಂದು ಸಂಜೆ 6-30 ಗಂಟೆಗೆ 'ಶಾಂತಿ ಪಾಲನಾ ಗೋಷ್ಠಿ ಹಾಗೂ ಆರಕ್ಷಕರ ದಂಪತಿಗಳಿಗೆ ಗೌರವ ಸತ್ಕಾರ ಕಾರ್ಯಕ್ರಮಗಳು ಜರುಗಲಿವೆ. ಗದಗದ ಡಾ. ತೋಂಟದ ಸಿದ್ದರಾಮ ಶಿವಯೋಗಿಗಳು ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಲಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಮಲ್ಲಿಕಾಜರ್ುನ ಶ್ರೀಗಳು, ಬಸವಲಿಂಗ ಶ್ರೀಗಳು, ಮಧುರಖಂಡಿಯ ಈಶ್ವರ ಮಂಟೂರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಪೋಲಿಸ್ ಮಹಾನಿರ್ದೇಶಕ ಡಾ. ಶಂಕರ ಬಿದರಿ ಉದ್ಘಾಟಿಸುವರು. ಲೋಕೇಶಕುಮಾರ ಜಗಲಾಸರ, ರಾಮ ಅಮರಸಿದ್ದಿ, ಎಸ್.ವ್ಹಿ. ಗೀರಿಶ ಸೇರಿದಂತೆ ಅನೇಕರಿಗೆ ಗೌರವ ಸತ್ಕಾರ ಜರುಗಲಿದೆ. ಮಾರ್ಚ 2 ರಂದು ಸಂಜೆ 6-30 ಗಂಟೆಗೆ ಕೃಷಿ ಗೋಷ್ಠಿ, ಸತ್ಯಪ್ಪ ಶರಣ ಪ್ರಶಸ್ತಿ,  ಪ್ರತಿಭಾ ಪುರಸ್ಕಾರ, ಆದರ್ಶ ರೈತ ದಂಪತಿಗಳಿಗೆ " ಭೂಮಿ ಪುತ್ರ  ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಲಿದೆ. ನಿಡಸೋಸಿಯಪಂಚಮ ಶಿವಲಿಂಗೇಸ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮರೆಗುದ್ದಿಯ ನಿರುಪಾದೇಶ್ವರ ಸ್ವಾಮಿಜಿ. ಅಥಣಿ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮಿಜಿ, ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕರಾದ ಮಹೇಶ ಕುಮಠಳ್ಳಿ, ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

    ಕೊನೆಯ ದಿನ  ಮಾರ್ಚ 3 ರಂದು  ಮುಂಜಾನೆ 10 ಗಂಟೆಗೆ  ವಿಶ್ವಗುರು ಬಸವಣ್ಣನವರ ಹಾಗೂ ಲಿಂ. ಶ್ರೀಸಂಗನಬಸವ ಶಿವಯೋಗಿಗಳವರ, ಲಿಂ ಡಾ. ಮಹಾಂತ ಶಿವಯೋಗಿಗಳವರ ಭಾವಚಿತ್ರ ಹಾಗೂ ವಚನ ಸಾಹಿತ್ಯ ಗ್ರಂಥಗಳ ಉತ್ಸವ ಜರುಗಲಿದೆ. ಸಂಜೆ 6.30 ಗಂಟೆಗೆ ವಿಶ್ವ ಬಸವಧರ್ಮ ಸಮಾವೇಶ, ರಾಜ್ಯಮಟ್ಟದ ಡಾ. ಮಹಾಂತ ಸಾಹಿತ್ಯ ಪ್ರಶಸ್ತಿ, ಶರಣ ದಂಪತಿಗಳಿಗೆ ಗೌರವ ಸನ್ಮಾನ, ರಾಷ್ಟ್ರೀಯ ಬಸವ ಸೇನೆ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.  ಓಲೇಮಠದ ಡಾ. ಅಭಿನವ ಚನ್ನಬಸವ ಮಹಾಸ್ವಾಮಿಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರದುರ್ಗದ ಡಾ. ಶಿವಮೂರ್ತಿ  ಮುರಘರಾಜೇಂದ್ರ ಶರಣರು ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಶರಣ ಬಸವ ಶರಣರು, ಗುರುಬಸವ ಶರಣರು ಸಮ್ಮುಖ ವಹಿಸಲಿದ್ದಾರೆ.  ಗಜಾನನ ಮಂಗಸೂಳಿ, ಬಸವರಾಜ ಬುಟಾಳೆ, ನಿಂಗಪ್ಪ ಚೌಗಲಾ, ಅಣ್ಣಾರಾಯ ಹಾಲಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೀಗೆ ನಾಲ್ಕು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಸವದಿ ಶ್ರೀಮಠದ ಪೀಠಾಧಿಪತಿಗಳಾದ ಗುರುಮಹಾಂತ ಸ್ವಾಮಿಜಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.