ಬಸವೇಶ್ವರ ಕೋ-ಆಪ. ಬ್ಯಾಂಕ್ ಅಧ್ಯಕ್ಷರಾಗಿ ಸರಳಾ ಹೇರೆಕರ ಆಯ್ಕೆ
Sarala Herekar elected as Chairperson of Basaveshwara Co-operative Bank
ಲೋಕದರ್ಶನ ವರದಿ
ಬೆಳಗಾವಿ 25: ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸರಳಾ ಶಿವಾನಂದ ಹೇರೆಕರ ಅವರು ಆಯ್ಕೆಯಾದರು. ಅಧ್ಯಕ್ಷರಾಗಿದ್ದ ರಮೇಶ್ ಮಹಾರುದ್ರ್ಪ ಕಳಸಣ್ಣವರ ಅವರು 2026ರ ಜುಲೈ 1ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವಾಲಕುಮಾರ ಅಂಟಿನ ಅವರ ನೇತೃತ್ವದಲ್ಲಿ ಶುಕ್ರವಾರ, ಜುಲೈ 24ರಂದು ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ನಡೆದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಸರಳಾ ಶಿವಾನಂದ ಹೆರೆಕರ ಅವರು ಬಹುಮತದ ಬೆಂಬಲದೊಂದಿಗೆ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರನ್ನು ಬ್ಯಾಂಕಿನ ಉಪಾಧ್ಯಕ್ಷ ಸಚಿನ್ ಆರ್. ಶಿವಣ್ಣವರ, ನಿರ್ದೇಶಕರಾದ ವಿಜಯಕುಮಾರ ಅಂಗಡಿ, ರಮೇಶ್ ಎಂ. ಕಳಸಣ್ಣವರ, ರಮೇಶ್ ಸಿದ್ದಣ್ಣವರ, ಬಸವರಾಜ ಉಪ್ಪಿನ, ಗೀರೀಶ ಬಾಗಿ, ಸತೀಶ ಪಾಟೀಲ, ಬಾಲಚಂದ್ರ ಬಾಗಿ, ಜಗದೀಶ ಖಡಬಡಿ, ಪೂಜಾ ಹುಕ್ಕೇರಿ, ನಿಖಿಲ್ ರೆಟೊಂಡ, ಭಾರತಿ ಕಗ್ಗಣಗಿ, ದಯಾನಂದ ಬಾಳೇಕುಂದ್ರಿ, ಸುಭಾಷ ಕತ್ತಿ, ರಾಜೀವ ಕಾಳೇನಟ್ಟಿ ಹಾಗೂ ಚಂದ್ರಕಾಂತ ಕಟ್ಟಿಮನಿ ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವಾಲಕುಮಾರ ಅಂಟಿನ ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗ ಅಭಿನಂದಿಸಿದರು. ನೂತನ ಅಧ್ಯಕ್ಷೆ ಸರಳಾ ಶಿವಾನಂದ ಹೆರೆಕರ ಅವರು ಮಾತನಾಡಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹಾಗೂ ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಪಾರದರ್ಶಕ ಮತ್ತು ಜನಪರ ಆಡಳಿತ ನೀಡಲು ಬದ್ಧರಾಗಿರುವುದಾಗಿ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 