ಸಾರಾ ಮಹೇಶ್ ಟೀಕೆಯಿಂದ ರಾಜ್ಯಸಭೆ ಘನತೆಗೆ ಚ್ಯುತಿ: ನಿರ್ಮಲಾ ಸೀತಾರಾಮನ್


ನವದೆಹಲಿ 25: ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್  ಕೊಡಗು ಭೇಟಿ ವೇಳೆ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ. ರಾ. ಮಹೇಶ್  ಅವರ ಮೇಲೆ ಕೋಪಗೊಂಡಿದ್ದರು ಎಂಬ ವಿಚಾರ ಇದೀಗ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚಚರ್ೆಯಾಗುತ್ತಿದೆ. 

ಈ ಕುರಿತಂತೆ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್  ಸಾರಾ ಮಹೇಶ್ ಟೀಕೆಯು  ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿಯುಂಟು ಮಾಡುವಂತಹುದಾಗಿದೆ. ಹಾಗೂ ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ  ಗೌರವ ಮತ್ತು ತಿಳುವಳಿಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇಲ್ಲ ಎನ್ನುವುದನ್ನು ತೋರಿಸಿದೆ ಎಂದು ಹೇಳಿದ್ದು, ವಿವಾದ ಮತ್ತಷ್ಟು ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. 

ಈ ಕುರಿತು ಸ್ಪಷ್ಟನೆ ನೀಡುವ ದೃಷ್ಟಿಯಿಂದ  ಅಂದಿನ ಕಾರ್ಯಕ್ರಮದ ಪೂರ್ಣ ಮಾಹಿತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ.  ಹಾನಿಗೀಡಾದ ಪ್ರದೇಶಗಳ ಭೇಟಿ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ಸಂವಾದ ನಡೆಸುವಾಗ ಜಿಲ್ಲಾ ಉಸ್ತುವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಮೊದಲು ಸಭೆಯನ್ನು ನಡೆಸಬೇಕು ಎನ್ನುವುದು ಅವರ ವಾದವಾಗಿತ್ತು. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಆ ಸಭೆ ನಿಲ್ಲಿಸಿ ಅಧಿಕಾರಿಗಳ ಸಬೆಗೆ ಹೋಗಬೇಕೆಂದು ಒತ್ತಾಯಿಸಿದರು ಎಂದು  ಪ್ರತಿಕ್ರಿಯಿಸಿದ್ದಾರೆ. 

ರಕ್ಷಣಾ ಮಂತ್ರಿಗಳ ವಿರುದ್ಧ  ಮಾಡಿರುವ ವೈಯಕ್ತಿಕ ಟೀಕೆಯು ಕೀಳು ಅಭಿರುಚಿಯಿಂದ  ಕೂಡಿದ್ದಾಗಿದೆ. ಅವರ ಈ ನಡವಳಿಕೆಯು ಪ್ರತಿಕ್ರಿಯೆಗೂ ಯೋಗ್ಯವಲ್ಲ ಎಂಬುದಾಗಿ ನಿರ್ಮಲಾ ಸೀತಾರಾಮನ್  ಕಟುವಾಗಿ ಟೀಕಿಸಿದ್ದಾರೆ.