ಯರಗಟ್ಟಿ 10: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕರು, ಭಜರಂಗದಳ ಹಾಗೂ ಹನುಮಾನ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯಿತು.
ಮಾರುತಿ ದೇವಸ್ಥಾನ ಆವರಣದಿಂದ ಆರಂಭವಾದ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ, ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಜಯಘೋಷ ಮೊಳಗಿದವು. ಲೋಕಾಪೂರ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧರ್ಮ ಜಾಗರಣ ಪ್ರಾಂತ ಸಂಯೋಜಕರಾದ ದೀಲಿಪಜೀ ವರ್ಣೇಕರ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಆನಂದ ನಾಯ್ಕ, ಗೋವಿಂದ ಪೂಜೇರ, ಶಿವನಾಯಕ್ ಬೂದಿಗೊಪ್ಪ, ಮಂಜು ಕೊಪ್ಪದ, ಮಾರುತಿ ಭಜಂತ್ರಿ, ಅಪ್ಪಣ್ಣ ನಾವಿ, ವಿನಾಯಕ ರಾಯರ, ಶ್ರೀಧರ ಗಾಣಗಿ, ವಿಕಾಸ್ ಚಟ್ಟಿ, ಸೋಮನಾಯಕ ಬೂದಿಗೊಪ್ಪ, ಅಜೀತ ಸುರೇಬಾನ, ಪ್ರವೀಣ ಬೆಣ್ಣಿ, ಸಂತೋಷ ವಾಲಿ, ಸಾಗರ ಪಾಳೇಕರ, ಸೋನು ತಲ್ಲೂರ, ವಿಠ್ಠಲ ದಿಡಗನ್ನವರ,ಶಿವು ಬಾರ್ಕಿ, ಸೋಮು ದುಗ್ಗಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.