ಸಂಕೇಶ್ವರ : ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೇವದಂಡ ತಾಲೂಕಾ ಅಲಿಬಾಗ್ ದ ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಸಂಕೇಶ್ವರ ಪಟ್ಟಣದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಅಪ್ಪಾಸಾಹೇಬ ಧರ್ಮಾಧಿಕಾರಿ ಮತ್ತು ರಾಯಗಡ ಭೂಷಣ ಡಾ. ಸಚ್ಚಿಂದದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಸಂಕೇಶ್ವರ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳು, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಸ್ಮಶಾನ ಮುಂತಾದೆಡೆ ಯಶಸ್ವಿಯಾಗಿ ಈ ಅಭಿಯಾನ ಪೂರ್ಣಗೊಂಡಿತು. ಈ ಸ್ವಚ್ಛತಾ ಅಭಿಯಾನದಲ್ಲಿ ಸಂಕೇಶ್ವರ, ನಿಪಾಣಿ, ಬೆಳಗಾವಿ, ಕಂಗಳೆ, ಚಿಕ್ಕೋಡಿ ಮೊದಲಾದೆಡೆಯಿಂದ ಸುಮಾರು 600 ಜನರು ಈ ಅಭಿಯಾನ ಕಾರ್ಯಕ್ಕೆ ಆಗಮಿಸಿದ್ದರು. ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು. ತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ 40 ಟನ್ ತ್ಯಾಜ್ಯ ಸಂಗ್ರಹಿಸಿ ಸರಿಯಾಗಿ ನಿರ್ವಹಣೆ ಮಾಡಲಾಗಿದೆ.
ಮಹಾರಾಷ್ಟ್ರ ಭೂಷಣ ಡಾ. ನಾನಾಸಾಹೇಬ್ ಧರ್ಮಾಧಿಕಾರಿ ಇವರು ಓರ್ವ ಮಹಾನ್ ಸಮಾಜ ಸುಧಾರಕರಾಗಿದ್ದು, ಅವರ ಪೂರ್ವಜರಿಂದ ಸಮಾಜವನ್ನು ಸುಧಾರಣೆಯ ಪರಿಕಲ್ಪ ಪಡೆದು ಆನುವಂಶಿಕವಾಗಿ ಈ ಕಾರ್ಯ ಪಡೆದರು. ಮಾನವ ಅಸ್ತಿತ್ವದ ಪ್ರತಿಯೊಂದು ಹಂತದಲ್ಲೂ ಸಮಾಜದಿಂದ ಅಜ್ಞಾನವನ್ನು ತೊಡೆದುಹಾಕುವ ಕಾರ್ಯಕ್ಕಾಗಿ ಅವರು
ಸ್ವತಃ ಶರಣಾದರು. 1943ರ ಅಕ್ಟೋಬರ್ 8ರಂದು ವಿಜಯದಶಮಿಯಂದು ಸಾಮಾಜಿಕ ಜಾಗೃತಿಯ ಬುನಾದಿ ಹಾಕಿದರು. ಅದೇ ರೀತಿ ಈ ಅಭಿಯಾಣವನ್ನು ರವಿವಾರ ಸಂಕೇಶ್ವರ ಪಟ್ಟಣದಲ್ಲಿ ಆಯೋಜನೆ ಮಾಡಲಾಯಿತು.
ಈ ಸ್ವಚ್ಛತಾ ಅಭಿಯಾನಕ್ಕೆ ಪುರಸಭೆ ಅಧ್ಯಕ್ಷ ಸೀಮಾ ಹತನೂರಿ, ಮಾಜಿ ಉಪಾಧ್ಯಕ್ಷ ಅಮರ ನಲವಡೆ, ಪುರಸಭೆ ಸದಸ್ಯರಾದ ಸಂಜಯ ಶಿರಕೋಳಿ, ಮಹೇಶ ಹಟ್ಟಿಹೊಳಿ, ಡಾ. ಜಯಪ್ರಕಾಶ ಕರಜಗಿ, ಚಿದಾನಂದ ಕರದನ್ನವರ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಅವಿನಾಶ ನಲವಡೆ, ಸಂತೋಷ ಮುಡಶಿ, ಅಭಿಜಿತ ಕುರಣಕರ, ಜಯಪ್ರಕಾಶ್ ಸಾವಂತ, ಗಜಾನನ ಮೋಕಾಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.