ಜೈಪುರ 03: ಮಹಾ ಕುಂಭಮೇಳದ ವೇಳೆ ಬೆಳಕಿಗೆ ಬಂದು ಸುದ್ದಿಯಾಗಿದ್ದ ಐಐಟಿ ಬಾಬಾ ಎಂದೇ ಜನಪ್ರಿಯರಾಗಿದ್ದ ಅಭಯ್ ಸಿಂಗ್ ಅವರನ್ನು ಜೈಪುರದಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸ್ ರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಪುರದ ರಿದ್ಧಿ ಸಿದ್ಧಿ ಪ್ರದೇಶದ ಹೋಟೆಲ್ನಲ್ಲಿ ಉಳಿದುಕೊಂಡು ಗದ್ದಲ ಸೃಷ್ಟಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ನಂತರ ಐಐಟಿ ಬಾಬಾನನ್ನ ವಶಕ್ಕೆ ಪಡೆಯಲಾಯಿತು. ಪೊಲೀಸರು ಸ್ಥಳಕ್ಕೆ ತಲುಪಿ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅದು ಕಡಿಮೆ ಪ್ರಮಾಣದಲ್ಲಿತ್ತು ಎಂದು ತಿಳಿದು ಬಂದಿದೆ. ಪತ್ತೆಯಾದ ಗಾಂಜಾ ಪ್ರಮಾಣವು ಅನುಮತಿಸಲಾದ ಮಿತಿಯೊಳಗೆ ಇದ್ದುದರಿಂದ ಪೊಲೀಸರು ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಯಂ ಘೋಷಿತ ಬಾಬಾ ಸಿಂಗ್, ನನ್ನಲ್ಲಿದ್ದುದು ಪ್ರಸಾದ ಎಂದು ಹೇಳಿಕೊಂಡಿದ್ದಾರೆ.