ಸ್ಥಳೀಯ ಕ್ರೀಡೆಗಳು ಸಂಸ್ಕೃತಿ, ಪರಂಪರೆ ,ಏಕತೆ ಪ್ರತಿಬಿಂಬಿಸುತ್ತವೆ : ಬಗಾಡೆ
ಶಿಗ್ಗಾವಿ 03 ; ಸ್ಥಳೀಯ ಕ್ರೀಡೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಮುದಾಯದ ಏಕತೆಯನ್ನು ಪ್ರತಿಬಿಂಬಿಸುತ್ತವೆ ಎಂದು ತಾಲೂಕ ಸಿಂಪಿ ಸಮಾಜ ಅದ್ಯಕ್ಷ ಕೇದಾರ್ಪ ಬಗಾಡೆ ಹೇಳಿದರು. ತಾಲೂಕಿನ ಹಿರೇಮಣಕಟ್ಟಿಯಲ್ಲಿ ಮುರಘೆಂದ್ರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆದ ಕುಸ್ತಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ಕ್ರೀಡೆಗಳು ನಮ್ಮ ಸಂಸ್ಕೃತಿ, ಶಾರೀರಿಕ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಹಾಯಕವಾಗಿವೆ ಅಲ್ಲದೇ ಈ ಸ್ಪರ್ಧೆ ಮೂರು ದಿನಗಳವರೆಗೆ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಸಮಾರಂಭದ ಆಯೋಜಕ ವಿರೂಪಾಕ್ಷಪ್ಪ ಪಟ್ಟೆದ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸಲು ಸಹಾಯಕವಾಗುತ್ತವೆ ಎಂದು ಅಭಿಪ್ರಾಯ ಪಟ್ಟರು. ಸಮಾರಂಭದಲ್ಲಿ ಸ್ಥಳೀಯ ಗಣ್ಯರಾದ ಶಿವಯೋಗಿ ಚರಂತಿಮಠ, ವಿರೂಪಾಕ್ಷಪ್ಪ ಪಟ್ಟೆದ, ಸಿದ್ದಪ್ಪ ಹರಿಜನ, ರಾಮಣ್ಣ ಕಮಡೊಳ್ಳಿ, ಗೂಳಪ್ಪ ಜಾರಗಡ್ಡಿ, ಬಸವಂತಪ್ಪ ವಾಲ್ಮೀಕಿ, ವಿರೂಪಾಕ್ಷಪ್ಪ ಅಂಗಡಿ, ಶಿವಪ್ಪ ಬಿಸ್ಟನ್ನವರ, ರಾಮಣ್ಣ ಹುಲ್ಲೂರು, ಶಿವನಗೌಡ್ ನಿಂಗನಗೌಡ್ರ, ಹಾಗೆ ಕ್ರೀಡಾಪ್ರೇಮಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.