ಜನೌಷಧಿ ಬಡವರ ಸಂಜೀವಿನಿ: ಬನ್ನಿ

 ಗುಳೇದಗುಡ್ಡ೦8: ಕೇಂದ್ರ ಸರ್ಕಾರ  ಅದರಲ್ಲಿಯೂ ಪ್ರಧಾನಿ ಮೋದಿಯವರು ಬಡವರನ್ನು ಕೇಂದ್ರವಾಗಿರಿಸಿಕೊಂಡು ದೇಶಾದ್ಯಂತ ತೆರೆದಿರುವ ಜನೌಷಧಿ ಮಳಿಗೆಗಳು ಬಡವರ ಸಂಜೀವಿನಿ ಕೇಂದ್ರಗಳಾಗಿವೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ  ಬನ್ನಿ ಹೇಳಿದರು.

   ಅವರು ಶನಿವಾರ ಇಲ್ಲಿನ ಜನೌಷಧಿ ದಿನದ ಅಂಗವಾಗಿ ಪಟ್ಟಣದ ನಾಡಕಚೇರಿ ಹತ್ತಿರವಿರುವ ಜನೌಷಧಿ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ದೊರಕುವ ದುಬಾರಿ ಔಷಧಿ ಬಡವರಿಗೆ ಸಿಗದಂತಾಗಿದೆ. ಇದರಿಂದ ಲಕ್ಷಾಂತರ ಜನ ಸರಿಯಾದ ಔಷಧಿ ಇಲ್ಲದೇ ಸಾಯುವಂತಾಗಿದೆ. ಇದನ್ನರಿತ ಪ್ರಧಾನಿ ಮೋದಿಯವರು ತೆರೆದಿರುವ ಜನೌಷಧಿ ಕೇಂದ್ರಗಳು ದೇಶಾದ್ಯಂತ ಬಡವರನ್ನು ಬದುಕಿಸುವ ಆಶಾಕಿರಣಗಳಾಗಿ ಕಂಡು ಬರುತ್ತಿವೆ. ಕಡೆಮೆ ಬೆಲೆಗೆ ಗುಣಮಟ್ಟದ ಎಲ್ಲ ತರದ ಔಷಧಿಗಳು ಜನರಿಗೆ ಇಂದು ಲಭ್ಯವಾಗುತ್ತಿವೆ. ಇಂತಹ ಯೋಜನೆಗಳನ್ನು ತೆರೆದಿರುವ ಪ್ರಧಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲೇ ಬೇಕು. ಸಾರ್ವಜನಿಕರು ಈ ಮಳಿಗೆಯ ಪ್ರಯೋಜನ ಪಡೆಯಬೇಕೇಂದು  ಹೇಳಿದರು. 

   ಅಟಲ್ಜೀ ಸಂಘದ ಅಧ್ಯಕ್ಷ ಸಿದ್ದು ಅರಕಾಲಚಿಟ್ಟಿ, ಮಧುಸೂಧನ ರಾಂಧಡ, ಪಾಂಡು ಹಾದಿಮನಿ, ಶ್ರೀಕಾಂತ ಭಾವಿ, ಮುತ್ತಣ್ಣ ಕಳ್ಳಿಗುಡ್ಡ, ಲಕ್ಷ್ಮೀ ಸಹಕಾರಿ ಬ್ಯಾಂಕಿನ ನಿದೇರ್ಶಕರಾದ ಗಣೇಶ ಶೀಲವಂತ, ಸಂಜಯ ಕಾರಕೂನ, ಮಹೇಶ ಭಾರತಿ, ಜನೌಷಧಿ ಕೇಂದ್ರದ ಮಲಿಕರಾದ ಶ್ರೀಕಾಂತ ಭಾವಿ,ಶಶಿ ಉದ್ನೂರ ಸೇರಿದಂತೆ ಇತರರು ಇದ್ದರು.