ಸಾರ್ವಜನಿಕರ ಪಾಲಿಗೆ ಸಂಜೀವಿನಿಯಾದ ಸರಕಾರಿ ಆಸ್ಪತ್ರೆ

ಲೋಕದರ್ಶನ ವರದಿ

ಮುದಗಲ್ಲ 21: ಪಟ್ಟಣ ಸಮೀಪದ ಮಟ್ಟೂರ ಗ್ರಾಮದ ಪಡಿತರ ಫಲಾನುಭವಿಗಳು ನೆರೆ ಸಂತ್ರಸ್ತರಿಗೆ ಒಂದು ತಿಂಗಳದ 300ಚೀಲ ಪಡಿತರ ಅಕ್ಕಿ ಹಸ್ತಾಂತರಿಸಿ ನೊಂದ ಹೃದಯಗಳಿಗೆ ನೆರವು ನೀಡಿದ್ದಾರೆ. 

ಪಡಿತರ ಫಲಾನುಭವಿಗಳಿಗೆ ಬಂದ ಆಗಸ್ಟ್ ತಿಂಗಳ ಪಡಿತರ ಅಕ್ಕಿಯನ್ನು ಫಲಾನುಭವಿಗಳು ಪಡೆಯದೇ ಬಯೋಮೆಟ್ರೀಕ್ ಸೆರೆಹಿಡದ ಬಳಿಕ ಲಾರಿತುಂದ ಚೀಲವನ್ನು ಬಾಗಲಕೋಟೆಯ ಮುಳುಗಡೆ ಪ್ರದೇಶವಾಗಿರುವ ಕೋಡಲಸಂಗಮ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು.

ವಿಎಸ್ಎಸ್ಎನ್ ಕಾರ್ಯದಶರ್ಿ ಚಂದ್ರಶೇಖರ ಚುಕನಟ್ಟಿ ಮಾತನಾಡಿ, ನದಿಗಳ ನರ್ತನಕ್ಕೆ ರಾಜ್ಯದ ಹಲವು ಗ್ರಾಮಗಳು ಮುಳುಗಿ ಆಲ್ಲಿನ ಜನಜೀವನ ಅಸ್ತವ್ಯವಸ್ತವಾಗಿವೆ. ಎಲ್ಲಾರಿಗೂ ನಮ್ಮೀಂದ ನೆರವಿನ ಹಸ್ತ ಚಾಚಲು ಅಸಾಧ್ಯ. ಊಟಕ್ಕೂ ಪರದಾಡುವ ಪರಸ್ಥಿತಿ ಇರುವ ಜನತೆಗೆ ನಮ್ಮ ಪಡಿತರ ಆಹಾರವಾಗಲಿ ಎಂಬ ಉದ್ದೇಶದಿಂದ ಮಟ್ಟೂರ ಗ್ರಾಮದ ಜನರು ತಮ್ಮ ತಿಂಗಳದ ಅನ್ನಭಾಗ್ಯ ನೀಡಿರುವುದು ನೆರೆಸಂತ್ರಸ್ತರಿಗೆ ಸೌಭಾಗ್ಯವಾಗಲಿಎಂದರು. ಬಸಯ್ಯ ಸ್ವಾಮಿ ಹಿರೇಮಠ, ಚಂದ್ರಶೇಖರ ಸ್ವಾಮಿಹಿರೇಮಠ, ಬಸನಗೌಡ ಹುಡೇದ್, ಶಂಕ್ರಪ್ಪ ನಂದಿಹಾಳ, ಸಂಗಣ್ಣ ಮಡಿವಾಳ, ಬಸವರಾಜ ಮಡಿವಾಳ, ನೀಲಕಂಠಪ್ಪ ಹುಲ್ಲೂರ, ಮೌನೇಶ ಮಡಿವಾಳ, ಅಂಬಣ್ಣ, ಅಮರೇಶ ತುಮಕೂರ ಸೇರಿದಂತೆ ಅನೇಕರು ಇದ್ದರು.