ಪಟ್ಟು ಬಿಡದ ಸೇನೆ: ವಾಜಪೇಯಿ ಅವರ ಪದ್ಯ ಉಲ್ಲೇಖಿಸಿ ಬಿಜೆಪಿಯನ್ನು ವ್ಯಂಗ್ಯವಾಡಿದ ಸಂಜಯ್ ರಾವತ್

ನವದೆಹಲಿ, ನ.8:      ಶಿವಸೇನೆ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಶಮನಗೊಳ್ಳುವ ಸಾಧ್ಯತೆ ಕ್ಷೀಣಿಸುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಹಿರಿಯ ಸೇನಾ ಮುಖಂಡ ಸಂಜಯ್ ರಾವತ್ ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಒಂದು ಪದ್ಯವನ್ನು ಉಲ್ಲೇಖಿಸಿ ಬಿಜೆಪಿಯನ್ನು ಅಪಹಾಸ್ಯ ಮಾಡಿದ್ದಾರೆ "ನಾವು ಅರ್ಜನ್ ನ ಕೈಗೊಂಡ ಎರಡು ಪ್ರತಿಜ್ಞೆಗಳನ್ನು ತೆಗೆದುಕೊಳ್ಳೋಣ, ಎಂದಿಗೂ ಅಸಹಾಯಕರಾಗಿರಬಾರದು ಮತ್ತು ಎಂದಿಗೂ ಓಡಿಹೋಗಬಾರದು" ಎಂದು ವಾಜಪೇಯಿ ಅವರ ಪ್ರಸಿದ್ಧ ಸಾಲುಗಳಾದ 'ಅಗ್ನಿ ಪರೀಕ್ಷಾ ಮೇ ....' ಎಂಬ ಪಂದ್ಯವನ್ನು ಉಲ್ಲೇಖಿಸಿ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ.  "ಬಿಜೆಪಿಯ ಕಾಲುಗಳ ಕೆಳಗೆ ನೆಲ ಕುಸಿಯುತ್ತಿದೆ, ಆದರೆ ಅದು ಅಪಾರ ವಿಶ್ವಾಸವನ್ನು ಪ್ರದಶರ್ಿಸುತ್ತಿದೆ" ಎಂದು ಸೇನಾ ನಾಯಕ ಮತ್ತು ರಾಜ್ಯಸಭಾ ಸಂಸದ ಗುರುವಾರ ಬಿಜೆಪಿಯನ್ನು ಟ್ವೀಟ್ ಮೂಲಕ  ಅಪಹಾಸ್ಯ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆ ಉಭಯ ಪಕ್ಷಗಳ ನಡುವೆ ಹಂಚಿಕೆಯಾಗಬೇಕು ಎಂಬುದು ಶಿವಸೇನೆಯ ಒತ್ತಾಯವಾಗಿದೆ.  ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ - 105 ಮತ್ತು ಸೇನಾ - 56 ಸ್ಥಾನಗಳನ್ನು ಪಡೆದಿವೆ. ಉಭಯ ಪಕ್ಷಗಳು 288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆದಿದೆ. ಆದರೆ ಕಳೆದ 15 ದಿನಗಳಿಂದಲೂ ಸಕರ್ಾರ ರಚಿಸಲು ಉಭಯ ಪಕ್ಷಗಳಿಗೂ ಭಿನ್ನಾಭಿಪ್ರಾಯಗಳಿಂದಾಗಿ ಸಾಧ್ಯವಾಗಿಲ್ಲ. ಅಕ್ಟೋಬರ್ 24 ರಂದು ರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮಹಾರಾಷ್ಟ್ರ ವಿಧಾನಸಭೆಯ ಅವಧಿ ಶನಿವಾರ ಕೊನೆಗೊಳ್ಳಲಿದೆ. ಒಂದು ವೇಳೆ ಯಾವುದೇ ಪಕ್ಷ ಅಥವಾ ಮೈತ್ರಿ ಸಕರ್ಾರ ರಚಿಸುವುದಕ್ಕಾಗಿ ಹಕ್ಕು ಸಾಧಿಸಲು ಮುಂದಾಗದಿದ್ದರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ. ಎನ್ಸಿಪಿ ಮತ್ತು ಕಾಂಗ್ರೆಸ್ ಸದ್ಯಕ್ಕೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದಾಗಿ ತಿಳಿಸಿದೆ.