ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಭಕ್ತ: ಕೋಣಿ

ಬೆಟಗೇರಿ: ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ವಿಠ್ಠಲ ಕೋಣಿ ಹೇಳಿದರು.

      ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಆಶ್ರಯದಲ್ಲಿ ಗುರುವಾರದಂದು ಆಯೋಜಿಸಿದ ಸಂಗೊಳ್ಳಿ ರಾಯಣ್ಣನ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಭಕ್ತನಾಗಿದ್ದಾನೆ ಎಂದರು.

      ಇಲ್ಲಿಯ ಬೀರಸಿದ್ದೇಶ್ವರ ಮಹಾದ್ವಾರದಿಂದ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ಸುಮಂಗಲೆಯರ ಆರತಿ, ಸಕಲ ವಾದ್ಯಮೇಳಗಳೊಂದಿಗೆ ರಾಯಣ್ಣನ ಭಾವ ಚಿತ್ರದ ಭವ್ಯ ಮೆರವಣಿಗೆ ನಡೆದ ಬಳಿಕ ಸ್ಥಳೀಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸುರೇಶ ವಡೇರ ಕ್ರಾಂತಿವೀರ ರಾಯಣ್ಣನ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಸಮರ್ಪಿಸಿದರು. 

      ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಬಸವರಾಜ ಕುರಬೇಟ, ರಮೇಶ ಹಾಲನ್ನವರ, ಮಾಯಪ್ಪ ಬಾಣಸಿ, ಸದಾಶಿವ ಕುರಿ, ಭೀಮಶಿ ಹೊರಟ್ಟಿ ಸೇರಿದಂತೆ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಅಭಿಮಾನಿಗಳು, ಗ್ರಾಮಸ್ಥರು ಇದ್ದರು.