ಸಂಘ ಸಂಸ್ಥೆಗಳು ಸಮುದಾಯದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಅಗತ್ಯ

ಲೋಕದರ್ಶನ ವರದಿ

ಶೇಡಬಾಳ: ನೂತನವಾಗಿ  ಸ್ಥಾಪನೆಗೊಂಡಿರುವ ಸಂಘ ಸಂಸ್ಥೆಗಳು ಸಮುದಾಯದ ಸಾಮಾಜಿಕ,  ಶೈಕ್ಷಣಿಕ, ಧಾಮರ್ಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮುದಾಯದ ಸವರ್ೋತೋಮುಖ ಅಭಿವೃದ್ಧಿಗಾಗಿ ಶ್ರಮಿಸುವಂತೆ ಕನರ್ಾಟಕ ಮುಸ್ಲಿಂ ಎಂಪ್ಲಾಯಿಜ್ ಕಲ್ಚರಲ್ ಅಸೋಸಿಯೇಷನ್ (ಕೆ.ಮೇಕಾ) ಬೆಳಗಾವಿ ಜಿಲ್ಲಾಧ್ಯಕ್ಷರಾದ ಆಯ್.ಆರ್. ನದಾಫ ಹೇಳಿದರು.

ಅವರು ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಕನರ್ಾಟಕ ಮುಸ್ಲಿಂ ಎಂಪ್ಲಾಯಿಜ್ ಕಲ್ಚರಲ್ ಅಸೋಸಿಯೇಷನ್ (ಕೆ.ಮೇಕಾ) ಕಾಗವಾಡ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಸಂಘಟನೆಗಳು ಸಕರ್ಾರದಿಂದ ಸಮುದಾಯಕ್ಕೆ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಡುವದರ ಜತೆಗೆ ನೌಕರರಿಗೆ, ವಿದ್ಯಾಥರ್ಿಗಳಿಗೆ, ಬಡಜನರಿಗೆ ಮೂಲಭೂತ ಸೌಲಭ್ಯಗಳು ಹಾಗೂ ಕುಂದುಕೊರತೆಗಳಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಂಘಟಕರಿಗೆ ಕಿವಿಮಾತು ಹೇಳಿದರು.  

ಇದೇ ಸಮಯದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಕೆ.ಮೇಕಾ ಕಾಗವಾಡ ಘಟಕದ ಪದಾಧಿಕಾರಿಗಳನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. 

ಕೆ.ಮೇಕಾ ಕಾಗವಾಡ ಘಟಕದ ಅಧ್ಯಕ್ಷರಾಗಿ ಆರ್.ಬಿ.ದರೂರ, ಉಪಾಧ್ಯಕ್ಷರಾಗಿ ಎಂ.ಎ.ಉಸ್ತಾದ, ಎ.ಎಚ್. ಬಾಗವಾನ, ಪ್ರಧಾನ ಕಾರ್ಯದಶರ್ಿಗಳಾಗಿ ಜಸ್ಮಿನ ಎಚ್. ಕಡಬಿ, ಕಾರ್ಯದಶರ್ಿಗಳಾಗಿ ಎಸ್.ಎಚ್.ಗೌಂಡಿ, ಖಜಾಂಚಿಯಾಗಿ ಎ.ಜಿ. ನಸರದಿ, ಸಂಘಟನಾ ಕಾರ್ಯದಶರ್ಿಗಳಾಗಿ ಆಯ್.ಎಂ.ಬೇಗ, ಆಂತರಿಕ ಲೆಕ್ಕಾಧಿಕಾರಿಗಳಾಗಿ ಎನ್.ಎ.ಅಲಗೂರ, ಸದಸ್ಯರಾಗಿ ಎಸ್.ಎ.ಗಾಲಿಬವಾಲೆ, ಜಿ.ಜೆ.ಮಾಂಜರೆ, ಝೆಡ್.ಕೆ.ಬಾಳೂರ, ಎಂ.ಎಂ. ಸರಕಾಜಿ, ಯು.ಬಿ.ಐನಾಪೂರ, ಕ್ರೀಡಾ ಕಾರ್ಯದಶರ್ಿ ಎ.ಡಿ. ಅತನೂರ ಅವರನ್ನು ಆಯ್ಕೆ ಮಾಡಲಾಯಿತು.

ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಆಯ್.ಆರ್.ನದಾಫ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು.