ವಿಜಯಪುರ 04: ನೋವೆಲ್ ಕೊರೋನಾ ಬಾಧಿತ ರಾಜ್ಯ ಮತ್ತು ಜಿಲ್ಲೆಗಳಿಂದ ಮರಳಿರುವ 36000 ಜನರನ್ನು ತೀವ್ರ ನಿಗಾದಲ್ಲಿಟ್ಟು ಹೋಮ್ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತದ ಕ್ರಮವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳಾದ ಜೆ. ರವಿಶಂಕರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಕರ್ಾರದ ನಿದರ್ೇಶನದಂತೆ ಜಿಲ್ಲಾಡಳಿತ ಕೈಗೊಂಡಿರುವ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು ಜಿಲ್ಲೆಗೆ ವಿದೇಶದಿಂದ ಮರಳಿರುವವರ ಜೊತೆಗೆ ಕೊರೋನಾ ಸೋಂಕು ಬಾಧಿತ ಜಿಲ್ಲೆ ಮತ್ತು ರಾಜ್ಯಗಳಿಂದ ಮರಳಿರುವ ಸುಮಾರು 36 ಸಾವಿರ ಜನರನ್ನು ಗುರುತಿಸಿ ಹೋಮ್ಕ್ವಾರಂಟೈನ್ ಮಾಡಿರುವುದು ರಾಜ್ಯದ ಏಕೈಕ ಜಿಲ್ಲೆ ವಿಜಯಪುರವಾಗಿದೆ. ಪ್ರಾಯೋಗಿಕವಾಗಿ ಮಾಡಿರುವ ಈ ಕಾರ್ಯವು ಕನರ್ಾಟಕ ರಾಜ್ಯದ ಜೊತೆಗೆ ಭಾರತದ ಇತರೇ ರಾಜ್ಯಗಳಿಗೂ ಮಾದರಿಯಾಗಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಕುರಿತು ಸೂಕ್ತ ದಾಖಲಿಕರಣ ಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಿಶೇಷವಾಗಿ ಕೊರೋನಾ ಬಾಧಿತ ಜಿಲ್ಲೆ ಮತ್ತು ರಾಜ್ಯಗಳ ಪ್ರಯಾಣಿಕರ ಮೇಲೆ ತೀವ್ರ ನಿಗಾ, ದೆಹಲಿ ಸಾಮುಹಿಕ ಪ್ರಾರ್ಥನೆಯಿಂದ ಮರಳಿರುವವರನ್ನು ಸಾರ್ವಜನಿಕರಿಂದ ಮಾಹಿತಿಯಿಲ್ಲದೆ ಜಿಲ್ಲಾಡಳಿತವೆ ನೇರವಾಗಿ ಗುರುತಿಸಿರುವುದು ಸೇರಿದಂತೆ ನಿರಂತರ ಕಣ್ಗಾವಲು ಮೂಲಕ ಕೊರೋನಾ ಸಾಂಕ್ರಾಮಿಕ ಖಾಯಿಲೆ ಜಿಲ್ಲೆಗೆ ಪ್ರವೇಶಿಸದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾರ್ಯದಶರ್ಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ತಿಳಿಸಿದ ಅವರು ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಪೂರೈಕೆ, ಅಲೆಮಾರಿ ಜನಾಂಗಗಳಿಗೆ ಆಹಾರಧಾನ್ಯ ಮತ್ತು ಇತರೆ ವಸ್ತುಗಳ ಕಿಟ್ಗಳನ್ನು ವಿತರಿಸುತ್ತಿರುವುದು ಮತ್ತು ಪಡಿತರ ಧಾನ್ಯಗಳ ಸಮರ್ಪಕ ಪೂರೈಕೆ ಕ್ರಮಗಳು ಜನರಿಗೆ ನೆರವಾಗಲಿದ್ದು, ಜಿಲ್ಲೆಯಾದ್ಯಂತ ಲಾಕ್ಡೌನ್ ಮತ್ತು ನಿಷೇದಾಜ್ಞೆ ಇನ್ನಷ್ಟೂ ಪರಿಣಾಮಕಾರಿಯಾಗಿ ಜಾರಿಯಾದರು ಗುರುತಿನ ಚೀಟಿ ವಿತರಣಾ ಪ್ರಕ್ರಿಯೆ ಮತ್ತು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವಂತೆ ಅವರು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕೋವಿಡ್-19 ಬಗ್ಗೆ ಎಲ್ಲ ಆರೋಗ್ಯ ಸಿಬ್ಬಂಧಿಗಳು, ಪೊಲೀಸ್ ಸಿಬ್ಬಂದಿಗಳು, ಕರ್ತವ್ಯದಲ್ಲಿರುವ ಇತರೆ ಸಿಬ್ಬಂದಿಗಳು, ಮಾಧ್ಯಮ ಸ್ನೇಹಿತರು ಅವಶ್ಯಕ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಸಹ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣಕ್ಕೆ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ವತಿಯಿಂದ ಕೋವಿಡ್ಗೆ ಸಂಬಂಧಪಟ್ಟಂತೆ ಈವರೆಗೆ 39 ಸಭೆಗಳನ್ನು ನಡೆಸಿ ಅವಶ್ಯಕ ಜಾಗೃತಿ ವಹಿಸಲಾಗಿದೆ. ಅದರಂತೆ ಜಿಲ್ಲಾಮಟ್ಟದ ಜಾಗೃತಿ ಸಮಿತಿಯನ್ನೂ ಸಹ ರಚಿಸಲಾಗಿದ್ದು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿದಿನ ಜಿಲ್ಲೆಯಾದ್ಯಂತ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಸಾಮಾಜಿಕ ಅಂತರ ನಿಯಮದೊಂದಿಗೆ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಕ್ರಮ ವಹಿಸಲಾಗಿದೆ. ನಿರಾಶ್ರಿತ ಮತ್ತು ಬಿಪಿಎಲ್ ಕಾರ್ಡ ಹೊಂದಿರದ ಅಲೇಮಾರಿ ಜನಾಂಗಗಳಿಗೆ 680 ರೂಗಳ ಕಿಟ್ಗಳನ್ನು ಎನ್.ಜಿ.ಓಗಳ ಮೂಲಕ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಪ್ರತಿದಿನ 1800 ಜನರಿಗೆ ಆಹಾರ ಪುರೈಸಲಾಗುತ್ತಿದ್ದು, ಆಯಾ ತಾಲೂಕಾ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿ ನಗರ-ಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಹಶೀಲ್ದಾರರು ಮತ್ತು ಪಿಡಿಓಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಿಂದ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ 50 ಜನರ ಗಂಟಲು ದ್ರವ ಮಾದರಿಯಲ್ಲಿ 48 ನೆಗೆಟಿವ್: ಜಿಲ್ಲೆಯಿಂದ ಈ ವರೆಗೆ ಕಳುಹಿಸಲಾದ 50 ಜನರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗಳಲ್ಲಿ 48 ಜನರ ಮಾದರಿ ನೆಗೆಟಿವ್ ಬಂದಿದ್ದು, ಇನ್ನೂ ಇಬ್ಬರ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಅವರು ತಿಳಿಸಿದರು.
ಇಂದು ಪೂವರ್ಾಹ್ನವರೆಗೆ ಒಟ್ಟು 370 ಜನರು ವಿದೇಶ ಮತ್ತು ಇತರ ಕಡೆಯಿಂದ ಬಂದಿದ್ದಾರೆ. 114 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 242 ಜನರು 15 ರಿಂದ 28 ದಿನಗಳ ರಿಪೋಟರ್ಿಂಗ್ ಅವಧಿಯಲ್ಲಿದ್ದಾರೆ. 14 ಜನ ಹೋಮ್ಕ್ವಾರಂಟೈನ್ದಲ್ಲಿದ್ದಾರೆ. ಕಲ್ಕತ್ತಾದಿಂದ ಬಂದಿದ್ದ 10 ಜನರ, ದೆಹಲಿಯಿಂದ ಬಂದಿದ್ದ 19 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನು ಇಬ್ಬರ ಗಂಟಲು ದ್ರವ ಮಾರದಿಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ತಿಳಿಸಿದರು.
ಹಾಲು ವಿತರಣೆ ಕಾರ್ಯದ ಬಗ್ಗ ಪ್ರಶಂಸೆ : ಸಕರ್ಾರದ ನಿದರ್ೇಶನದಂತೆ ಘೋಷಿತ, ಅಘೋಷಿತ ಹಾಗೂ ಅಸಂಘಟಿತ ಕಾಮರ್ಿಕರ ಪ್ರತಿ ಕುಟುಂಬಕ್ಕೆ ಒಂದು ಲೀಟರ್ ಹಾಲು ವಿತರಣೆಯಲ್ಲಿ ಸಿಬ್ಬಂದಿಗಳು ಮಾಡಿರುವ ಕಾರ್ಯಕ್ಕೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ ಅವರು ಮಾತನಾಡಿ ಜಿಲ್ಲೆಯ ಗಡಿಭಾಗಗಳಲ್ಲಿ 29 ಚಕ್ಪೋಸ್ಟಗಳನ್ನು ಸ್ಥಾಪಿಸಿ ನಿಗಾ ಇಡಲಾಗಿದೆ, ಜಿಲ್ಲೆಯ 600 ಖೈದಿಗಳ ಪೈಕಿ 175 ಖೈದಿಗಳನ್ನು ಬಾಗಲಕೋಟ, ಜಮಖಂಡಿ ಮತ್ತು ಬೆಳಗಾವಿ ಹಿಂಡಲಗಾ ಜೈಲುಗಳಿಗೆ ಕೋವಿಡ್-19 ಮುನ್ನೆಚ್ಚರಿಕೆಗಾಗಿ ಮತ್ತು ಸಾಮಾಜಿಕ ಅಂತರಕ್ಕಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಪಂಚಾಯತ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿಯವರು ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಗುರುತಿಸಲಾದ ಹೋಮ್ಕ್ವಾರಂಟೈನ್ ಜನರ ಮೇಲೆ ತೀವ್ರ ನಿಗಾ ಇಡಲು ಮತ್ತು ನೆರವಾಗಲು ಆಯಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್ ಅವರನ್ನು ನಿಯೋಜಿಸಿ ಸೂಕ್ತ ನಿಗಾ ಇಡಲಾಗಿದೆ. ಪಡಿತರ ವಿತರಣೆಗೆ, ದಿನಸಿ ಅಂಗಡಿಗಳ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರಕ್ಕೆ ಸುರಕ್ಷತಾ ಕ್ರಮಗಳು ಮತ್ತು ಗ್ರಾಮಸ್ಥರ ಹಿತ ದೃಷ್ಟಿಯಿಂದ ಪಂಚಾಯತ ಕಟ್ಟೆಗಳ ಮೇಲೆ ಸುಟ್ಟಎಣ್ಣೆ ಹಾಕಿಸಲಾಗಿದೆ. ಗ್ರಾಮಾಂತರ ಪದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿದರ್ೇಶಕಿ ಕುಮಾರಿ ಸುರೇಖಾ, ಜಿಲ್ಲಾ ಸವರ್ೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಡಾ. ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಪ್ರಾಣೇಶ ಜಾಹಗೀರದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.