ಮಾದರಿ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆ ಸಿದ್ಧ: ಪ್ರಧಾನ ಕಾರ್ಯದರ್ಶಿ ಮಹಾದೇವನ್

ಗದಗ 11:  ವಾಸ್ತವ ಅಂಶಗಳನ್ನು ಆಧರಿಸಿ   ಗದಗ   ಜಿಲ್ಲೆಯ  ಅಭಿವೃದ್ಧಿ ಚಿತ್ರಣ ಮುನ್ನೋಟದಲ್ಲಿ  ಹೇಗಿರಬೇಕು ಎಂಬುದರ ಕುರಿತು ಜಿಲ್ಲಾ ಮಾನವ  ಅಭಿವೃದ್ಧಿ ಸೂಚ್ಯಂಕಗಳ  ಹಾಗೂ    ನಗರ  ಸ್ಥಳೀಯ  ಸಂಸ್ಥಗಳಿಂದ  ಮಾಹಿತಿ ಸಂಗ್ರಹಿಸಿ  ಮಾದರಿ ಜಿಲ್ಲಾ ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಾಗುವುದು ಎಂದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ  ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ತಿಳಿಸಿದರು.  

ಗದಗ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಸಮಗ್ರ ಜಿಲ್ಲಾ ಅಭಿವೃಧ್ಧಿ ಯೋಜನೆ ತಯಾರಿಕೆ ಕುರಿತು  ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಇಲಾಖೆ  ತನ್ನದೇ ಆದ ದೂರದೃಷ್ಟಿ ಹೊಂದಿರಬೇಕು. ಇದರಿಂದ   ಸಂಪನ್ಮೂಲಗಳ ಸದ್ಬಳಕೆ ಹಾಗೂ ನಿಶ್ಚಿತ  ಗುರಿ ತಲುಪುವುದಕ್ಕೆ ಸಾಧ್ಯವಾಗುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಭಾಗವಾರು   ಕಾರ್ಯ ತಂಡಗಳನ್ನು  ರಚಿಸಿ  ಆರ್.ಡಿ.ಪಿ.ಆರ್. ಇಂಜನೀಯರ್, ವಿದ್ಯಾರ್ಥಿಗಳು, ಸ್ವ ಸಹಾಯ ಗುಂಪುಗಳ,   ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ  ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ.  ನಿಜವಾದ  ವಿಕೇಂದ್ರೀಕರಣದ  ಅರ್ಥಮಾಡಿಕೊಂಡು ಗದಗ ಜಿಲ್ಲೆಯ  ಕಲೆ, ಸಂಸ್ಕೃತಿ, ಶಿಕ್ಷಣ  ಮಹಿಳಾ ಸಬಲೀಕರಣ, ಆರೋಗ್ಯ, ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳ   ಆಯಾ  ಪ್ರದೇಶದವರಿಂದ ಬೇಡಿಕೆ ಹಾಗೂ ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದವರಿಂದ   ಸಮಸ್ಯೆಗಳಿಗೆ ಪರಿಹಾರವನ್ನು ಸಹ   ಸಂಗ್ರಹಿಸಬಹುದಾಗಿದೆ.  ಬರೀ   ಅಂಕಿ ಅಂಶಗಳ   ಅಭಿವೃದ್ಧಿ ಅಲ್ಲದೇ   ಜನರ ನಿಜವಾದ ಸಮಸ್ಯೆಗಳಿಗೆ ಸ್ಪಂದಿಸುವುದು  ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಯ ತಯಾರಿಕೆಯ  ಉದ್ದೇಶವಾಗಿದೆ  ಎಂದು  ಉಮಾ ಮಹಾದೇವನ್ ಅವರು ಸಭೆಗೆ ತಿಳಿಸಿದರು.     

ಅಬ್ದುಲ್ ನಜೀರ್ ಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕಿ ಶಿಲ್ಪಾ ನಾಗ್ ಅವರು ಮಾತನಾಡಿ    ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ    ಅನುಷ್ಟಾನಕ್ಕೆ    ಯೋಜನಾ ಸಂಪನ್ಮೂಲಗಳು  ಹಾಗೂ ಅದರ ಸದ್ಬಳಕೆ  ಮುಖ್ಯ ಎಂದರು. ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಅನುದಾನ ಹಾಗೂ ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗುವುದು. ಗ್ರಾಮಸಭೆಯಲ್ಲಿ  ಮಹಿಳೆಯರ ಮತ್ತು ಮಕ್ಕಳ  ಸಮಸ್ಯೆಗಳ  ಕುರಿತು  ವಿಶೇಷವಾಗಿ ಚರ್ಚಿಸಲಾಗುವುದು.  ಆಯಾ ಇಲಾಖೆಯಿಂದ ಪ್ರಾಥಮಿಕ ಅಂಶಗಳನ್ನು  ಸಂಗ್ರಹಿಸುವುದು  ಮತ್ತು ಗ್ರಾಮೀಣ ಹಾಗೂ ನಗರ  ಪ್ರದೇಶಗಳಿಗೆ ಭೇಟಿ ನೀಡಿ  ಜನರ ಅಹವಾಲುಗಳನ್ನು ಸಂಗ್ರಹಿಸಿ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ     ಮುನ್ನೋಟ ತಯಾರಿಕೆ ಬಹು ಮುಖ್ಯವಾಗಿದೆ ಎಂದು ಶಿಲ್ಪಾ ನಾಗ್ ಎಂದರು.

ಗದಗ ಜಿಲ್ಲೆಯ ಅಭಿವೃದ್ಧಿ ಮುಂಬರುವ ವರ್ಷಗಳಲ್ಲಿ ಅಗತ್ಯಗಳನ್ನು ಆಧರಿಸಿ  ಹೇಗಿರಬೇಕು ಎಂಬುದರ ಕುರಿತು ದೂರದೃಷ್ಟಿ ಹೊಂದಬೇಕು.    ಆ  ನಿಟ್ಟಿನಲ್ಲಿ  ಜಿಲ್ಲೆಯ    ನಗರ  ಸ್ಥಳೀಯ  ಸಂಸ್ಥೆ  ಹಾಗೂ ಗ್ರಾಮಗಳಿಗೆ ನಿಯೋಜಿತ  ಕಾರ್ಯ ತಂಡಗಳು ತೆರಳಿ   ಮಾಹಿತಿ ಸಂಗ್ರಹಿಸಿ  ಮೇ ಅಂತ್ಯದೊಳಗೆ  ಗದಗ ಜಿಲ್ಲಾ  ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಾಗುವುದು ಎಂದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಆನಂದ ಕೆ ತಿಳಿಸಿದರು.      

ಗ್ರಾಮೀಣಾಭಿವೃಧ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ  ಶಿಕ್ಷಕ ವೃಂದ, ಜಿಲ್ಲಾ ಗ್ರಾಮ  ಪಂಚಾಯತ್ ಅಭಿವೃದ್ಧಿ  ಅಧಿಕಾರಿಗಳು,  ವಿವಿಧ ಇಲಾಖೆಗಳ  ಅಧಿಕಾರಿಗಳು  ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವಿಕೆ  ಕುರಿತು  ತಮ್ಮ ಸಲಹೆಗಳನ್ನು  ಸಭೆಯಲ್ಲಿ ಮಂಡಿಸಿದರು.  ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ  ಸಿದ್ಧಲಿಂಗೇಶ್ವರ ಪಾಟೀಲ, ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಕೇರಳದ  ನಿವೃತ್ತ ಮುಖ್ಯ  ಕಾರ್ಯದರ್ಶಿ  ವಿಜಯಾನಂದ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿ ಸುರೇಶ ನಾಡಗೌಡರ,    ಎಸ್.ಆರ್. ಐ.ಡಿ  ಸಂಸ್ಥೆಯ  ಸಂಪನ್ಮೂಲ ವ್ಯಕ್ತಿ  ಗಣೇಶ ಪ್ರಸಾದ,   ಮಾಜಿ ಶಾಸಕ ಡಿ.ಆರ್.ಪಾಟೀಲ,  ಜಿ.ಪಂ. ಉಪಕಾರ್ಯದಶರ್ಿ ಬಿ. ಕಲ್ಲೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ  ಹಾಜರಿದ್ದರು.