ಕೇಬಲ್ ಗ್ರಾಹಕರಿಗಾಗಿ ಃಖಆಖ ಸಂಸ್ಥೆ ವಿಶೇಷ ದರದ ಪ್ಯಾಕೇಜ್

ಲೋಕದರ್ಶನ ವರದಿ

ಬೆಳಗಾವಿ, 9 : ಪೆಬ್ರವರಿ 1 ರಿಂದ ದೇಶ್ಯಾದ್ಯಂತ ಕೇಬಲ ಚಾನಲ್ ಸೇವೆ ಸ್ಥಗಿತಗೊಳ್ಳಲಿದ್ದು, ಖಿಖಂ ಪ್ರಾಧಿಕಾರ ಆದೇಶ ಮೇರೆಗೆ ಪ್ರತಿ ಚಾನಲ್ಗಳಿಗೆ ಆಯ್ಕೆ ಮೂಲಕ ಹಣ ತುಂಬಿ ಟಿವಿ ಚಾನಲ್ ನೋಡಬಹುದಾಗಿದೆ. ಕಾರಣ ಹೊಸ ನೀತಿ ಜಾರಿಗೆ ಬರುತ್ತಿದೆ. ಆದ್ದರಿಂದ ತಮ್ಮ ಗ್ರಾಹಕರಿಗಾಗಿ ಃಖಆಖ ಸಂಸ್ಥೆ ವಿಶೇಷ ದರದ ಪ್ಯಾಕೇಜ್ ರೂಪಿಸಿದೆ ಎಂದು ಬಿ,ಆರ್ಡಿ,ಎಸ್,ಎಮ್ ಡಿ ನಾಗೇಶ ಚಾಬರಿಯಾ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಬೆಳಗಾವಿ ನಗರದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿ ಆರ್ ಡಿ ಎಸ್ ಸಂಸ್ಥೆಯ ಎಮ್ ಡಿ ನಾಗೇಶ ಚಾಬರಿಯಾ ಅವರು ಈ ಕುರಿತು ಮಾಹಿತಿ ನೀಡಿದರು.ಖಿಖಂ ಪ್ರಾಧಿಕಾರ ಡಿಸೆಂಬರ್ 29 ರಂದು ದೇಶ್ಯಾದ್ಯಂತ ಹೊಸ ನೀತಿಯನ್ನು ಜಾರಿಗೆ ತರಬೇಕೆಂದು ಆದೇಶ ನೀಡಿತ್ತು.

ಹಂತ ಹಂತವಾಗಿ ಅನುಷ್ಠಾನಕ್ಕೆ ತರಬೇಕೆಂದು ಹೇಳಿತ್ತು.ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಖಖಿಂ ಪ್ರಾಧಿಕಾರ ನೀಡಿರುವ ಆದೇಶ ಆರು ತಿಂಗಳ ವರೆಗೆ ಮುಂದೂಡಿಸಲಾಗಿದೆ ಎಂಬ ಸಂದೇಶ ಹರಿಬಿಟ್ಟು ಗೊಂದಲ ಸೃಷ್ಟಿಸಲಾಗಿತ್ತು. ಆದರೆ ಖಿಖಂ ಪ್ರಾಧಿಕಾರ ಪೆಬ್ರವರಿ 1 ರಂದು ಈ ಹೊಸ ನೀತಿ ದೇಶ್ಯಾದ್ಯಂತ ಜಾರಿಗೆ ತರಬೇಕೆಂದು ಅಧಿಕೃತವಾಗಿ ಆದೇಶ ನೀಡಿದೆ. ಆದ್ದರಿಂದ ಬಿ,ಆರ್, ಡಿ ,ಎಸ್ ಸಂಸ್ಥೆ ಈ ಆದೇಶದನ್ವಯ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಹಾಗೂ ಕಳೆದ 20 ವರ್ಷಗಳಿಂದ ಬಿ,ಆರ್ಡಿ, ಎಸ್ ಸಂಸ್ಥೆಯೊಂದಿಗೆ ಸ್ನೇಹ ಹೊಂದಿದ ವೀಕ್ಷಕರಿಗೆ ಯಾವುದೇ ಗೊಂದಲ ಆಗದೆ ಇರುವ ಹಾಗೆ ಕೆಲ ಪ್ಯಾಕೇಜಗಳನ್ನು ಇಂದಿನಿಂದ ಜಾರಿಗೆ ತರಲಾಗಿದೆ ಎಂದರು. ಹಾಗೂ ಕಳೆದ 20 ವರ್ಷಗಳಿಂದ ಕೇಬಲ್ ಚಾನಲ್ನಲ್ಲಿ ಸೇವೆ ಸಲ್ಲಿಸುತ್ತಿರುವ ಬಿ,ಆರ್ಡಿ,ಎಸ್ ಸಂಸ್ಥೆ ಕನರ್ಾಟಕ, ಗೋವಾ,ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು,ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ 12,5 ಲಕ್ಷ ವೀಕ್ಷಕರು ಇದ್ದಾರೆ. ಆದ್ದರಿಂದ ಮೂರು ರಾಜ್ಯಗಳಲ್ಲಿ ಇರುವ ಎಲ್ಲ ಭಾಷೆಯ ವೀಕ್ಷಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಜನರ ಇಚ್ಛೆಯಂತೆ ಕಡಿಮೆ ದರದಲ್ಲಿ ವಿಶೇಷ ಪ್ಯಾಕೇಜಗಳನ್ನು ನೀಡಲು ತಯಾರಿ ಮಾಡಿಕೊಂಡಿದೆ ಎಂದರು. 

ಇದರಲ್ಲಿ 153 ರೂಪಾಯಿಯಲ್ಲಿ ಜಿ ಎಸ್ ಟಿ ಸಹಿತ ನೂರು ಫ್ರೀ ಚಾನಲಗಳನ್ನು ನೀಡಲು ಖಿಖಂ ಪ್ರಾಧಿಕಾರ ನಿರ್ಧರಿಸಿದ್ದು, ಬಿ,ಆರ್ಡಿ,ಎಸ್, ಸಂಸ್ಥೆ ಬಡ ಜನರಿಗೆ ಕನ್ನಡದ ಎಲ್ಲ ಚಾನಲ್ ವೀಕ್ಷಿಸಲು 215 ರೂಪಾಯಿಯಲ್ಲಿ ಸಿಲ್ವರ ಪ್ಯಾಕ್, ಜಾರಿಗೆ ತಂದಿದೆ ಎಂದರು. ಅದೇ ರೀತಿ 295 ರೂಪಾಯಿಯಲ್ಲಿ ಗೊಲ್ಡ ಪ್ಯಾಕ್, ಹಾಗೂ ಕನ್ನಡ ಮತ್ತು ಮರಾಠಿ ಚಾನಲ್ ವೀಕ್ಷಿಸಲು 392 ರೂಪಾಯಿಯಲ್ಲಿ ಡೈಮಂಡ್ ಸೇರಿದಂತೆ 445 ರೂಪಾಯಿಯಲ್ಲಿ ಪ್ಲ್ಯಾಟಿನಮ್ ಎಂಬ ವಿವಿದ ಪ್ಯಾಕೇಜಗಳನ್ನು ಜಾರಿಗೆ ತರಲಾಗಿದೆ ಎಂದರು. ಇದರಿಂದ ಎಲ್ಲ ವೀಕ್ಷಕರಿಗೆ ತಮ್ಮ ಇಷ್ಟದ ಪ್ರಕಾರ ಚಾನಲ್ ಗಳು ಲಭ್ಯವಾಗಲಿದ್ದು, ಬಿ,ಆರ್ ಡಿ ಎಸ್ ಸಂಸ್ಥೆ ತಮ್ಮ ವೀಕ್ಷಕರಿಗೆ ಡಿಸ್ಕೌಟ ಕೂಡ ನೀಡಲು ನಿರ್ಧರಿಸಿದೆ ಎಂದರು. ಇನ್ನು ಈ ಪ್ಯಾಕೇಜಗಳನ್ನು ತಮ್ಮ ಟಿವಿಗಳಿಗೆ ಅಳವಡಿಸಿಕೊಳ್ಳಬೇಕಾದರೆ ಖಿಖಂ ಪ್ರಾಧಿಕಾರ ಆದೇಶ ದಂತೆ ಕನಿಷ್ಠ 153 ರೂಪಾಯಿ ಭರಿಸಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. 

ಹಾಗೂ ಈಗಾಗಲೇ ಕೆಲವರು ಜಾಹಿರಾತು ನೀಡಿ ಕಡಿಮೆ ದರದಲ್ಲಿ ಹೆಚ್ಚು ಚಾನಲಗಳನ್ನು ನೋಡಬಹುದು ಎಂದು ಪ್ರಚಾರ ನಡೆಸುತ್ತಿದ್ದಾರೆ.ಆದರೆ ಆ ಪ್ರಚಾರದಲ್ಲಿರುವ ಮಾಹಿತಿ ಅನಧಿಕೃತವಾಗಿದೆ ಇದರಿಂದ ವೀಕ್ಷಕರು ಗೊಂದಲಕ್ಕೆ ಈಡಾಗಬಾರದೆಂದರು. 

ಅಲ್ಲದೆ ಬಿ ಆರ್ ಎ ಎಸ್ ಸಂಸ್ಥೆ ತಮ್ಮ ಎಲ್ಲ ವೀಕ್ಷಕರ ನಾಡಿ ಮಿಡಿತ ಅರ್ಥ ಮಾಡಿಕೊಂಡು ಯಾವುದೇ ಗೊಂದಲಕ್ಕೆ ಈಡುಮಾಡದೆ ಬಡ,ಮಧ್ಯಮ ದಿಂದ ಎಲ್ಲ ವರ್ಗದ ಜನರ ಅಭಿರುಚಿಗೆ ತಕ್ಕಂತೆ ಸೇವೆ ನೀಡಲು ಸಿದ್ದತೆ ಮಾಡಿಕೊಂಡಿದೆ 

ಎಂದರು.