ನವದೆಹಲಿ, ಜ,12 : ಸಮಾಜವಾದಿ ಪಕ್ಷದ(ಎಸ್ ಪಿ) ಮುಖಂಡ ಬಿಜ್ಲಿ ಯಾದವ್ ನನ್ನು ಅಪರಿಚಿತ ವ್ಯಕ್ತಿಗಳು ಉತ್ತರಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಈ ಘಟನೆ ಇಂದು ಮುಂಜಾನೆ ನಡೆದಿದೆ. ಸಖ್ವಾಲಿಯಾ ಗ್ರಾಮದ ಮಾಜಿ ಗ್ರಾಮ ಮುಖ್ಯಸ್ಥರಾಗಿದ್ದ ಯಾದವ್, ಇಂದು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಗುಂಡು ಹಾರಿಸಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಯಾದವ್ ಅವರಿಗೆ 40 ವರ್ಷ ವಯಸ್ಸಾಗಿತ್ತು. ಬೈಕ್ ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ನಂತರ ಮಿಂಚಿನ ವೇಗದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ಧಾರೆ.