ಲಕ್ನೋ, ಸೆಪ್ಟಂಬರ್ 6: ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಪತ್ನಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ವಿದ್ಯುತ್ ಕಳವು ನಡೆಸಿರುವ ಆರೋಪದ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ. ರಾಂ ಪುರದಲ್ಲಿ ಆಜಂ ಖಾನ್ ಅವರ ಪತ್ನಿಯ ಹೆಸರಿನಲ್ಲಿ ನಡೆಸಲಾಗುತ್ತಿರುವ ರೆಸಾಟರ್್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ವಿಧಾನಗಳ ಮೂಲಕ ವಿದ್ಯುತ್ ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ, ಈ ರೆಸಾಟರ್್ಗೆ ಆಜಂಖಾನ್ ಅವರ ಪತ್ನಿ ತಾಜಿನ್ ಫಾತಿಮಾ ಎಂದು ಹೆಸರಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5 ಕಿಲೋವ್ಯಾಟ್ ವಿದ್ಯುತ್ ಮೀಟರ್ ಅಳವಡಿಸಿದ್ದರೂ ಬಳಸಿದ ವಿದ್ಯುತ್ ಮೀಟರ್ ನಲ್ಲಿ ದಾಖಲಾಗದಂತೆ ಉಪಕರಣ ಅಳವಡಿಸಿ ವಿದ್ಯುತ್ ಕಳವು ಎಸಗುತ್ತಿದ್ದರು ಎಂದು ಅಧಿಕಾರಿಗಳು ದೂರಿದ್ದಾರೆ. ಅಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ರಾಂಪುರ್ ಪೊಲೀಸ್ ಠಾಣೆಯಲ್ಲಿ ಆಜಂ ಖಾನ್ ಅವರ ಪತ್ನಿ ತಾಜಿನ್ ಫಾತಿಮಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆಜಂ ಖಾನ್ ಈ ಹಿಂದೆ ಮುಲಾಯಂ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಸಕರ್ಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.