ಪುರುಷ ವೀರಾಗ್ರಣಿ, ಮಹಿಳಾ ವೀರಾಗ್ರಣಿ ಪ್ರಶಸ್ತಿಗೆ ಭಾಜನ
ಧಾರವಾಡ 14: ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಆತಿಥ್ಯದಲ್ಲಿ ಆಯೋಜಿಸಲಾಗಿದ್ದ 71ನೇ ಅಂತರ್ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಸರಕಾರದ ವಿಧಾನ ಪರಿಷತ್‌ನ ಸಭಾಪತಿಗಳು ಆದ ಸನ್ಮಾನ್ಯ ಬಸವರಾಜ ಹೊರಟ್ಟಿಯವರು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜೀವನದಲ್ಲಿ ಸೋಲು ಗೇಲವು ಸಾಮಾನ್ಯ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಶಿಸ್ತು ಅತಿಮುಖ್ಯವಾದ ಅಂಶ. ಪಾಲಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಮಾತ್ರ ಭವಿಷ್ಯವನ್ನು ನಿರ್ಧರಿಸುವದಿಲ್ಲ. ಕ್ರೀಡೆಗಳು ಕೇವಲ ಸ್ಪರ್ಧೆಗಾಗಿ ಮಾತ್ರ ಸೀಮಿತವಾಗಿರದೇ ಅದು ನಮ್ಮ ಜೀವನದ ದೈನಂದಿನ ಜೀವನದ ಒಂದು ಭಾಗವಾಗಬೇಕು. ಇದರಿಂದ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ನಿಮ್ಮ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ಹೇಳಿದರು.
1992ನೇ ಬಾರ್ಸಿಲೋನಾ ಓಲಂಪಿಕ್‌ನಲ್ಲಿ ಭಾಗವಹಿಸಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತರು ಅಂತರ್ ರಾಷ್ಟ್ರೀಯ ಕುಸ್ತಿಪಟು ಹಾಗೂ ಓಲಂಪಿಯನ್ ಎಂ.ಆರ್ ಪಾಟೀಲ್ ಅವರು ಮಾತನಾಡಿ ಓಲಂಪಿಕ್‌ನಲ್ಲಿ ಸಾಧನೆ ಮಾಡಲು ಸತತ ಪ್ರಯತ್ನ ಕಠಿಣ ಪರಿಶ್ರಮ ಬೇಕು. ಸರಕಾರ ಕ್ರೀಡೆಗೆ ಹಲವು ಪ್ರೋತ್ಸಾಹಕರ ಯೋಜನೆಗಳನ್ನು ಜಾರಿಗೊಳಿಸಿದೆ ಅವುಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಹೇಳೀದರು.
ಕ.ವಿ.ವಿ ಯ ಮಾನ್ಯ ಕುಲಪತಿಗಲಾದ ಬಿ.ಎಮ ಪಾಟೀಲ್ ಮಾತನಾಡಿ ಅತ್ಯಂತ ಶಿಸ್ತು ಬದ್ಧವಾಗಿ ವ್ಯವಸ್ಥಿತವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿರುವ ಜೆ.ಎಸ್.ಎಸ್ ಗೆ ಕ.ವಿ.ವಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಿಸುತ್ತೇವೆ.. ಈ ಕ್ರೀಡಾಕೂಟದಲ್ಲಿ 12 ನೂತನ ದಾಖಲೆಗಳು ದಾಖಲೆಯಾಗಿರುವುದು ಮತ್ತೊಂದು ಹೆಮ್ಮೇಯ ಸಂಗತಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ ಅಥ್ಲೇಟಿಕ್ ಕ್ರೀಡಾಕೂಟಗಳ ಆಯೋಜನೆಯಿಂದ ದೇಶಕ್ಕೆ ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ. ಕ.ವಿ.ವಿ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟ ಜೆ.ಎಸ್.ಎಸ್ ಸಂಸ್ಥೆಯಿಂದ ಮೂರನೇ ಬಾರಿಗೆ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ನೀಡುವ ಮೂಲಕ ನೂತನ ಯೋಜನೆಯಿಂದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗಿದೆ. ನೂತನ ದಾಖಲೆ ಬರೆದ ಪ್ರತಿ ಕ್ರೀಡಾಪಟುವಿಗೆ ಪ್ರಥಮ ಬಾರಿಗೆ ರೂ 10,000/-ಗಳನ್ನು ಈ ಕ್ರೀಡಾಕೂಟದಲ್ಲಿ ನೀಡಲಾಗಿದೆ. 71ನೇ ಕ.ವಿ.ವಿ ಅಥೆಟಿಕ್ಸ್ ಕ್ರೀಡಾಕೂಟದಲ್ಲಿ 09 ನೂತನ ದಾಖಲೆಗಳು ನಿರ್ಮಾಣವಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದ್ದು, ಅದರಲ್ಲೂ ಅಂತರಾಷ್ಟ್ರೀಯ ಕುಸ್ತಿಪಟು ಅಂತಿಮ ಪೊಂಗಲ್ ಹಾಗೂ ಮನಿಷಾ ಈ ಕ್ರೀಡಾಕೂಟವನ್ನು ಉದ್ಘಾಟಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಶಿಸ್ತುಬದ್ಧ ಕ್ರೀಡಾಕೂಟವನ್ನು ಆಯೋಜನೆ ಮಾಡಿ ಯಶಸ್ವಿಯಾಗಲು ಸಹಾಯ ಸಹಕಾರ ನೀಡಿರುವ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಿಸಿದರು.
ಪ್ರಾರಂಭದಲ್ಲಿ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಸೂರಜ್ ಜೈನ್ ಅತಿಥಿಗಳನ್ನು ಸ್ವಾಗತಿಸಿದರು, ಶ್ರವಣಕುಮಾರ ಯೋಗಿ ವರದಿ ವಾಚನ ಮಾಡಿದರು. ಜಿನೇಂದ್ರ ಕುಂದಗೋಳ ನಿರೂಪಿಸಿ, ವಂದಿಸಿದರು.
ಕ್ರೀಡಾಕೂಟದ ಪದಕ ವಿಜೇತರು
ಸಮಗ್ರ ವೀರಾಗ್ರಣಿ
ಈ ಕ್ರೀಡಾಕೂಟದ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪುರುಷರ ವಿಭಾಗದಲ್ಲಿ 65 ಮತ್ತು ಮಹಿಳಾ ವಿಭಾಗದಲ್ಲಿ 97 ಮಿಕ್ಸ ರಿಲೇಯಲ್ಲಿ 10 ಒಟ್ಟು 172 ಅಂಕಗಳೊಂದಿಗೆ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕಕೋತ್ತರ ಅಧ್ಯಯನ ಸಂಸ್ಥೆಯು ತನ್ನ ಮುಡಿಗೇರಿಸಿಕೊಂಡಿತು.
ರನ್ನರ್ ಆಪ್
ರನ್ನರ್ ಆಪ್ ಸ್ಥಾನವನ್ನು ಪುರುಷರ ವಿಭಾಗದಲ್ಲಿ 52 ಮಹಿಳಾ ವಿಭಾಗದಲ್ಲಿ 22 ಮಿಕ್ಸ ರಿಲೇಯಲ್ಲಿ 6 ಒಟ್ಟು 80 ಅಂಕಗಳೊಂದಿಗೆ ಕರ್ನಾಟಕ ಆರ್ಟ್ಸ ಕಾಲೇಜು ಪಡೆದುಕೊಂಡಿದೆ.
2ನೇ ರನ್ನರ್ ಆಪ್
ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೇಜು ಹೊನ್ನಾವರ ಪುರುಷರ ವಿಭಾಗದಲ್ಲಿ 37 ಮಹಿಳೆಯರ ವಿಭಾಗದಲ್ಲಿ 17 ಮಿಕ್ಸ ರಿಲೇಯಲ್ಲಿ 2 ಅಂಕಗಳೊಂದಿಗೆ 2ನೇ ರನ್ನರ್ ಆಪ್ ಸ್ಥಾನವನ್ನು ಪಡೆದುಕೊಂಡಿದೆ.
ಮಹಿಳಾ ತಂಡದ ಚಾಂಪಿಯನ್‌ಶಿಪ್
97 ಅಂಕಗಳೊಂದಿಗೆ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕಕೋತ್ತರ ಅಧ್ಯಯನ ಸಂಸ್ಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
32 ಅಂಕಗಳೊಂದಿಗೆ ಮಣಕಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ರನ್ನರ ಆಪ್ ಪಡೆದುಕೊಂಡಿದೆ.
22 ಅಂಕಗಳೊಂದಿಗೆ ಧಾರವಾಡದ ಕರ್ನಾಟಕ ಆರ್ಟ್ಸ ಕಾಲೇಜು 2ನೇ ರನ್ನರ ಆಪ್ ಪಡದುಕೊಂಡಿದೆ.
ಪುರುಷ ತಂಡದ ಚಾಂಪಿಯನ್‌ಶಿಪ್
65 ಅಂಕಗಳೊಂದಿಗೆ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕಕೋತ್ತರ ಅಧ್ಯಯನ ಸಂಸ್ಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
52 ಅಂಕಗಳೊಂದಿಗೆ ಕರ್ನಾಟಕ ಆರ್ಟ್ಸ ಕಾಲೇಜು ತಂಡ ರನ್ನರ ಆಪ್ ಪಡೆದುಕೊಂಡಿದೆ.
37 ಅಂಕಗಳೊಂದಿಗೆ ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೇಜು ಹೊನ್ನಾವರ ಕಾಲೇಜು 2ನೇ ರನ್ನರ ಆಪ್ ಪಡದುಕೊಂಡಿದೆ.
ಬೆಸ್ಟ ಅಥ್ಲೀಟ್ ಪುರುಷ ವಿಭಾಗ
ಕರ್ನಾಟಕ ಆರ್ಟ್ಸ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ ಪಡೆದಿರುತ್ತಾನೆ
ಬೆಸ್ಟ ಅಥ್ಲೀಟ್ ಮಹಿಳಾ ವಿಭಾಗ
ಗದಗಿನ ಪ್ರಭು ರಾಜೇಂದ್ರ ಪದವಿ ಕಾಲೇಜಿನ ಮೇಘಾ ಮುನವಳ್ಳಿಮಠ ಪಡೆದಿರುತ್ತಾಳೆ.
ಈ ಕೂಟದಲ್ಲಿ 13 ನೂತನ ದಾಖಲೆಗಳು ದಾಖಲಾಗಿರುವುದು ಒಂದು ವೈಶಿಷ್ಟ್ಯ
ಪುರುಷರ ವಿಭಾಗ
110ಮೀಟರ್ ಪುರುಷರ ಹರ್ಡಲ್ಸ್ ವಿಭಾಗ
ಎಂ.ಪಿ.ಎಸ್ ಎಸ್.ಡಿಎಂ ಪದವಿ ಕಾಲೇಜಿನ ಈಶ್ವರ ನಾರಾಯಣಗೌಡ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ.
ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ಅಭಿಷೇಕ. ಎಸ್. ದುಪ್ಲಾಪುರ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ
ಕರ್ನಾಟಕ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜಿನ ಚೇತನ್. ಎ. ಪಾಟೀಲ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.
20ಕಿಮೀ ನಡಿಗೆ ಪುರುಷರ ವಿಭಾಗ
ಕಲಘಟಗಿಯ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಬಸವರಾಜ ಕೂಡಲಗಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತರ ಅಧ್ಯಯನ ಸಂಸ್ಥೆಯ ನಾಗರಾಜ್ ಜೋಗಿನ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಕಲಘಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚನ್ನಪ್ಪ ದಿವಾನ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ
21 ಕಿ.ಮೀ ಹಾಫ್ ಮ್ಯಾರಥಾನ್ ಪುರುಷರ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋದರ ಅಧ್ಯಯನ ಸಂಸ್ಥೆಯ ಪರಸಪ್ಪ ಹಸಿರೆ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.
ಧಾರವಾಡದ ಅಂಜುಮನ್ ಪದವಿ ಕಾಲೇಜಿನ ದಾದಾ. ಕೆ. ಜಮಖಂಡಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಧಾರವಾಡದ ರಾಯಪುರದ ಎಸ್.ಜೆ.ಎಮ್.ವಿ ಮಹಾಂತ ಪದವಿ ಕಾಲೇಜಿನ ರಮೇಶ್ ಬೆಳ್ಳಿಗಟ್ಟಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ
ಪುರುಷ ವಿಭಾಗದ ಹ್ಯಾಮರ್ ಥ್ರೋ
ಶಿರಸಿಯ ಎಂ.ಇ.ಎಸ್ ಪದವಿ ಕಾಲೇಜಿನ ಯಶಸ್.ಪಿ.ಕುರುಬರ 52.13 ಮೀಟರ್ ಹ್ಯಾಮರ್ ಎಸೆಯುವ ಮೂಲಕ ಈ ಹಿಂದೆ ಧಾರವಾಡದಲ್ಲಿ ಜೆ.ಎಸ್.ಎಸ್ ಬನಶಂಕರಿ ಪದವಿ ಕಾಲೇಜಿನ ವಿದ್ಯಾರ್ಥಿ ನಿರ್ಮಿಸಿದ್ದ 51.01 ಮೀ ದಾಖಲೆಯನ್ನು ಮುರಿದು ಹೊಸ ಕೂಟ ದಾಖಲೆಯನ್ನು ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.
ಹೊನ್ನಾವರದ ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೇಜಿನ ಸುದೀಪ್ ನಾರಾಯಣ್ ಹೊನ್ನೆಕಾಯಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಧಾರವಾಡದ ಅಂಜುಮನ್ ಪದವಿ ಕಾಲೇಜಿನ ಇಮಾಮ್‌ಸಾಬ್ ಕಟ್ಟಿಮನಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಪುರುಷರ ಪೋಲ್ ವಾಲ್ಟ್ ವಿಭಾಗ
ಶಿರಸಿಯ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನ ಸಾಗರವಳ್ಳಿ ಭುವನ್ ಮರಿಗೌಡ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ
ಹೊನ್ನಾವರದ ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೇಜಿನ ರಾಹುಲ್ ಜಗದೀಶ್ ಐಗಾಳ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಕಲಘಟಗಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ತುಕಾರಾಮ ದಳವಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಪುರುಷರ ಸ್ಟೀಪಲ್ ಚೇಸ್ ವಿಭಾಗ
ಕರ್ನಾಟಕ ಆರ್ಟ್ಸ ಕಾಲೇಜಿನ ನಾಗರಾಜ ದಿವಟೆ 9:06.42ನಿಮಿಷದಲ್ಲಿ ಗುರಿ ತಲುಪುವದರ ಮೂಲಕ 2023 ರಲ್ಲಿ ನಾನೇ ಬರೆದಿದ್ದ 9:14.69 ದಾಖಲೆ ಮುರಿದು ನೂತನ ಕೂಟ ದಾಖಲೆ ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾನೆ.
ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಾಲೇಜಿನ ಪ್ರತಾಪ ಚಲವಾದಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾನೆ.
ಕರ್ನಾಟಕ ಆರ್ಟ್ಸ ಕಾಲೇಜಿನ ಬಾಲು ಹೆಗ್ರಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾನೆ.
ಪುರುಷರ 400ಮೀ ಓಟದ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ನಂದಕುಮಾರ ಕೆ. ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.
ಕರ್ನಾಟಕ ಆರ್ಟ್ಸ ಕಾಲೇಜಿನ ಪಿ. ಪ್ರಕಾಶ ಬಾಬು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಶಿವಪುತ್ರ ಪೂಜಾರಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಪುರುಷರ ಡೆಕಾಥ್‌ಲಾನ್ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ರಾಕೇಶ್. ಎಂ.ಸಿ 4943 ಅಂಕಗಳ ಮೂಲಕ ಹಿಂದಿನ ಧಾರವಾದಲ್ಲಿ ಮಣಕಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಾರುತಿ ಜಿ.ವಿ ಬರೆದಿದ್ದ 4244 ಅಂಕಗಳ ದಾಖಲೆಯನ್ನು ಮುರಿದು ನೂತನ ಕೂಟ ದಾಖಲೆ ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.
ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೆೇಜು ಹೊನ್ನಾವರದ ರಾಹುಲ್ ಐಗಾಳ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಜೆ.ಎಸ್.ಎಸ್ ಬನಶಂಕರಿ ಪದವಿ ಕಾಲೇಜಿನ ನಾಗರಾಜ ನಾಯಕ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಪುರುಷರ ಟ್ರಿಪಲ್ ಜಂಪ್ ವಿಭಾಗ
ಭಟ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹರೀಶ ಮೋಗೇರ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.
ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೆೇಜು ಹೊನ್ನಾವರದ ಈಶ್ವರ ಆರ್. ಗೌಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಎಮ್.ಪಿ.ಇ.ಎಸ್ ಎಸ್.ಡಿ.ಎಂ ಪದವಿ ಕಾಲೆೇಜು ಹೊನ್ನಾವರದ ದಿನೇಶ ನಾಯಕ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಮಹಿಳಾ ವಿಭಾಗ
20 ಕಿಮೀ ಮಹಿಳೆಯರ ನಡಿಗೆ ವಿಭಾಗ
ಮಣಕೀಯ ಸರ್ಕಾರಿ ಪದವಿ ಕಾಲೇಜಿನ ಸುಜನಾ ನಾಯಕ್ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ
ಗದಗದ ಕೆ.ಎಲ್.ಇ ಜಗದ್ಗುರು ತೋಂಟದಾರ್ಯ ಕಾಲೇಜಿನ ಸಾವಿತ್ರಿ ಎಂಬಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಶಿರಸಿಯ ಪ್ರಥಮ ದರ್ಜೆ ಸರಕಾರಿ ಪದವಿ ಕಾಲೇಜಿನ ಭಾಗೀರಥಿ ನಾರಾಯಣ ಗೌಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.
21 ಕಿ.ಮೀ ಹಾಫ್-ಮ್ಯಾರಥಾನ್ ಮಹಿಳಾ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಸುಶ್ಮಿತಾ ಮುಗಳಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಚೈತ್ರ್‌್ರ. ಎಸ್ ಚಂದರಗಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಹುಬ್ಬಳ್ಳಿ ಕೆ.ಎಲ್.ಇ ಪದವಿ ಕಾಲೇಜಿನ ಕಾವ್ಯಶ್ರೀ ಸುರಪುರ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ
ಮಹಿಳೆಯರ ಹ್ಯಾಮರ್ ತ್ರೋ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಅನನ್ಯ ಪೂಜಾರಿ ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾಳೆ.
ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಲಕ್ಷ್ಮೀ. ಜೆ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಮಣಕೀಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಶ್ರೇಯಾ ಶ್ರೀಧರ್ ನಾಯಕ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಮಹಿಳೆಯರ ಟ್ರಿಪಲ್ ಜಂಪ್ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಅಕ್ಷತಾ ಬಿ ದೊಡ್ಡಮನಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ
ಮಣಕೀಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಜೀವಿತ ಮೊಗೇರ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ
ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾ ದೇವಾಡಿಗ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
ಮಹಿಳೆಯರ ಪೋಲ್ ವಾಲ್ಟ್ ವಿಭಾಗ
ಕಲಘಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲಕ್ಷ್ಮಿ ಕಮತಮನಿ 1.90 ಮೀಟರ್ ಫೊಲ್ ಎಸೆಯುವ ಮೂಲಕ ಈ ಹಿಂದಿನ 2023 ರಲ್ಲಿ ಧಾರವಾಡದಲ್ಲಿ ಮಣಕಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸ್ವಾತಿ ವೆಂಕಟೇಶ್ ಶೆಟ್ಟಿ ಅವರು ಎಸೆದ 1.80 ಮೀಟರ್ ದಾಖಲೆಯನ್ನು ಮುರಿದು ನೂತನ ಕೂಟ ದಾಖಲೆಯನ್ನು ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ.
ಸರ್ಕಾರಿ ಪದವಿ ಕಾಲೇಜು ಮಣಕಿಯ ಸ್ವಾತಿ ವೆಂಕಟೇಶ್ ಶೆಟ್ಟಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಮುರುಡೇಶ್ವರದ ಎಂ.ಪಿ.ಇ.ಎಸ್. ಎಸ್‌ಡಿಮ್ ಪದವಿ ಕಾಲೇಜಿನ ಕು. ಕೌಶಲ್ಯ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ
ಹೆಪ್ತಾಥಲಾನ್ ಮಹಿಳೆಯರ ವಿಭಾಗ
ಹೊನ್ನಾವರದ ಎಂ.ಪಿ.ಎಸ್ ಎಸ್.ಡಿ.ಎಂ ಪದವಿ ಕಾಲೇಜಿನ ನಿಕಿತಾ ಪುರುಷೋತ್ತಮ ಗೌಡ 3960 ಅಂಕಗಳೊಂದಿಗೆ ಹಿಂದಿನ ಧಾರವಾಡದಲ್ಲಿ ಮಣಕಿಯ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನ ಶ್ರೇಯಾ ಶ್ರೀಧರ್ ನಾಯಕ್ ನಿರ್ಮಿಸಿದ 1297 ಅಂಕಗಳ ದಾಖಲೆಯನ್ನು ಮುರಿದು ನೂತನ ಕೂಟ ದಾಖಲೆಯನ್ನು ನಿರ್ಮಿಸಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.
ಧಾರವಾಡದ ಕರ್ನಾಟಕ ಆರ್ಟ್ಸ ಕಾಲೇಜಿನ ಕೀರ್ತಿ ಸಂಗಣ್ಣವರ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ
ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನ ಸೌಜನ್ಯ ಪೂಜಾರಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ
3000 ಮೀಟರ್ ಮಹಿಳೆಯರ ಸ್ಟೀಪಲ್ ಚೇಸ್ ವಿಭಾಗ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿಜಯಲಕ್ಷ್ಮೀ ಕೆ. ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.
ಮಣಕಿಯ ಸರಕಾರಿ ಪದವಿ ಕಾಲೇಜಿನ ಶ್ರೇಯಾ ನಾಯಕ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಲಕ್ಷ್ಮೀ. ಕೆ.ಎಸ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ
ಮಹಿಳೆಯರ 400 ಮೀಟರ್ ಓಟದ ವಿಭಾಗ
ಗದುಗಿನ ಶ್ರೀ ಪ್ರಭು ರಾಜೇಂದ್ರ ದೈಹಿಕ ಶಿಕ್ಷಣ ಕಾಲೇಜಿನ ಮೇಘಾ ಮುನವಳ್ಳಿಮಠ 55.77 ಸೆಕೆಂಡಿನಲ್ಲಿ ಗುರಿ ತಲುಪಿ 1999 ರಲ್ಲಿ ಧಾರವಾಡದಲ್ಲಿ ಕೆ.ಸಿ.ಡಿ ಕಾಲೇಜಿನ ಮಹೇಶ್ವರಿ ಉಗಟ್ಟಿ ನಿರ್ಮಿಸಿದ್ದ 57.50 ಸೆಕೆಂಡಿನ ದಾಖಲೆ ಮುರಿದು ನೂತನಾ ಕ್ರೀಡಾ ದಾಖಲೆ ಬರೆದು, ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಸುಕನ್ಯಾ ಪತ್ರಿಮಠ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಹೊನ್ನಾವರದ ಸರಕಾರಿ ಪದವಿ ಕಾಲೇಜಿನ ಶೈಲಾ ಗೌಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.
4X100 ಮಿಕ್ಸ್ ರಿಲೇ
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಸಂಗಮೇಶ ಮಾಳಿ ತಂಡ 3:46.55 ನಿಮಿಷದಲ್ಲಿ ಗುರಿ ತಲುಪಿ ಹಿಂದಿನ 2023ರಲ್ಲಿ ಧಾರವಾಡದಲ್ಲಿ ಕೆ.ಸಿ.ಡಿ ಕಾಲೇಜಿನ ಮಣಿಕಂಟ ಮಡಿವಾಳರ ತಂಡ ನಿರ್ಮಿಸಿದ 3:57.61 ನಿಮಿಷದ ದಾಖಲೆ ಮುರಿದು ನೂತನ ಕೂಟ ದಾಖಲೆ ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ.
ಕರ್ನಾಟಕ ಆರ್ಟ್ಸ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಮಣಕಿಯ ಸರಕಾರಿ ಪದವಿ ಕಾಲೇಜಿನ ಲೋಹಿತ ನಾಯಕ್ ತಂಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ.