ಬೆಳಗಾವಿ 18: ನಗರದಲ್ಲಿ ಕಾಲೇಜು ವಿಧ್ಯಾಥರ್ಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಸಿಸಿಬಿ ಪೋಲೀಸರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ವಿದ್ಯಾಥರ್ಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೋಲೀಸ್ ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿದೆ. ಸ್ಥಳೀಯ ಗ್ಯಾಂಗ್ವಾಡಿಯಲ್ಲಿ ದುಗರ್ಾದೇವಿ ಮಂದಿರದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಅಶೋಕ ನಗರ ಮತ್ತು ಫೋಟರ್್ ರಸ್ತೆಯ ನಿವಾಸಿಗಳಾದ ಸಜರ್ು ಗೋವಿಂದ ಲೋಂಡೆ, ನಿಖಾಬ ಪೀರಜಧೆ, ತಬ್ರೇಜ್ ನರಗುಂದ, ಸಾದಾಬ ಪೀರಜಾದೆ ಎಂಬ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಒಂದೂವರೆ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಈ ದಾಳಿ ನಡೆಸಿದ ಸಿಸಿಬಿ ಪಿಐ ಗಡ್ಡೇಕರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.