ಬಾಗಲಕೋಟೆ 29 : ನಗರದ ವಿದ್ಯಾ ಪ್ರಸಾರಕ ಮಂಡಳದ ಸಕ್ರಿ ಪ್ರೌಢ ಶಾಲೆಯ ವಿದ್ಯಾಥರ್ಿಗಳು ರಾಜ್ಯಮಟ್ಟದ ಕುಸ್ತಿಯಲ್ಲಿ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ರಾಮನಗರ ಜಿಲ್ಲೆಯ ಕನಕಪೂರ ತಾಲೂಕಿನಲ್ಲಿ ನಡೆದ ರಾಜ್ಯಮಟ್ಟದ 14/17 ವರ್ಷ ವಯೋಮಿತಿಯ ಕುಸ್ತಿ ಪಂದ್ಯಾವಳಿಯಲ್ಲಿ ನಗರದ ವಿದ್ಯಾ ಪ್ರಸಾರಕ ಮಂಡಳದ ಸಕ್ರಿ ಪ್ರೌಢ ಶಾಲೆಯ ವಿದ್ಯಾಥರ್ಿಗಳಾದ ಅಭಿಷೇಕ ಪವಾರ 38 ಕೆ.ಜಿಯಲ್ಲಿ ಪ್ರಥಮ, ಆದರ್ಶ ಚೂಡಿದಾರ 41 ಕೆ.ಜಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಕಾಶ ಪಟೆ್ಟೀದ 57 ಕೆ.ಜಿ. ವಿಭಾಗದಲ್ಲಿ ದ್ವಿತೀಯ, ಕಾತರ್ಿಕ ಪಡತಾರೆ 48 ಕೆ.ಜಿ. ವಿಭಾಗದಲ್ಲಿ ದ್ವಿತೀಯ, ಕೆಂಪನಗೌಡ ಕೆಂಪಣ್ಣವರ 55 ಕೆ.ಜಿ. ವಿಭಾಗದಲ್ಲಿ ದ್ವಿತೀಯ, ದರ್ಶನ ಆಡಕರ 45 ಕೆ.ಜಿ. ವಿಭಾಗದಲ್ಲಿ ದ್ವಿತೀಯ, ಕಾತರ್ಿಕ ತಳವಾರ 44 ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ.
ಸಾಧನೆಗೈದ ಈ ಎಲ್ಲ ವಿದ್ಯಾಥರ್ಿಗಳನ್ನು ವಿದ್ಯಾ ಪ್ರಸಾರಕ ಮಂಡಳದ ಕಾಯರ್ಾಧ್ಯಕ್ಷೆ ಶ್ರೀಲತಾ ಹೆರಂಜಲ, ಗೌರವ ಕಾರ್ಯದಶರ್ಿ ಸಂದೀಪ ಕುಲಕಣರ್ಿ, ಪ್ರೌಢ ಶಾಲಾ ವಿಭಾಗದ ಉಪ ಸಮಿತಿಯ ಅಧ್ಯಕ್ಷ ಬಿ.ಆರ್. ಕಾಸಟ, ಉಪ ಪ್ರಾಚಾರ್ಯ ಬಿ.ಎಚ್. ಲಮಾಣಿ ಅಭಿನಂದಿಸಿದ್ದಾರೆ.