ಲೋಕದರ್ಶನವರದಿ
ರಾಣೆಬೆನ್ನೂರ. ಜು.07: ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪಾಜಿ ಅವರ ಸಕರ್ಾರ ಅವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದರ ಮೂಲಕ ಕರೋನಾ ವೈರಸ್ ಕೊವಿಡ್-19 ಲಾಕ್ಡೌನ್ ಅವಧಿಯಲ್ಲಿ ತನ್ನ ಮಾನವೀಯತೆ ಮೆರೆದಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ಮಂಗಳವಾರ ಇಲ್ಲಿನ ತಾಲೂಕಾ ಪಂಚಾಯತ್ ಸಭಾಂಗಣದ ಶಾಸಕರ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಒಂದೇ ಖಾತೆ ಹೊಂದಿರುವ ರೈತ ಫಲಾನುಭವಿಗಳಿಗೆ ಈಗಾಗಲೇ 19972 ರೈತರಿಗೆ ಡಿಬಿಟಿ ಮೂಲಕ ಮೆಕ್ಕೆಜೋಳ ಬೆಳೆದು ತೊಂದರೆಗೊಳಗಾದ ರೈತರಿಗೆ 5ಸಾವಿರ ರೂಪಾಯಿಗಳ ಪರಿಹಾರ ಧನ ವಗರ್ಾಯಿಸಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಜಂಟಿ ಖಾತೆ ಹೊಂದಿರುವ ಒಟ್ಟು 4024 ಫಲಾನುಭವಿಗಳಿದ್ದು, ಪಟ್ಟಿಯನ್ನು ಲಗತ್ತಿಸಿದೆ. 250 ಫಲಾನುಭವಿಗಳು ತಮ್ಮ ಒಪ್ಪಿಗೆ ಪತ್ರ ನೀಡಿದ್ದಾರೆ ಅವರಿಗೂ ಸಹ ಡಿಬಿಟಿ ಮೂಲಕ ಹಣ ವಗರ್ಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇನ್ನೂ ಎಫ್ಐಡಿ ಇಲ್ಲದ 14012 ರೈತ ಫಲಾನುಭವಿಗಳಿಗೆ ರೈತರ ಪಟ್ಟಿಯನ್ನು ಗ್ರಾಮಪಂಚಾಯ್ತಿಗಳಲ್ಲಿ ಪ್ರದಶರ್ಿಸಲಾಗಿದೆ. ರೈತರು ಕೂಡಲೇ ಎಫ್ಐಡಿಗಳನ್ನು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ 20222 ರೈತರಿಗೆ 5ಸಾವಿರ ರೂ. ಸಹಾಯ ಪರಿಹಾರ ಧನವಾಗಿ ಒಟ್ಟು 10.11 ಕೋಟಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ವಿವರಿಸಿದ ಶಾಸಕರು ರೈತರು ದೃತಿಗೆಡದೆ, ಆಶಾದಾಯಕವಾದ ಬದುಕನ್ನು ಸಾಗಿಸಬೇಕು ಎಂದು ಮನವಿ ಮಾಡಿದ ಶಾಸಕರು ಕೂಡಲೇ ಇನ್ನುಳಿದ ರೈತರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಲು ಮುಂದಾಗಬೇಕು ಎಂದು ಕೋರಿದರು.
2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರೀತ ಹಾಗೂ ನೀರಾವರಿ ಕೃಷಿ ಬೆಳೆಗಳ ಆವರಿಸಿದ ಕ್ಷೇತ್ರದ ವಿವಿರ ಇಂತಿದೆ. ಮೆಕ್ಕೆಜೋಳ-31250 ಹೆಕ್ಟರ್ ಗುರಿ ಹೊಂದಿದೆ. ಅದರಲ್ಲಿ 42613 ಹೆಕ್ಟರ್ ಸಾಧನೆಯಾಗಿದೆ. ಹತ್ತಿ-9700 ಹೆಕ್ಟರ್ ಗುರಿ, 1326 ಸಾಧನೆ, ಶೇಂಗಾ-900 ಹೆಕ್ಟರ್ ಗುರಿ, 1176 ಸಾಧನೆ, ಭತ್ತ-6250 ಹೆಕ್ಟರ್ ಗುರಿ, 0ಹೆಕ್ಟರ್ಸಾಧನೆ, ಇತರೆ- 5830 ಹೆಕ್ಟರ್ ಗುರಿ, 200ಸಾಧನೆ ಒಟ್ಟು 53930 ಹೆಕ್ಟರ್ ಗುರಿ ಇದ್ದು, ಅದರಲ್ಲಿ 45315 ಹೆಕ್ಟರ್ ಸಾಧನೆ ಮಾಡಲಾಗಿದೆ ಎಂದರು.
ತಾಲೂಕಿನ ಜೂನ್ ಅಂತ್ಯದವರೆಗೆ 204.00 ಮೀ.ಮೀ. ಮಳೆ ಆಗಬೇಕಾಗಿದ್ದು, ಅದರಲ್ಲಿ 20.16 ಮೀ.ಮೀ. ಮಳೆಯಾಗಿದೆ. ಪ್ರಧಾನಮಂತ್ರಿ ಬೆಳೆವಿಮಾ ಯೋಜನೆ(ಮುಂಗಾರು ಮಳೆಯಾಧಾರಿತ) ಬೆಳೆಗಳ ರೈತ ಪಾಲಿನ ವಿಮಾ ಕಂತು ತುಂಬಲು ಅವಧಿ ನಿಗದಿಪಡಿಸಲಾಗಿದೆ: ಹೆಸರು- 1 ಹೆಕ್ಟರ್ಗೆ 587.00, ಎಕರೆಗೆ -235. 15-7-2020 ಕೊನೆಯ ದಿನವಾಗಿದೆ. ಶೇಂಗಾ- 931.00, ಎಕರೆಗೆ 373, 31-07-2020, ಗೋವಿನ ಜೋಳ- 1012 ಹೆಕ್ಟರ್ಗೆ, ಎಕರೆಗೆ 405, 31-07-2020, ಹತ್ತಿ-2175 ಹೆಕ್ಟರ್ಗೆ, ಎಕರೆಗೆ 871, 31-07-2020, ಉಳ್ಳಾಗಡ್ಡಿ- 3540 ಹೆಕ್ಟರ್, ಎಕರೆಗೆ 1417-14-07-2020, ಮೆಣಸಿನಕಾಯಿ-3642 ಹೆಕ್ಟರ್ಗೆ, ಎಕರೆಗೆ 1457,-14-07-2020, ಸೂರ್ಯಕಾಂತಿ-708, ಎಕರೆಗೆ 884-14-07-2020 ಕಂತು ತುಂಬಲು ಕೊನೆಯ ದಿನವಾಗಿದೆ ಎಂದರು.
2020-21ನೇ ಸಾಲಿನ ಮುಂಗಾರು ಹಂಗಾಮಿಗೆ ತಾಲೂಕಿಗೆ ಒಟ್ಟು ವಿವಿಧ ಬೀಜಗಳ ಬೇಡಿಕೆ ಇದ್ದು, ಗೋವಿನ ಜೋಳ 2200 ಕ್ವಿಂಟಾಲ್, ಭತ್ತ-225 ಕ್ವಿಂಟಾಲ್, ತೋಗರಿ- 110, ಜೋಳ-10, ಶೇಂಗಾ-50, ಸೋಯಾ ಅವರೆ-250 ಕ್ವಿಂಟಾಲ್, ಇತರೆ ಬೀಜಗಳು -110 ಕ್ವಿಂಟಾಲ್ ಬೇಕಗಿವೆ. ಅದಕ್ಕಾಗಿ ಬಿತ್ತನೆ ಬೀಜಗಳ ಕೊರತೆಯಾಗದಂತೆ ಈಗಾಗಲೇ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 53930 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹತ್ತಿ ಬೆಳೆ-9700, ಗೋವಿನ ಜೋಳ-35307, ಜೋಳ-600, ಭತ್ತ-7648, ಮತ್ತು ಇತರೆ 676 ಹೆಕ್ಟರ್ ಪ್ರದೇಶವಾಗಿದೆ ಎಂದರು. ತಾಲೂಕಿನಲ್ಲಿ ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರಗಳ ಬೇಡಿಕೆ ಇಂತಿದೆ. ಯೂರಿಯಾ 6687 ಟನ್, ಪೊಟ್ಯಾಶ್-841 ಟನ್, ಕಾಂಪ್ಲೇಕ್ಸ್(ಡಿಎಪಿ)6028 ಟನ್ ಹಾಗೂ ಎಸ್ಎಸ್ಪಿ 85 ಟನ್ ಅವಶ್ಯಕತೆ ಇದ್ದು, ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದ ರೀತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ತಾಲೂಕಾಡಳಿತ ಸದಾ ಸಿದ್ಧವಿದೆ ಎಂದರು.ದಿನದ 24 ತಾಸು ನೀರಿನ ಸರಬರಾಜು ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿ ಬಂದಿದೆ. ಕೆಲವು ಕಡೆ ತಾಂತ್ರೀಕ ಸಮಸ್ಯೆಯಿಂದ ಆ ಸ್ಥಳಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈ ಕುರಿತು ನಗರಸಭೆ ಪೌರಾಯುಕ್ತರು ಮತ್ತು ತಾಂತ್ರೀಕ ಅಧಿಕಾರಿಗಳೊಂದಿಗೆ ಚಚರ್ಿಸಲಾಗಿದೆ. ಅಲ್ಲದೇ ತಾವೂ ಸಹ ಪ್ರತ್ಯೇಕವಾಗಿ ಈ ಕುರಿತು ಸಮೀಕ್ಷೆ ನಡೆಸಲಾಗಿದೆ. ವಾಣಿಜ್ಯ ನಗರದ ನಾಗರೀಕರ ಬಹುವರ್ಷಗಳ ಆಸೆ ಕನಸು ನಿರೀಕ್ಷೆಯಂತೆ ಆದಷ್ಟುಬೇಗನೆ ಅಂದರೆ ಡಿಸೆಂಬರ್ 25 ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಜನ್ಮದಿನೋತ್ಸವದ ನಿಮಿತ್ತವಾಗಿ ಅಂದು ನಗರಕ್ಕೆ 24 ತಾಸು ನೀರು ಹರಿಸಲು ಚಾಲನೆ ನೀಡುವುದು ಶತಸಿದ್ಧವೆಂದು ಭರವಸೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಜೆಪಿ ಮುಖಂಡ ಮಂಜುನಾಥ ಓಲೇಕಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಉಚಿತ ಹಾಲು ವಿತರಣೆ