ಸಕಲಚೇತನ - ಉಚಿತ ಶ್ರವಣ ಸಾಧನ ವಿತರಣೆ ಕಾರ್ಯಕ್ರಮ ಕೊಪ್ಪಳ

Sakalchetana - Free Hearing Aid Distribution Program Koppala

ಲೋಕದರ್ಶನ ವರದಿ 

ಸಕಲಚೇತನ - ಉಚಿತ ಶ್ರವಣ ಸಾಧನ ವಿತರಣೆ ಕಾರ್ಯಕ್ರಮ

 ಕೊಪ್ಪಳ 27: ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಕೊಪ್ಪಳ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮೈಸೂರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಕಲಚೇತನ ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ಶ್ರವಣಸಾಧನಗಳ ವಿತರಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 27 ರಂದು ಜರುಗಿತು.  

ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗವಿಮಠವು ಸಮಾಜಮುಖಿ ಸೇವೆ ಹಾಗೂ ಜನರ ಆರೋಗ್ಯದ ಕಾಳಜಿ ಹೊಂದಿರುವುದು ಶ್ಲಾಘನೀಯವೆಂದು ತಿಳಿಸಿದರು. ಕೊಪ್ಪಳದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಸೋಮರೆಡ್ಡಿ ಅಳವಂಡಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ವಿಕಲಚೇತನರ ಸ್ಥಿತಿಗತಿ ಹಾಗೂ ಅದರ ಪರಿಹಾರದ ಅವಶ್ಯಕತೆಯ ರೂಪುರೇಷೆಗಳನ್ನು ಪ್ರಸ್ತಾಪಿಸಿದರು.  

ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಾವಿದ್ಯಾಲಯದ ವೈದ್ಯರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಸರ್ವೇಕ್ಷಣೆಯಲ್ಲಿ ಆಯ್ಕೆಯಾದ ಮತ್ತು ಜಾತ್ರೆಯ ಸಮಯದಲ್ಲಿ ಉಚಿತ ಶ್ರವಣ ಸಾಧನಗಳಿಗೆ ನೋಂದಾಯಿತ  ಶಿಬಿರಾರ್ಥಿಗಳ ತಪಾಸಣೆಯನ್ನು ಮತ್ತು ಆಯ್ಕೆಯಾದವರಿಗೆ ಉಚಿತ ಶ್ರವಣಸಾಧನವನ್ನು ವಿತರಿಸಲಾಗುವುದು.