ಞರಾಜೇಂದ್ರ ತಾಳುಕರ ಅವರಿಗೆ ಸದ್ಗುರು ಕಾಯಕಶ್ರೀ ಪ್ರಶಸ್ತಿ

ಲೋಕದರ್ಶನ ವರದಿ
ಬೆಳಗಾವಿ 9-  ನಗರದ  ಶ್ರೀಸದ್ಗುರು ಸಾಹಿತ್ಯ ಪ್ರತಿಷ್ಠಾನದವರು ವಿಶ್ವ ಶೈಕ್ಷಣಿಕ  ದಿನಾಚರಣೆ ಅಂಗವಾಗಿ  ಸಮಾಜ ಸೇವಕರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಳಗಾವಿಯ ಕೃಷ್ಞರಾಜೇಂದ್ರ ತಾಳುಕರ  ಅವರ ಅಪರೂಪ ಸೇವೆಯನ್ನು ಗುರುತಿಸಿ ಸದ್ಗುರು ಕಾಯಕಶ್ರೀ ಪ್ರಶಸ್ತಿಯನ್ನು  ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ  ಮಠದ  ಪೂಜ್ಯ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮುಕ್ತಿ ಮಠದ  ಮಹಸ್ವಾಮಿಗಳಾದ ಪೂಜ್ಯ ಶ್ರೀ ಷ.ಬ್ರ. ತಪೋರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಹಿರಿಯ ಪತ್ರಕರ್ತ ಕಲ್ಯಾಣರಾವ ಮುಚಳಂಬಿ ನಿವೃತ್ತ ಪ್ರಾಚಾರ್ಯ ಎಸ್.ಆರ್. ಹಿರೇಮಠ, ಸಾಹಿತಿ ಎಲ್. ಎಸ್. ಶಾಸ್ತ್ರಿ, ಶರಣಪ್ಪ ಚಿಕ್ಕನಗೌಡರ, ರಾಜೇಂದ್ರ ಗೋಶ್ಯಾನಟ್ಟಿ, ರಾಜು ಕೋಲಕಾರು ಮುಂತಾದವರು  ಉಪಸ್ಥಿತರಿದ್ದರು.