ಆಧ್ಯಾತ್ಮದ ಗಟ್ಟಿತನ ತೋರಿದ ಸಂತ ವಿವೇಕಾನಂದ-ಪ್ರೊ.ಜಿ.ಬಿ.ಅಣೆಪ್ಪನವರ

ಮುಧೋಳ13: ವಿವೇಕಾನಂದರು ಆರಂಭದಿಂದಲೇ ಮೈಗೂಡಿಸಿಕೊಂಡಿದ್ದ ಆದರ್ಶಗಳು ಅವರನ್ನು ಮುಂದೆ ವಿಶ್ವಮಟ್ಟಕ್ಕೆ ಏರುವಂತೆ ಮಾಡಿತು,ಅವರ ಸಂದೇಶಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಸ್ವಾಮಿ ವಿವೇಕಾನಂದ ವಿಶ್ವಕ್ಕೆ ಆದರ್ಶಪ್ರಾಯ ಆಧ್ಯಾತ್ಮಿಕ ಚಿಂತಕ ಹಾಗೂ ಸನ್ಯಾಸಿ ಸಮೂಹಕ್ಕೆ ಮಹಾನ್ ಗುರುವಾಗಿದ್ದಾರೆ ಎಂದು ಎಸ್.ಆರ್.ಕಂಠಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ, ಸಾಂಸ್ಕೃತಿಕ ವಿಭಾಗದ ಕಾಯರ್ಾಧ್ಯಕ್ಷೆ ಪ್ರೊ.ಜಿ.ಬಿ. ಅಣೆಪ್ಪನವರ ಹೇಳಿದರು. 

  ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕ 1 ಮತ್ತು 2ರ ಸಹಯೋಗದಲ್ಲಿ ಭಾನುವಾರ ಕಾಲೇಜಿನ ಸಭಾ ಭವನದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ಸಮಪರ್ಿಸಿ, ಗೌರವ ಸಲ್ಲಿಸಿದ ಬಳಿಕ ಮಾತನಾಡಿ ಸ್ವಾಮಿ ವಿವೇಕಾನಂದರು ಜಗತ್ತಿಗೆ ಅಧ್ಯಾತ್ಮಿಕ ಜ್ಞಾನವನ್ನು ಧಾರೆ ಎರೆದ ದಾರ್ಶನಿಕ ವ್ಯಕ್ತಿಯಾಗಿ ತಮ್ಮ ಅಲ್ಪ ಸಮಯದ ಬದುಕನ್ನು ಭಾರತಾಂಬೆಯ ಸೇವೆಗೆ ಮೀಸಲಿಟ್ಟು ಆದರ್ಶಪ್ರಾಯರಾಗಿದ್ದರೆ ಎಂದರು.

   ಎನ್.ಎಸ್.ಎಸ್ ಘಟಕ-1ರ ಸಂಯೋಜನಾಧಿಕಾರಿ ಪ್ರೊ.ವೀರಣ್ಣ ಕಿತ್ತೂರ ಮಾತನಾಡಿ ಸ್ವಾಮಿ ವಿವೇಕಾನಂದ ಮಾದರಿಯಾದ ದೀರ ಸನ್ಯಾಸಿ, ಇಂತಹ ಮಹಾನ್ ಆಧ್ಯಾತ್ಮಿಕ ಚಿಂತಕರು ನಮ್ಮ ದೇಶದಲ್ಲಿ ಜನಿಸಿರುವುದು ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆ ಪಡುವ ವಿಚಾರ,ಭಾರತದ ಸನಾತನ ಧರ್ಮ,ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆಯ ಗಟ್ಟಿತನವನ್ನು ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ತೋರಿಸಿಕೊಟ್ಟರು,ಅವರ ಆಧ್ಯಾತ್ಮಿಕ ಚಿಂತನೆ, ಅವರ ವ್ಯಕ್ತಿತ್ವಕ್ಕೆ ಇಡೀ ವಿಶ್ವವೇ ಮಾರುಹೋಗಿದೆ ಇಂತಹ ಶ್ರೀಮಂತ ವ್ಯಕ್ತಿಯ ಆದರ್ಶಪ್ರಾಯ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅವರ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದರು. 

  ರಾಜ್ಯಶಾಸ ವಿಭಾಗದ ಮುಖ್ಯಸ್ಥ ಡಾ.ಅಪ್ಪು ರಾಠೋಡ ಮಾತನಾಡಿ ಯುವಕ ಮತ್ತು ಯುವತಿಯರು ದೇಶ ಮತ್ತು ಸಮಾಜವನ್ನು ಸದೃಢಗೊಳಿಸುತ್ತಾರೆ ಎಂಬ ಉದ್ದೇಶ ಮತ್ತು ವಿಶ್ವಾಸವನ್ನು ಸ್ವಾಮಿ ವಿವೇಕಾನಂದರು ಹೊಂದಿದ್ದರು ಅದಕ್ಕಾಗಿ ಅವರು ಯುವ ಸಮೂಹ ಸಂಘಟಿತರಾಗಲು ತಮ್ಮ ಭಾಷಣಗಳಲಿ ಪ್ರೇರಣೆ ನೀಡುತ್ತಿದ್ದರು, ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಪಾಲಿಸಬೇಕು ಎಂದರು. 

 ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಎಚ್.ವಡ್ಡರ ಮಾತನಾಡಿ ಸ್ವಾಮಿ ವಿವೇಕಾನಂದರ ಮೌಲ್ಯ, ತತ್ವ, ಸಿದ್ದಾಂತ, ಆಧ್ಯಾತ್ಮಿಕ ಚಿಂತನೆ ಮುಂತಾದ ಅವರ ವಿಚಾರ ಧಾರೆಗಳಲ್ಲಿ ಕಿಂಚಿತ್ತಾದರೂ ತಿಳಿದುಕೊಂಡು ಅದರಲ್ಲಿ ಇನ್ನೂ ಸ್ವಲ್ಪ ಭಾಗ ತನ್ನಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ಮತ್ತು ಸಮಾಜ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿದುಕೊಂಡು ಅವರ ಆದರ್ಶ ಪಾಲಿಸಬೇಕು ಎಂದು ಹೇಳಿದರು. 

  ಬಿ.ಸಿ.ಎ ಮುಖ್ಯಸ್ಥ ಪ್ರೊ.ಬಿ.ಎಲ್.ಲಿಂಗರಡ್ಡಿ ಮಾತನಾಡಿ ಇಂದಿನ ಯುವ ಜನಾಂಗ ನಕರಾತ್ಮಿಕ ವಿಚಾರಗಳಿಗೆ ಬಹುಬೇಗ ಆಕರ್ಷಕರಾಗುತ್ತಾರೆ. ಸ್ವಾಮಿ ವಿವೇಕಾನಂದರಂತಹ ಆಧ್ಯಾತ್ಮಿಕ ಚಿಂತಕರ ಬಗ್ಗೆ ಅವರ ತತ್ವ ಸಿದ್ಧಾಂತಗಳ  ಬಗ್ಗೆ ತಿಳಿದಿಕೊಳ್ಳಲು ಆಸಕ್ತಿ ವಹಿಸದಿರುವುದು ಆಧುನಿಕ ಸಮಾಜದ ದುರಂತ, ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ಸೂತರ್ಿಯಾಗಿರುವ ಸರ್ವಕಾಲಿಕ ಸಂತ,ವಿದ್ಯಾರ್ಥಿ ಗಳು ಸ್ವಾಮಿ ವಿವೇಕಾನಂದರ ಜಯಂತಿ ದಿನ ಮಾತ್ರ ಅವರನ್ನು ನೆನಪಿಸಿಕೊಂಡರೆ ಸಾಲದು, ಯುವ ಸಮೂಹ ಅವರನ್ನು ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು. 

   ಪ್ರೊ.ಜಿ.ಬಿ.ಅಣೆಪ್ಪನವರ,ಪ್ರೊ.ಎಂ.ಎಚ್.ವಡ್ಡರ, ಡಾ.ಎ.ಯು.ರಾಠೋಡ, ಪ್ರೊ.ಬಿ.ಎಲ್.ಲಿಂಗರಡ್ಡಿ, ಪ್ರೊ.ವ್ಹಿ.ಎಂ. ಕಿತ್ತೂರ, ಪ್ರೊ.ಎಸ್.ಕೆ. ಸಾರವಾಡ, ಪ್ರೊ.ಎಂ.ಎಚ್.ಪಾಟೀಲ, ಪ್ರೊ.ರೇಶ್ಮಿ, ಮಲ್ಲಿಗೆಹಳ್ಳಿ ಮಹಾದೇವಸ್ವಾಮಿ ಇತರರು ಉಪಸ್ಥಿತರಿದ್ದರು.