ಸಂತ ಸೇವಾಲಾಲರ ತತ್ವಜ್ಞಾನ ಪ್ರಸ್ತುತ

 ಗುಳೇದಗುಡ್ಡ,15: ಪರಿಸರ ಹಾಗೂ ಮಾನವನ ಸಂಬಂಧ ಕುರಿತಾದ ಸಂತ ಸೇವಾಲಾಲರ ಮಹಾರಾಜರ ತತ್ವಜ್ಞಾನ ಸರ್ವಕಾಲಕೂ ಪ್ರಸ್ತುತವೆಂದು ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ರವೀಂದ್ರನಾಥ ಅಂಗಡಿ ಹೇಳಿದರು.

       ಅವರು ಶನಿವಾರ ಪುರಸಭೆಯಲ್ಲಿ ಸಂತ ಸೇವಾಲಾಲರ ಮಹಾರಾಜರ 281 ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಿ ಮಾತನಾಡಿ,  280 ವರ್ಷಗಳ ಹಿಂದೆ ಫೆ. 15, 1739 ರಲ್ಲಿ ಈ ಭೂಮಿಯ ಮೇಲೆ ಜನಿಸಿದ ಸಂತ ಸೇವಾಲಾಲ ಮಹಾರಾಜರು ಪರಿಸರ ಪ್ರೇಮಿಗಳಾಗಿದ್ದರು. ಅರಣ್ಯ ಪರಿಸರದ ಸಂರಕ್ಷಣೆ, ನೈಸಗರ್ಿಕ ಜೀವನದ ಮೇಲಿನ ಪ್ರೀತಿ, ಘನತೆಯಿಂದ ಬದುಕುವ ಕಲೆ, ಮಹಿಳೆಯರನ್ನು ಗೌರವಿಸುವ ಸಾಮಾಜಿಕ ಕಳಕಳಿಯ ಮೌಲ್ಯಗಳ ಕುರಿತಾದ ಅವರ 22 ತತ್ವಗಳು ತತ್ವಜ್ಞಾನ ಆಧರಿತ ಅಂಶಗಳೇ ಆಗಿವೆ. ಅವು ಸರ್ವಕಾಲಕೂ ಪ್ರಸ್ತುತವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ  ಅನುಸರಿಸಬೇಕು. ಅಂದಾಗ ಅವರ ಜನ್ಮದಿನದ ಆಚರಣೆಗೆ ಮಹತ್ವ ಬರುತ್ತದೆ ಎಂದರು. 

       ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಗಳಾದ ಎಂ.ಆರ್.ಸುಗಂಧಿ, ರಮೇಶ ಪದಕಿ, ಎಸ್.ಎಂ. ಸರಗಣಾಚಾರಿ, ಎಸ್.ಬಿ.ಬ್ಯಾಳಿ, ಆರ್.ವಿ.ಚಂದರಗಿ, ಹುಲಗಪ್ಪ ಚಲವಾದಿ, ತಿಮ್ಮಣ್ಣ ದಾಸರ, ಮಹಾಗುಂಡಯ್ಯ ನಂದಿಕೇಶ್ವರಮಠ,  ಐ.ಬಿ. ಮೇಲ್ದಾಪೂರ ಸೇರಿದಂತೆ ಇತರರು ಇದ್ದರು.