ಸರ್ವಜ್ಞ ವಿದ್ಯಾಪೀಠದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ

Saint Sewalal Jayanti celebration at Sarvajna Vidyapeeth

ತಾಳಿಕೋಟೆ 16: ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ 286 ನೆಯ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಸೇವಾಲಾಲ್ ರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಯ ಸಂತೋಷ ಪವಾರ ಮಾತನಾಡಿ ಬಂಜಾರಾ ಸಮುದಾಯದ ಆರಾಧ್ಯ ದೈವ ವಾಗಿರುವ ಶ್ರೀ ಸಂತ ಸೇವಾಲಾಲರನ್ನು ಬಂಜಾರರು ಮೋತಿವಾಳು, ಆಇವಳೋ, ಎಂದು ಕರೆಯುತ್ತಾರೆ. ತಂದೆ ಭೀಮಾನಾಯಕ ತಾಯಿ ಧರ್ಮಣಿ ಯವರ ಉದರದಲ್ಲಿ ಜನಿಸಿದ ಸೇವಾಲಾಲರು ಹಲವಾರು ಪವಾಡಗಳನ್ನು ಮಾಡಿದ್ದಾರೆ. ಕಲ್ಲುಗಳಿಂದ ನಗಾರಿ ತಯಾರಿಸಿ ಬಾರಿಸಿದ್ದಾರೆ. ಮಣ್ಣಿನಿಂದ ಸಿರಾ ಮಾಡಿ ಸ್ನೇಹಿತರಿಗೆ ಉಣ ಬಡಿಸಿದ್ದಾರೆ. ಹೀಗೆ ಹಲವಾರು ಪವಾಡಗಳನ್ನು ಮಾಡುತ್ತಾ ಬಂಜಾರರಿಗೆ ವ್ಯಸನ ಮುಕ್ತರಾಗಿರಿ ಮತ್ತು ಪ್ರಾಮಾಣಿಕತೆಯಿಂದ ಜೀವನವನ್ನು ಕಳೆಯರಿ ಮೋಸ ಮಾಡದಿರಿ ಬಡಬಗ್ಗರಿಗೆ ಸಹಾಯವನ್ನು ಮಾಡಿರಿ ಎಂಬ ಸಂದೇಶಗಳನ್ನು ನೀಡಿದ್ದಾರೆ. ಸಮಾಜದಲ್ಲಿ ನಾವು ಜಾತಿ ಧರ್ಮ ಜನಾಂಗಕ್ಕೆ ಸೀಮಿತರಾಗಿರದೆ ಎಲ್ಲಾ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತಿಳಿದುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  

ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ,ಶಾಂತಗೌಡ ಬಿರಾದಾರ,ಭೀಮನಗೌಡ ಸಾಸನೂರ,ರಸೂಲಸಾ ತುರ್ಕನಗೇರಿ, ರವಿಕುಮಾರ ಮಲ್ಲಾಬಾದಿ,ಬಸವರಾಜ ಸವದತ್ತಿ ,ಮೌಲಾಲಿ ವಾಲಿಕಾರ, ಸಿದ್ದನಗೌಡ ಮೂದನೂರು, ಶರಣಗೌಡ ಕಾಚಾಪುರ,ರಮೇಶ ಪಾಸೋಡಿ, ರೂಪಾ ಪಾಟೀಲ, ಶಿವಲೀಲಾ ಚುಂಚನೂರ,ದೇವಿಂದ್ರ ಗುಳೆದ,ಅನಿತಾ ಚೌದ್ರಿ, ಅಂಬುಜಾ ಹಜೇರಿ, ಶಿವಕುಮಾರ ಕುಂಬಾರ, ರಾಜಬಿ ಬಿದರಿ,ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ಹೇಮಾ ಕೊಡೆಕಲ್, ನಾಗಶ್ರೀ ನಾಯಕ, ಮೇಘಾ ಪಾಟೀಲ, ಮುಬಿನ ಮುರಾಳ, ತನುಶ್ರೀ ಮಹೇಂದ್ರಕರ, ಶಂಕ್ರಮ್ಮ, ಮುಬಾರಕ ಬನಹಟ್ಟಿ ಹಾಗೂ ಸರ್ವ ಗುರು ಬಳಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.