ಲಕ್ನೋ, ಆಗಸ್ಟ್ 16 ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿದ್ದ ಪುರಾತನ ಸಂತ ರವಿದಾಸ್ ದೇಗುಲವನ್ನು ದ್ವಂಸಗೊಳಿಸಿರುವುದರ ವಿರುದ್ಧ ಆಗಸ್ಟ್ 21 ರಂದು ರಾಷ್ಟ್ರ ರಾಜಧಾನಿ ದೆಹಲಿ ಬಂದ್ ಗೆ ಕರೆ ನೀಡಿರುವ ದಲಿತ ಹೋರಾಟಗಾರ ಚಂದ್ರಶೇಖರ್ ಆಜಾದ್ ರಾವಣ್ ನೇತೃತ್ವದ ಭೀಮ್ ಸೇನೆ, ನಂತರ ಜಂತರ್ ಮಂಥರ್ ನಲ್ಲಿ ಭಾರಿ ಪ್ರತಿಭಟನೆ ಸಭೆ ನಡೆಸಲಾಗುವುದು ಎಂದು ಪ್ರಕಟಿಸಿದ್ದಾರೆ.
ದೇಗುಲದ ಭೂಮಿಯನ್ನು ಸಂತ ಗುರುದಾಸ್ ಅವರ ಅನುಯಾಯಿಗಳಿಗೆ ವಾಪಸ್ಸು ನೀಡಬೇಕು, ಅದೇ ಸ್ಥಳದಲ್ಲಿ ದೇಗುಲವನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯಲಿರುವ ದಿನವಿಡೀ ಪ್ರತಿಭಟನೆಯಲ್ಲಿ ದೇಶಾದ್ಯಂತ ತನ್ನ ಲಕ್ಷಾಂತರ ಕಾರ್ಯಕರ್ತರು ಆಗಮಿಸಬೇಕು ಭೀಮ್ ಸೇನೆ ಮನವಿ ಮಾಡಿದೆ.
ಹಿಂದೂ ರಾಷ್ಟ್ರ ಕಲ್ಪನೆಯ ವಿರುದ್ಧ ಗುರು ರವಿದಾಸ್ ಅವರು ಬೋಧನೆಗಳು ಇರುವ ಕಾರಣ, ಮನುವಾದಿ ಬಿಜೆಪಿ ಸರ್ಕಾರ ಹಾಗೂ ನ್ಯಾಯಾಧೀಶರು ಭೂಮಿ ಒತ್ತವರಿ ಹೆಸರಿನಲ್ಲಿ ಪುರಾತನ ದೇಗುಲದ ದ್ವಂಸಕ್ಕೆ ಆದೇಶ ನೀಡಿದ್ದಾರೆ ಎಂದು ಆರೋಪಿಸಿದರು.
ದ್ವಂಸಗೊಳಿಸಿರುವ ನಿರ್ದಿಷ್ಟ ಕಟ್ಟಡ ಐತಿಹಾಸಿಕ ಸ್ಥಳವಾಗಿದ್ದು, ಈ ಸ್ಥಳದಲ್ಲಿ ಸಂತ ರವಿ ದಾಸ್ ವಿಶ್ರಾಂತಿ ಪಡೆದಿದ್ದರು ಎಂಬುದನ್ನು ರವಿದಾಸ್ ಸಮುದಾಯ ಅಚಲವಾಗಿ ನಂಬಿಕೆಯಿರಿಸಿಕೊಂಡಿದೆ. ಅಲ್ಲದೆ ಈ ಸ್ಥಳವನ್ನು ಸಂತ ಗುರು ರವಿದಾಸ್ ಅವರ ವಿಶ್ರಾಮಧಾಮ ಎಂದೂ ಕೂಡಾ ಹೆಸರುವಾಸಿಯಾಗಿದೆ ಎಂದು ಭೀಮ್ ಆರ್ಮಿಯ ಸಂಸ್ಥಾಪಕ ಆಜಾದ್ ಹೇಳಿದ್ದಾರೆ.
ದೇಗುಲ ದ್ವಂಸಗೊಳಿಸಿರುವ ಖಂಡನಾತ್ಮಕ ಕೃತ್ಯಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ದೆಹಲಿಯ ಎಎಪಿ ರಾಜ್ಯ ಸರ್ಕಾರ ಕಾರಣ ಎಂದು ಆರೋಪಿಸಿರುವ ಬೀಮ್ ಸೇನೆ, ದಲಿತ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಸರ್ಕಾರ ಇನ್ನೂ ಜಾರಿಗೊಳಿಸಿಲ್ಲ. ರವಿದಾಸ್ ದೇಗುಲ ದ್ವಂಸಗೊಳಿಲು ಎಂದು ಆದೇಶ ನೀಡಿದ ಕೆಲವೇ ದಿನಗಳಲ್ಲಿ ದೇಗುಲ ದ್ವಂಸಗೊಳಿಸಲಾಗಿದೆ. ಆಗಸ್ಟ್ 21 ರಂದು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ದೇಶಾದ್ಯಂತ ಭೀಮ್ ಸೇನಾ ಕಾರ್ಯಕರ್ತರು ಹಾಗೂ ಸಂತ ರವಿ ದಾಸ್ ಅನುಯಾಯಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು
ಇದಕ್ಕೂ ಮೊದಲು ಭೀಮ್ ಆರ್ಮಿ ಪಂಜಾಬ್ ನಲ್ಲಿ ಆಗಸ್ಟ್ 13 ರಂದು ದೇಗುಲ ದ್ವಂಸಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು
ಈ ನಡುವೆ, ಬಿಎಸ್ ಪಿ ಪರಮೋಚ್ಛ ನಾಯಕಿ ಮಾಯಾವತಿ, ದೇಗುಲ ದ್ವಂಸ ಕೃತ್ಯ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ದೆಹಲಿಯ ಎಎಪಿ ರಾಜ್ಯ ಸರ್ಕರದ ಜಾತಿವಾದದ ಮನೋಭಾವನೆಯನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
ದೇಗುಲ ದ್ವಂಸವನ್ನು ನಮ್ಮ ಪಕ್ಷ ಬಲವಾಗಿ ವಿರೋಧಿಸಲಿದೆ. ಉಭಯ ಸರ್ಕಾರಗಳು ದೇಗುಲ ನಿರ್ಮಾಣಕ್ಕೆ ತಗುಲುವ ವೆಚ್ಚವನ್ನು ಸಮವಾಗಿ ಭರಿಸಿ ಪುನರ್ ನಿರ್ಮಿ]ಸಿಕೊಡಬೇಕು ಎಂದು ಮಾಯಾವತಿ ಒತ್ತಾಯಿಸಿದ್ದಾರೆ.
ಶತಮಾನಗಳಷ್ಟು ಹಳೆದಾದ ಗುರು ರವಿದಾಸ್ ದೇಗುಲವನ್ನು ಆಗಸ್ಟ್ 9 ರಂದು ಸುಪ್ರೀಂ ಕೋರ್ಟ್ ಆದೇಶ ಜಾರಿಗೊಳಿಸುವ ಭಾಗವಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ದ್ವಂಸಗೊಳಿಸಿತ್ತು. ದೇಗುಲವನ್ನು ದ್ವಂಸಗೊಳಿಸಿರುವ ಘಟನೆಗೆ ದೇಶಾದ್ಯಂತ ದಲಿತ ದಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.