ಟೋಕಿಯೋ, ಜು 26 ಭಾರತದ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಅವರು ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಟೂನರ್ಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ 36 ನಿಮಿಷಗಳ ಕಾಲ ನಡೆದ ಜಪಾನ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಸಾತಿ ಪ್ರಣೀತ್ 21-12, 21-15 ನೇರ ಸೆಟ್ಗಳ ಅಂತರದಲ್ಲಿ ಇಂಡೋನೇಷ್ಯಾದ ಟಾಮ್ಮಿ ಸುಗಿಯಾಟರ್ೊ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಪಂದ್ಯದಲ್ಲಿ ಪಾರಮ್ಯ ಮೆರೆದ 26ರ ಪ್ರಾಯದ ಸಾಯಿ ಪ್ರಣೀತ್ ಮೊದಲನೇ ಸೆಟ್ನಲ್ಲೇ 21-12 ಭಾರಿ ಅಂತರದಲ್ಲಿ ಗೆದ್ದರು. ಎರಡನೇ ಸೆಟ್ನಲ್ಲಿಯೂ ಅದೇ ಲಯ ಮುಂದುವರಿಸಿ ಇಂಡೋನೇಷ್ಯಾ ಆಟಗಾರನನ್ನು 15 ಗೇಮ್ಗಳಿಗೆ ನಿಯಂತ್ರಿಸಿದರು. ಆರು ಅಂಕಗಳ ಅಂತರದಲ್ಲಿ ಎರಡನೇ ಸೆಟ್ ಗೆದ್ದು ಪ್ರಣೀತ್ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡರು.
ಇದಕ್ಕೂ ಮುನ್ನ ಗುರುವಾರ ಜಪಾನ್ನ ಕಂಟಾ ತೆಸುನೆಯಾಮ ಅವರ ವಿರುದ್ಧ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದು ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು