ಸಾಹಿತ್ಯ ಸಮ್ಮೇಳನ ಎಲ್ಲರತನು ಮನ ಧನದ ಸಹಾಯದಿಂದ ಯಶಸ್ವಿ : ಬೆಂತೂರ
ಶಿಗ್ಗಾವಿ 18 : 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ಕಾರಣೀಕರ್ತರಾದ ಕೊಡುಗೈ ದಾನಿಗಳು, ಪರಮ ಪೂಜ್ಯರು, ಎಲ್ಲಜನಪ್ರತಿನಿಧಿಗಳು, ಹಿರಿಯ ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕನ್ನಡ ಪರ, ರೈತಪರ ಹೋರಾಟಗಾರರು, ಎಲ್ಲ ಮಹಿಳಾ ಸಂಘಟನೆಗಳು, ಎಲ್ಲ ಇಲಾಖೆಯ ನೌಕರ ಭಾಂದವರು ಸೇರಿದಂತೆಎಲ್ಲರತನು ಮನ ಧನದ ಸಹಾಯದಿಂದ ಯಶಸ್ವಿಯಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನಾಗಪ್ಪ ಬೆಂತೂರ ಹೇಳಿದರು.
ಪಟ್ಟಣದ ಸಂಗನಬಸವ ವಿರಕ್ತಮಠದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಎಲ್ಲ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಅಚ್ಚುಕಟ್ಟಾಗಿ ತಮ್ಮ ಜವ್ದಾಬಾರಿಯನ್ನು ನಿಭಾಯಿಸಿದ್ದರ ಫಲವಾಗಿ 5 ನೇ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ಸಹಾಯವಾಯಿತು ಎಂದರು.ಗೌರವಕೋಶಾದ್ಯಕ್ಷ ಬಸವರಾಜ ಹೆಸರೂರ ಮಾತನಾಡಿ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ನಂತರ ಸಾಹಿತ್ಯ ಸಮ್ಮೇಳನ ಸಂಗ್ರಹವಾದ ಹಣದ ಲೆಕ್ಕ ಪತ್ರದಖರ್ಚು ವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು. ಸಮಾಜ ಸೇವಕ ಮಂಜುನಾಥ ಮಣ್ಣಣ್ಣವರ ಮಾತನಾಡಿ ವಿರಕ್ತಮಠ ಹಾಗೂ ಶ್ರೀಗಳು ಜನಪರ ಸಂಘಟನೆಗಳ ಆಶ್ರಯತಾಣ ಇವರ ಸ್ಪಂದನೆ ಸದಾ ಸ್ಮರಣೀಯ ಮತ್ತು ಸಾಹಿತ್ಯ ಪರಿಷತ್ತಕಚೇರಿಗೆ ಪ್ರತ್ಯೇಕ ನಿವೇಶನ ಮಂಜೂರು ಮಾಡಲು ಜನಪ್ರೀಯ ಶಾಸಕ ಯಾಸೀರಖಾನ ಪಠಾಣ ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ಸೂಚಿಸಬೇಕುಎಂದರು.
ನೌಕರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ, ಶಹರ ಅಧ್ಯಕ್ಷ್ಷೆ ಲಲಿತಾ ಹಿರೇಮಠ, ಕಾರ್ಯದರ್ಶಿ ರಮೇಶ ಹರಿಜನ, ರಮೇಶ ಸಾತಣ್ಣವರ ಮಾತನಾಡಿದರು.ಈ ಸಂದರ್ಭದಲ್ಲಿ ಸಿ.ವ್ಹಿ. ಮತ್ತಿಗಟ್ಟಿ, ಡಾ.ಸಿ.ಡಿ.ಯತ್ನಳ್ಳಿ,ವಿರುಪಾಕ್ಷಪ್ಪ ದುಂಡಪ್ಪನವರ ಸಿದ್ದಪ್ಪ ಮುಸಳಿ, ಎಂ.ಎನ್.ಬಾರಕೇರ, ಜಯಣ್ಣ ಹೆಸರೂರ, ಮಂಜುನಾಥ ಮಣ್ಣಣ್ಣವರ, ಅಶೋಕ ಕಾಳೆ, ಬಸಲಿಂಗಪ್ಪ ನರಗುಂದ, ಬಸವರಾಜ ಶಿಗ್ಗಾವಿ, ಮುತ್ತಣ್ಣಾಗುಡಗೇರಿ,ನಿಂಗಪ್ಪ ಬೆಂಚಳ್ಳಿ, ಮಲ್ಲಿಕಾರ್ಜುನಗೌಡ ಪಾಟೀಲ, ಪ್ರತಿಭಾಗಾಂಜಿ, ಸಂಜನಾರಾಯ್ಕರ, ವಿದ್ಯಾ ಮುಂಡಗೋಡ, ಚೈತ್ರಾ ಹುಳವಾರ, ಯಲಿಗಾರ, ಹನುಮಂತಪ್ಪ ಬಂಡಿವಡ್ಡರ, ಮಂಜುನಾಥ ನಾಯ್ಕೊಡಿ, ಶಂಭುಕೆರಿ, ಪ್ರಶಾಂತ ಪೋಲಿಸಗೌಡ್ರ, ಶಶಾಂಕ ಕೌಜಲಗಿ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.