ಮುಂಡಗೋಡ: ಬಿಜೆಪಿ ಅಧಿಕಾರಕ್ಕೆ ಬರಲು ಶಿವರಾಮ ಹೆಬ್ಬಾರ ತ್ಯಾಗ ಮಾಡಿದ್ದಾರೆ ನಾವು ಎಲ್ಲರೂ ಸಂಘಟಿತರಾಗಿ ಅವರನ್ನು ಗೆಲ್ಲಿಸಬೇಕಾಗಿದೆ. ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು.
ಅವರು ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಯಲ್ಲಾಪೂರದಲ್ಲಿನ ಮುಂಡಗೋಡ ರಸ್ತೆಯಲ್ಲಿರುವ ವಾಯ್.ಟಿಎಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೃಹತ್ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನ ಬಳವನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಅಭ್ಯಥರ್ಿ ಶಿವರಾಮ ಹೆಬ್ಬಾರ ಮಾತನಾಡಿ ಕಾಂಗ್ರೆಸ್ನಲ್ಲಿದ್ದಾಗ ಕ್ಷೇತ್ರದ ಅಭಿವೃದ್ದಿ ಕಾಣಲಿಲ್ಲ ಜನರ ಸೇವೆ ಮಾಡಲು ಯಡ್ಯೂರಪ್ಪ ನವರಿಂದ ಕನರ್ಾಟಕದಲ್ಲಿ ರಾಮರಾಜ್ಯ ನೋಡಲು ಸಾಧ್ಯ ಇದಕ್ಕಾಗಿ ನಾವು 17 ಜನ ಶಾಸಕರು ಕಾಂಗ್ರೆಸ್ ವನ್ನು ಬಿಟ್ಟು ಬಿಜೆಪಿ ಸೇರಿದೇವು ಎಂದರು.
ಅನಂತಕುಮಾರ ಹೆಗಡೆ ಮಾತನಾಡಿದ ರಾಮಮಂದಿರ ತೀಪರ್ು ಬಂದಾಗ ಮುಸಲ್ಮಾನರು ವಿರೋಧ ವ್ಯಕ್ತಪಡಿಸಲಿಲ್ಲ ಆದರೆ ಕಾಂಗ್ರೆಸ್ ಮಾತ್ರ ದೀಪಾವಳಿ ಆಚರಿಸಲಿಲ್ಲ ಎಂದರು ಈ ಸಂದರ್ಭದಲ್ಲಿ ಮುಜರಾಯಿ ಖಾತೆ ಸಚಿವ ಕೊಟಾ ಶ್ರೀನಿನಾಸ ಪೂಜಾರ, ವಾಕರಸಾಸಂ ಅಧ್ಯಕ್ಷ ವಿ.ಎಸ್.ಪಾಟೀಲ, ಸೊರಭಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ, ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಕಾರವಾರ ಕ್ಷೇತ್ರದ ವಿಧಾನ ಸಭಾ ಸದಸ್ಯ ರೂಪಾಲಿ ನಾಯಕ್, ಭಟ್ಕಳ ಶಾಸಕ ಸುನೀಲ ನಾಯ್ಕ ಹಳಿಯಾಳ ಮಾಜಿ ಶಾಸಕ ಸುನೀಲ ಹೆಗಡೆ. ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ ಹಾಗೂ ಕ್ಷೇತ್ರದ ಮೂರು ತಾಲೂಕಿನ ತಾಲೂಕ ಬಿಜೆಪಿ ಮಂಡಲದ ಅಧ್ಯಕ್ಷರು ಮುಂತಾದವರು ವೇದಿಕೆ ಮೇಲಿದ್ದರು. ಮುಂಡಗೋಡ ದಿಂದ ಫಣಿರಾಜ ಹದಳಗಿ, ಉಮೇಶ ಬಿಜಾಪುರ, ಸೇರಿದಂತೆ ಮುಸ್ಲೀಂ ಮುಖಂಡರಾದ ಮಹ್ಮದಗೌಸಅತ್ತಾರ, ಅಲ್ಲಿಖಾನ ಪಠಾಣ, ಮಹ್ಮದರಫೀಕ ಇನಾಮದಾರ, ಲತೀಫ ನಾಲ ಬಂದ ಮಹ್ಮದಶರೀಫ ಕರಿಂಸಾಬನವರ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಯಲ್ಲಾಪುರಕ್ಕೆ ಧಾವಿಸಿದ್ದರು.