ಕೊಚ್ಚಿ, 11- ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ
ಪ್ರವೇಶ ಕುರಿತಂತೆ ಪ್ರತಿಕ್ರಿಯಿಸಿರುವ ಸಿಪಿಎಂ ಪ್ರಧಾನ
ಕಾರ್ಯದರ್ಶಿ ಸೀತಾರಾಂ ಯಚೂರಿ, ಸಂವಿಧಾನ ಕಲ್ಪಿಸಿರುವ
ಸ್ವಾತಂತ್ರ್ಯವನ್ನು ವರ್ಣ ಅಥವಾ ಜಾತಿ, ಲಿಂಗ, ಧರ್ಮದ
ಆಧಾರದ ಮೇಲೆ ತಾರತಮ್ಯ ಮಾಡದೆ ಪ್ರತಿಯೊಬ್ಬರಿಗೂ ಕಲ್ಪಿಸಬೇಕು ಎಂಬುದು ತಮ್ಮ ಪಕ್ಷ
ನಿಲುವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇಗುಲ ಪ್ರವೇಶಿಸಲು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಿದ ಹೊರತು ಕೇರಳ ಸರ್ಕಾರದ ಮುಂದೆ ಅನ್ಯ ಮಾರ್ಗವಿಲ್ಲ ಎಂದು ಅವರು ಹೇಳಿದರು.ಸಂವಿಧಾನವನ್ನು ಒಪ್ಪಿಕೊಂಡು, ಸರ್ಕಾರ ಅದನ್ನು ಪಾಲಿಸಬೇಕು ಎಂದು ಕಾರ್ಯಕ್ರಮವೊಂದರ ಪಾಲ್ಗೊಂಡಿದ್ದ ಯೆಚೂರಿ, ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ವಿಚಾರದಲ್ಲಿ, ಬಿಜೆಪಿ
ಹಾಗೂ ಕಾಂಗ್ರೆಸ್ ಹತಾಶೆಯ
ನಿಲುವುಗಳನ್ನು ತೆಗೆದುಕೊಳ್ಳುತ್ತಿವೆ. ಸುಪ್ರೀಂ ಕೋರ್ಟ್ ತೀರ್ಪನ್ನು 7 ನ್ಯಾಯಮೂರ್ತಿಗಳ ವಿಸ್ತೃತ ನ್ಯಾಯಪೀಠ ಮರು ಪರಿಶೀಲನೆ ನಡೆಸುವಾಗ, ತೀರ್ಪಿನ
ತಾಂತ್ರಿಕ ಅಂಶಗಳನಷ್ಟೇ ಪರಾಮರ್ಶಿಸಬೇಕಾದ
ಅಗತ್ಯವಾಗಬಹುದು ಎಂದು ಯೆಚೂರಿ ಹೇಳಿದರು.