ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಶೇಷವಾಗಿ ಮಹಿಳೆಯರಿಗೆ ಮಾತ್ರ ಎರಡು ದಿನ ಅವಕಾಶ ನೀಡಲು ಕೇರಳ ಸಕರ್ಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕೇರಳ ಹೈಕೋಟರ್್ ಗೆ ಮಾಹಿತಿ ನೀಡಿದೆ.
ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋಟರ್್ ಆದೇಶ ನೀಡಿದರೂ ಈ ನಿಯಮ ಪಾಲನೆ ಈ ವರೆಗೂ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಎರಡು ದಿನವನ್ನು ಮಾತ್ರ ಮಹಿಳಾ ಭಕ್ತರ ಪ್ರವೇಶಕ್ಕೆಂದೇ ಮೀಸಲಿಡಲು ಸಿದ್ಧವಿರುವುದಾಗಿ ಕೇರಳ ಸಕರ್ಾರ, ರಾಜ್ಯ ಹೈಕೋರ್ಟ ಗೆ ಮಾಹಿತಿ ನೀಡಿದೆ.
ಪ್ರತಿಭಟನೆ ಹಿನ್ನಲೆಯಲ್ಲಿ ಇದೂವರೆಗೆ ಅಯ್ಯಪ್ಪ ದರ್ಶನ ಸಾಧ್ಯವಾಗ ಹಿನ್ನಲೆಯಲ್ಲಿ ಕೆಲ ಮಹಿಳೆಯರು ಕೇರಳ ಹೈಕೋರ್ಟನಲ್ಲಿ ಅಜರ್ಿ ಸಲ್ಲಿಸಿದ್ದರು.
ಅಜರ್ಿಯಲ್ಲಿ ಶಬರಿಮಲೆ ಸುತ್ತಮುತ್ತಲ ಪ್ರದೇಶದಿಂದ ಪ್ರತಿಭಟನಾನಿರತರನ್ನು ತೆರವುಗೊಳಿಸಬೇಕು. ಮಹಿಳೆಯರ ಪ್ರವೇಶಕ್ಕೆ ವಿಶೇಷ ಭದ್ರತೆಯೊದಗಿಸಬೇಕೆಂದು ಕೇಳಿದ್ದರು. ಮಹಿಳೆಯರ ಪ್ರವೇಶಕ್ಕೆಂದೇ 3 ದಿನ ಮೀಸಡಬೇಕೆಂದೂ ಕೂಡ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇರಳ ಸಕರ್ಾರ, 3 ದಿನ ಮೀಸಲಿಡಲು ಸಾಧ್ಯವಿಲ್ಲ. 2 ದಿನವನ್ನು ಮಹಿಳೆಯರಿಗೆ ಅವಕಾಶ ನೀಡಲು ಸಿದ್ಧ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ, ಈ ಸಂಬಂಧ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸಕರ್ಾರಕ್ಕೆ ಸೂಚನೆ ನೀಡಿದೆ.