ಪಟ್ಟಣಂತಿಟ್ಟ, ನ ೩೦ -ವಾರ್ಷಿಕ ಶಬರಿಮಲೆ ಯಾತ್ರೆ ಆರಂಭವಾಗಿದ್ದು, ಮೊದಲ ಹತ್ತು ದಿನಗಳಲ್ಲಿ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ೩೯ ಕೋಟಿ ರೂಪಾಯಿ ಆದಾಯವಾಗಿದೆ.
ಇದೇ ಅವಧಿಯಲ್ಲಿ ಕಳೆದ ವರ್ಷ ೨೧.೧೨ ಕೋಟಿ ರೂ. ಆದಾಯವಾಗಿತ್ತು ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್ ವಾಸು ಹೇಳಿದ್ದಾರೆ.
ಹುಂಡಿ ಸಂಗ್ರಹವು ೧೩.೭೬ ಕೋಟಿ ರೂ.ಗಳಾಗಿದ್ದು, ೨೦೧೮ ರಲ್ಲಿ ಇದೇ ಅವಧಿಯಲ್ಲಿ ಗಳಿಸಿದ ೮.೩೪ ಕೋಟಿ ರೂ. ಆದಾಯವಾಗಿದೆ.ದೇವಾಲಯಕ್ಕೆ ವಾರಾಂತ್ಯದಲ್ಲಿ ಯಾತ್ರಾರ್ಥಿಗಳ ಹರಿವು ಹೆಚ್ಚಾಗಿದೆ ಎಂದು ವಾಸು ಹೇಳಿದ್ದಾರೆ.