ಬೆಳಗಾವಿ, 14: ಈ ಭಾಗದ ಜನರಿಗೆ ಒಳ್ಳೆಯ ಆಸ್ಪತ್ರೆಯ ಸೇವೆಗಳು ದೊರೆಯಬೇಕೆಂಬ ಬಹುದಿನಗಳಿಂದ ಕಂಡ ಕನಸನ್ನು ಬೆಳಗಾವಿ ನಗರಕ್ಕೆ 290 ಹಾಸಿಗೆಗಳ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸುವ ಮೂಲಕ ನನಸಾಗಿ ಮಾಡಲಾಗುವು ಎಂದು ಅರಣ್ಯ ಹಾಗೂ ಪರಿಸರ ವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾಕಿರಹೊಳಿ ಹೇಳಿದರು.
ಸೋಮವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೂಪರ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿ ಪರಿಶೀಲಿಸಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನೀಯರಿಂಗ ಘಟಕದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳಿಯ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ನಿವಾರಿಸಿ ಆಸ್ಪತ್ರೆಯನ್ನು ಮಾದರಿಯಾಗಿ ಮಾಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡಲು ಪ್ರಯತ್ನಿಸುತ್ತೆನೆ ಎಂದು ತಿಳಿಸಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿದರ್ೇಶಕ ಎಸ್.ಟಿ.ಕಳಸದ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯಲ್ಲಿ 54 ಭೋದಕರು ಹಾಗೂ 314 ಭೋಧಕೇತರ ಹುದ್ದೆಗಳ ಸೃಜನೆ ಹಾಗೂ ಇತರೆ ಮೂಲಭೂತ ಸೌಲಭ್ಯ ಸೇರಿದಂತೆ ಅಂದಾಜು ವೆಚ್ಚ 599 ಲಕ್ಷ ಮೊತ್ತದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಫಾಸ್ಟಟ್ರ್ಯಾಕ್ ಕ್ಯಾಂಟೀನ, ಹಣ್ಣು ಹಾಗೂ ಹಾಲಿನ ಮಳಿಗೆಗಳನ್ನು ನಿಮರ್ಾಣ ಮಾಡಲಾಗಿದ್ದು, ಸಾರ್ವಜನಿಕ ಸೇವಾ ಸೌಲಭ್ಯಕ್ಕೆ ಒದಗಿಸಲಾಗಿವದು ಮತ್ತು ಬಿಮ್ಸ್ ಸಂಸ್ಥೆಗೆ ಅವಶ್ಯವಿರುವ ಎಂ.ಆರ್..ಆಯ್ ಯಂತ್ರವನ್ನು ಸ್ಥಾಪಿಸುವ ಪೂರ್ವಬಾವಿ ಸಿದ್ದತೆ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಸ್ಕೂಲ್ ಆಫ್ ನಸರ್ಿಂಗ್ ಕಟ್ಟಡಕ್ಕಾಗಿ 5 ಕೋಟಿ ರೂ. ವಸತಿ ಗೃಹ ನಿಮರ್ಾಣಕ್ಕಾಗಿ 3.5 ಕೋಟಿ ಒಟ್ಟು 8.5 ಕೋಟಿ ರೂ ಮಂಜೂರಾಗಿದೆ ಎಂದು ಹೇಳಿದರು.
ಉಪಮಹಾಪೌರರಾದ ಮದುಶ್ರೀ ಪುಜಾರ, ವೀರಕುಮಾರ ಪಾಟೀಲ, ಬಿಮ್ಸ್ ಸಂಸ್ಥೆಯ ವೈದ್ಯಕೀಯ ಅಧಿಕ್ಷಕ ಡಾ.ವಿನಯ ದಾಸ್ತಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಹುಸೇನಸಾಹೇಬ ಖಾಜಿ ಸ್ವಾಗತಿಸಿದರು. ಬಿಮ್ಸ್ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಎನ್ ಸರಸ್ವತಿ ವಂದನಾರ್ಪಣೆ ಸಲ್ಲಿಸಿದರು.