ಬೆಂಗಳೂರು, ಫೆ 18, ಇತ್ತೀಚಿನ ವರ್ಷಗಳಲ್ಲಿ ಚಂದನವನ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂಬ ಹೆಮ್ಮೆ ಕನ್ನಡಿಗರಿಗೆ ಇದ್ದರೂ ಸಹ, ಅನೇಕ ವಿಚಾರಗಳಿಗಾಗಿ ಗೊಂದಲದ ಗೂಡಾಗಿ, ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ ಆದರೆ ಈ ಎಲ್ಲಾ ಸಮಸ್ಯೆಗಳ ಸೃಷ್ಟಿಯ ಮೂಲವನ್ನು ಅಪ್ಪಿಕೊಂಡವರು ಇಂದು ಅದೇ ಸಮಸ್ಯೆಯ ಬಲೆಯಲ್ಲಿ ಸಿಲುಕುವಂತಾಗಿರುವುದು ವಿಪರ್ಯಾಸ ಸ್ಯಾಂಡಲ್ ವುಡ್ ನಲ್ಲಿ ವಾರಕ್ಕೆ 8 ರಿಂದ 10 ಚಿತ್ರಗಳಂತೆ ಪ್ರತಿವರ್ಷ 200ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಯಾವ ಚಿತ್ರ ವೀಕ್ಷಿಸಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕರಿದ್ದರೆ, ಹಾಕಿದ ಬಂಡವಾಳ ವಾಪಸ್ ಬರುತ್ತಿಲ್ಲ, ಥಿಯೇಟರ್ ಗಳ ಕೊರತೆ ಇದೆ ಜತೆಗೆ ರೇಟಿಂಗ್ ಭೂತ ಕಾಡುತ್ತಿದೆ ಎಂಬುದು ನಿರ್ದೇಶಕ, ನಿರ್ಮಾಪಕರ ಅಳಲು ಕಳೆದ ವಾರವಷ್ಟೆ ನಿರ್ಮಾಪಕ, ನಿರ್ದೇಶಕ ಗುರುದೇಶಪಾಂಡೆ ನಿರ್ಮಾಣದ ಜಂಟಲ್ ಮ್ಯಾನ್ ಚಿತ್ರವನ್ನು ಥಿಯೇಟರ್ ನಲ್ಲಿ ಉಳಿಸಿ, ಉತ್ತಮ ಚಿತ್ರಗಳನ್ನು ಕಿತ್ತೆಸೆಯಬೇಡಿ ಎಂದು ಮನವಿ ಮಾಡಿದ್ದರು ಇದೀಗ ಸಾಗುತ ದೂರ ದೂರ’ ಚಿತ್ರದ ನಿರ್ದೇಶಕ ರವಿತೇಜ, ;ಬುಕ್ ಮೈ ಶೋ’ ರೇಟಿಂಗ್ ಭೂತದಂತೆ ಕಾಡುತ್ತಿದೆ ಪ್ರೇಕ್ಷಕರು ಚಿತ್ರಮಂದಿರದಲ್ಲಿದ್ದರೂ ರೇಟಿಂಗ್ ಕಡಿಮೆ ಕೊಡುತ್ತಾರೆ ಅವರ ಕೈ ‘ಬಿಸಿ’ ಮಾಡಿದರೆ ಚಿತ್ರಮಂದಿರ ಖಾಲಿ ಹೊಡೆಯುತ್ತಿದ್ದರೂ, 99 ಪರ್ಸೆಂಟ್ ರೇಟಿಂಗ್ ನೀಡಿರುತ್ತಾರೆ.
ಜತೆಗೆ ಗಾಂಧಿನಗರದ ಮಾಫಿಯಾ ಬಲೆಯಲ್ಲಿ ಸಿಲುಕುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು “ಸಾಗುತ ದೂರ ದೂರ ತಾಯಿ, ಮಗನ ಬಾಂಧವ್ಯ ಸಾರುವ ಅತ್ಯುತ್ತಮ ಚಿತ್ರ ಜನರು ಮೆಚ್ಚಿದ್ದಾರೆ ಆದಾಗ್ಯೂ ರೇಟಿಂಗ್ ನೀಡುತ್ತಿಲ್ಲ ಯಾವುದೋ ರಾಜ್ಯದವರು ಕನ್ನಡ ಚಿತ್ರರಂಗದ ಜುಟ್ಟು, ಜನಿವಾರ ಹಿಡಿದುಕೊಂಡು ಆಟವಾಡುತ್ತಿದ್ದಾರೆ ನಿರ್ಮಾಪಕರೆಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡಬೇಕು, ನಮ್ಮದೇ ಆದ ಆಪ್ ಸಿದ್ಧಪಡಿಸಬೇಕು” ಎಂದರು “ಸಾಗುತ ದೂರ ದೂರ ಚಿತ್ರ ಚೆನ್ನಾಗಿದೆ ನಾಯಕ ನಟನ ಸ್ಥಾನದಲ್ಲಿ ಸ್ಟಾರ್ ನಟ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತ ಕೆಲವರು ಹೇಳ್ತಾರೆ ಆದರೆ ಅವಕಾಶವೇ ಸಿಗದೆ ನಟ ಸ್ಟಾರ್ ಆಗೋದು ಹೇಗೆ? ಇಷ್ಟಕ್ಕೂ ಯಾವುದೇ ನಟ ಸ್ವತಃಬ ಸ್ಟಾರ್ ಆಗೋಕೆ ಆಗಲ್ಲ, ಜನರು ಸ್ಟಾರ್ ಮಾಡ್ಬೇಕು” ಎಂದು ನೋವು ತೋಡಿಕೊಂಡರುಯಾವುದೇ ಕಾರಣಕ್ಕೂ ರೇಟಿಂಗ್ ಭೂತದ ವಿರುದ್ಧ ಹೋರಾಟ ಮುಂದುವರಿಸದೇ ಬಿಡುವುದಿಲ್ಲ, ಚಿತ್ರ ಉಳಿಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ “ಬುಕ್ ಮೈ ಶೋ ಹೆಸರಿನಲ್ಲಿ ಯಾರ್ ಯಾರೋ ಬ್ಲಾಕ್ ಮೇಲ್ ಮಾಡ್ತಿದ್ದಾರೆ 40 ಸಾವಿರ ಕೊಡಿ ರೇಟಿಂಗ್ ಕೊಡ್ತೀವಿ ಅಂತಾರೆ ಹೀಗಾದ್ರೆ ಯಾರ್ ಯಾರಿಗೆ ಅಂತ ದುಡ್ಡು ಕೊಡೋದು´ಅಂದ್ರು ರೇಟಿಂಗ್ ನೋಡಿಕೊಂಡು ಬರುವ ಒಂದಷ್ಟು ಪ್ರೇಕ್ಷಕ ವರ್ಗವಿದ್ದು, ಇವರ ಸಂಖ್ಯೆ ಹೆಚ್ಚುತ್ತಿದ್ದೆ ಇದನ್ನೇ ಎನ್ ಕ್ಯಾಷಚ್ ಮಾಡಿಕೊಳ್ಳಲು ಕೆಲವರು ಹೊಂಚುತ್ತಿದ್ದಾರೆ ಎಷ್ಟೋ ನಿರ್ಮಾಪಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿರುವಾಗ ಮಾಡುವುದಾದರೂ ಏನು? ಎಲ್ಲ ನಿರ್ಮಾಪಕ, ನಿರ್ದೇಶಕರು ಒಟ್ಟಾಗಿ ಸೇರಿ ಒಂದು ನಿರ್ಣಯಕ್ಕೆ ಬರುವ ತನಕ ಈ ಸಮಸ್ಯೆಗೆ ಪರಿಹಾರ ಖಂಡಿತ ಸಿಗೋದಿಲ್ಲ, ರವಿತೇಜನಂತಹ ನಿರ್ದೇಶಕರು, ಮಹೇಶ್ ನಂತಹ ನಟರು ಕಣ್ಣೀರು ಹಾಕೋದು ನಿಲ್ಲೋದಿಲ್ಲ ಏನಂತೀರೀ?